ತಮಿಳುನಾಡು: ತಂಜಾವೂರು ಜಿಲ್ಲೆಯ ಅಝಿವೈಕಲ್ ಗ್ರಾಮದ ದೃಷ್ಟಿ ವಿಕಲಚೇತನ ರವಿಚಂದ್ರನ್ (55) ಎಂಬುವವರು ಟಿಎನ್‌ಪಿಎಸ್‌ಸಿ ಗ್ರೂಪ್ 2 ಪೂರ್ವಭಾವಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿ ಹಲವು ಕಡೆ ಗಮನ ಸೆಳೆದಿದ್ದಾರೆ.
ರವಿಚಂದ್ರನ್ ಅವರು 1990 ರಲ್ಲಿ ಬಿಎಸ್ಸಿ ಗಣಿತ ಪೂರ್ಣಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಕೃಷಿ ಕಾರ್ಮಿಕರಾಗಿದ್ದು, ರಾಜೀವ್ ಗಾಂಧಿ ಅವರ 100 ದಿನದ ಉದ್ಯೋಗ ಯೋಜನೆಯಡಿ ಕೂಲಿ ಕೆಲಸ ಮಾಡುವ ಮೂಲಕ ತಮ್ಮ ಅಗತ್ಯಗಳನ್ನು ಪೂರೈಸಿಕೊಂಡಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಸಹಾಯ ಮಾಡಲು ಹಲವಾರು ಕೆಲಸಗಳನ್ನು ಕೂಡಾ ಮಾಡುತ್ತಿದ್ದಾರೆ.
ಈ ವೇಳೆ, ಸರ್ಕಾರಿ ಕೆಲಸಕ್ಕೆ ಸೇರಿ ಬಡವರು, ನಿರ್ಗತಿಕರಿಗೆ ನೆರವಾಗುವ ಯೋಚನೆ ಬಂತು ಎನ್ನುತ್ತಾರೆ ರವಿಚಂದ್ರನ್. ಇದಕ್ಕಾಗಿ ಟಿಎನ್ ಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧರಿಸಿ ಗ್ರೂಪ್ 2 ಪರೀಕ್ಷೆಗೆ ತಯಾರಿ ನಡೆಸಿದ್ದರು. ಕೋಚಿಂಗ್ ಸೆಂಟರ್ಗೆ ಹೋಗಿ ಓದುವ ಸೌಲಭ್ಯ ಇಲ್ಲದ ಕಾರಣ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಖರೀದಿಸಿ ಓದಿದ್ದಾರೆ.
ಈ ಬಗ್ಗೆ ಸಹೋದ್ಯೋಗಿ ಪದ್ಮಾವತಿ (65) ಅವರು ಮಾತನಾಡಿ, ರವಿಚಂದ್ರನ್ ಅವರು ಪುಸ್ತಕಗಳನ್ನು ಗಟ್ಟಿಯಾಗಿ ಕೇಳುವ ಮೂಲಕ ಮತ್ತು ಅವುಗಳನ್ನು ಕಂಠಪಾಠ ಮಾಡುವ ಮೂಲಕ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಅದನ್ನು ಒಮ್ಮೆ ಕೇಳಿ ಮನನ ಮಾಡಿಕೊಳ್ಳುವ ಸಾಮರ್ಥ್ಯ ಅವರಿಗಿದೆ ಎಂದಿದ್ದಾರೆ.
ಮೇ 21ರಂದು ನಡೆದ ಗ್ರೂಪ್ II ಪರೀಕ್ಷೆಯಲ್ಲಿ ಸಹಾಯಕರೊಬ್ಬರ ಸಹಾಯದಿಂದ ಪರೀಕ್ಷೆ ಬರೆದಿದ್ದರು. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ ಪ್ರಕಟವಾದ ಪರೀಕ್ಷಾ ಫಲಿತಾಂಶದಲ್ಲಿ ರವಿಚಂದ್ರನ್ ತೇರ್ಗಡೆಯಾಗಿದ್ದಾರೆ ಎಂಬ ಮಾಹಿತಿ ಅವರಿಗಷ್ಟೇ ಅಲ್ಲ ಹಳ್ಳಿಗರಲ್ಲಿಯೂ ಅಚ್ಚರಿ ಮೂಡಿಸಿದೆ. ಇದರ ಬೆನ್ನಲ್ಲೇ ಮುಂದಿನ ಮೇನ್ಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ.
ಓದಿ: NEET Results 2022.. ನೀಟ್ ಪರೀಕ್ಷೆಯಲ್ಲಿ ಟ್ರಕ್ ಚಾಲಕನ ಅವಳಿ ಮಕ್ಕಳ ಸಾಧನೆ