ಜಬಲ್ಪುರ(ಮಧ್ಯಪ್ರದೇಶ): ಜಬಲ್‌ಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಂತೋಷ್ ಪೌಲ್ ಅವರ ಮನೆ ಸೇರಿದಂತೆ ಅವರಿಗೆ ಸೇರಿದ ಎಲ್ಲಾ ಜಾಗಗಳ ಮೇಲೆ ಬುಧವಾರ ತಡರಾತ್ರಿ EOW (ಆರ್ಥಿಕ ಅಪರಾಧಗಳ ಸೆಲ್) ದಾಳಿ ನಡೆಸಿದ್ದು, ಸಂತೋಷ್ ಪೌಲ್ ಮತ್ತು ಅವರ ಪತ್ನಿ ಆದಾಯದಿಂದ 650ಕ್ಕೂ ಹೆಚ್ಚು ಪಟ್ಟು ಆಸ್ತಿ ಬಹಿರಂಗವಾಗಿದೆ. EOW ತಂಡಗಳು ಏಕಕಾಲದಲ್ಲಿ ಶತಾಬ್ದಿಪುರಂನಲ್ಲಿರುವ ಪೌಲ್ ಅವರ ಐಷಾರಾಮಿ ಮನೆ ಮತ್ತು ಗರ್ಹಾ ಫಾಟಕ್‌ನಲ್ಲಿರುವ ಅವರ ಪೂರ್ವಜರ ಮನೆಯ ಮೇಲೆ ದಾಳಿ ನಡೆಸಿವೆ.
ಸಂತೋಷ್ ಪಾಲ್ ಸುಮಾರು 4 ವರ್ಷಗಳಿಂದ ಜಬಲ್ಪುರ ಆರ್ಟಿಓದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಪತ್ನಿ ರೇಖಾ ಪೌಲ್ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಗುಮಾಸ್ತ ಹುದ್ದೆಯಲ್ಲಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಧೀರಜ್ ಕುಕ್ರೇಜಾ ಮತ್ತು ಸ್ವಪ್ನಿಲ್ ಸರ್ರಾಫ್ ಅವರು ಸಂತೋಷ್ ಪೌಲ್ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಇಒಡಬ್ಲ್ಯೂ ಇನ್‌ಸ್ಪೆಕ್ಟರ್ ಸ್ವರಂಜಿತ್ ಸಿಂಗ್ ಧಾಮಿ ದೂರನ್ನು ಪರಿಶೀಲಿಸಿದ್ದಾರೆ. ಪರಿಶೀಲನೆಯಲ್ಲಿ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇಒಡಬ್ಲ್ಯು ತಂಡವು ಬುಧವಾರ ತಡರಾತ್ರಿ ಸಂತೋಷ್ ಪೌಲ್ ಅವರ ಮನೆ ಮೇಲೆ ದಾಳಿ ನಡೆಸಿತು. ಮಧ್ಯರಾತ್ರಿಯವರೆಗೂ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲಾಗಿದೆ.
ಅದದಲ್ಲದೆ ಅವರ ಅನೇಕ ಸಂಬಂಧಿಕರು ಆರ್‌ಟಿಒದ ವಿವಿಧ ಕಾಮಗಾರಿಗಳಲ್ಲಿ ಗುತ್ತಿಗೆ ಮತ್ತು ಪಾಲುದಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಂತೋಷ್ ಪೌಲ್ ವಿರುದ್ಧ ನಕಲಿ ಜಾತಿ ಪ್ರಮಾಣಪತ್ರ, ಗಾಂಜಾ ಮಾರಾಟದ ಸುಳ್ಳು ಆರೋಪದ ಮೇಲೆ ಆಟೋ ಚಾಲಕನನ್ನು ಸಿಲುಕಿಸುವುದಾಗಿ ಬೆದರಿಕೆ ಹಾಕುವುದು, ವಿಐಪಿ ಸಂಖ್ಯೆಗಳ ನೋಂದಣಿ, ಪರವಾನಗಿ, ಪರ್ಮಿಟ್ ಸೇರಿದಂತೆ ಮನಬಂದಂತೆ ಶುಲ್ಕ ವಸೂಲಿ, ಕಮಿಷನ್ ಪಡೆಯುವುದು ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.
ಎಆರ್‌ಟಿಒ ಹುದ್ದೆಯಲ್ಲಿದ್ದುಕೊಂಡೇ ಸಂತೋಷ್ ಪೌಲ್ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿದ್ದು, ಈ ಸಂಬಂಧ ಇಒಡಬ್ಲ್ಯುನಲ್ಲಿ ದೂರು ದಾಖಲಾಗಿತ್ತು. ಇದರೊಂದಿಗೆ ನ್ಯಾಯಾಲಯದಲ್ಲಿ ಅರ್ಜಿಯನ್ನೂ ಸಲ್ಲಿಸಲಾಗಿತ್ತು.
5 ಕೋಟಿಗೂ ಹೆಚ್ಚು ಆಸ್ತಿ ಪತ್ತೆ: ಈವರೆಗೆ ಪತ್ತೆಯಾಗಿರುವ ಆಸ್ತಿಯ ಮೌಲ್ಯ ಸುಮಾರು 5 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ತಂಡವು ಅವರ ವಿರುದ್ಧ ಸೆಕ್ಷನ್ 13 (1) ಬಿ, 13 (2) 1988 ಭ್ರಷ್ಟಾಚಾರ ತಿದ್ದುಪಡಿ ಕಾಯ್ದೆ 2018ರ ಅಡಿಯಲ್ಲಿ ಅಪರಾಧವನ್ನು ದಾಖಲಿಸಿ ತನಿಖೆಗೆ ತೆಗೆದುಕೊಂಡಿದೆ.
ಇದನ್ನೂ ಓದಿ : ಸಿನಿಮಾ ನಟಿಯರಂತೆ ಆಭರಣ ಧರಿಸುವ ಆಸೆ: 26ಕ್ಕೂ ಹೆಚ್ಚು ಕಳ್ಳತನ ಪ್ರಕರಣದಲ್ಲಿ ಮಹಿಳೆ ಬಂಧನ