ವಡೋದರಾ(ಗುಜರಾತ್) : ಕೊರೊನಾ ವೈರಸ್ನ ರೂಪಾಂತರಿ ತಳಿ ಎಕ್ಸ್ಇ ಇದೀಗ ಗುಜರಾತ್ನಲ್ಲೂ ಪತ್ತೆಯಾಗಿದೆ. 67 ವರ್ಷದ ವೃದ್ಧನಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಲ್ಯಾಬ್ ವರದಿಯಲ್ಲೂ ಪಾಸಿಟಿವ್ ಇರುವುದು ಪತ್ತೆಯಾಗಿದೆ. ಕೊರೊನಾ ಎಕ್ಸ್ಇ ಸೋಂಕು ಈಗಾಗಲೇ ಮುಂಬೈನಲ್ಲಿ ಕಾಣಿಸಿಕೊಂಡಿತ್ತು.
ಇದರ ಬೆನ್ನಲ್ಲೇ ಗುಜರಾತ್ನಲ್ಲೂ ಮತ್ತೊಂದು ಕೇಸ್ ದಾಖಲಾಗಿದೆ. ಆದರೆ, ಒಮ್ರಿಕಾನ್ ಸೋಂಕಿನಷ್ಟು ತೀವ್ರತೆ ಇದರಲ್ಲಿ ಕಾಣಿಸಿಲ್ಲ ಎಂದು ವರದಿಯಿಂದ ತಿಳಿದು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಈ ವ್ಯಕ್ತಿ ಮುಂಬೈನಿಂದ ಗುಜರಾತ್ಗೆ ಬಂದಿದ್ದಾಗಿ ತಿಳಿದು ಬಂದಿದೆ.
ಇದನ್ನೂ ಓದಿ: ವರದಕ್ಷಿಣೆ ನೀಡುವಂತೆ ಒತ್ತಾಯಿಸಿ ಪತ್ನಿಯನ್ನೇ ಕೊಂದ ಪತಿ!
ವಡೋದರಾದ ಗೋತ್ರಿ ಆಸ್ಪತ್ರೆಯಲ್ಲಿ 67 ವರ್ಷದ ವೃದ್ಧನಿಗೆ ಚಿಕಿತ್ಸೆ ನೀಡಲಾಗ್ತಿದೆ. ಇದೀಗ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆರೋಗ್ಯಾಧಿಕಾರಿ ಡಾ. ದೇವೇಶ್ ಪಟೇಲ್, ಮಹಾರಾಷ್ಟ್ರದ ಮುಂಬೈನಿಂದ 67 ವರ್ಷದ ವ್ಯಕ್ತಿ ಮಾರ್ಚ್ 12ರಂದು ವಡೋದರಾಕ್ಕೆ ಬಂದಿದ್ದರು. ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಅವರ ಮಾದರಿ ಲ್ಯಾಬ್ಗೆ ಕಳುಹಿಸಲಾಗಿದ್ದು, ಸೋಂಕು ಇರುವುದು ಪತ್ತೆಯಾಗಿದೆ ಎಂದಿದ್ದಾರೆ.