ಮುಂಬೈ: ಐಸಿಐಸಿಐ ಬ್ಯಾಂಕ್ ಮಾಜಿ ಸಿ.ಇ.ಒ ಮತ್ತು ಮಾಜಿ ಎಂ.ಡಿ ಚಂದಾ ಕೊಚ್ಚರ್ ಹಾಗೂ ಇತರರ ವಿರುದ್ಧ ಅಕ್ರಮ ಹಣ ಸಂಪಾದನೆ ಪ್ರಕರಣದ ವಿಚಾರಣೆಯನ್ನು ಮುಂದುವರಿಸಲು ಜಾರಿ ನಿರ್ದೇಶನಾಲಯ ಸಲ್ಲಿಸಿದ ವಿಷಯಗಳು ಸಾಕಷ್ಟಿವೆ ಎಂದು ವಿಶೇಷ ಪಿಎಂಎಲ್ಎ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜನವರಿ 30ರಂದು, ಮನಿ ಲಾಂಡರಿಂಗ್ ತಡೆ ಕಾಯ್ದೆಯ ವಿಶೇಷ ನ್ಯಾಯಾಲಯವು ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್, ವಿಡಿಯೋಕಾನ್ ಗ್ರೂಪ್ ಪ್ರವರ್ತಕ ವೇಣುಗೋಪಾಲ್ ಧೂತ್ ಮತ್ತು ಇತರ ಆರೋಪಿಗಳಿಗೆ ಇಡಿ ಚಾರ್ಜ್‌ಶೀಟ್‌ನ ನಂತರ ಸಮನ್ಸ್ ನೀಡಿತ್ತು.
ಬುಧವಾರ ಲಭ್ಯವಾದ ಆದೇಶದಲ್ಲಿ, ನ್ಯಾಯಾಧೀಶ ಎ.ಎ. ನಂದಗೋಂಕರ್, "ಪಿಎಂಎಲ್‌ಎ ಅಡಿಯಲ್ಲಿ ದಾಖಲಾದ ಸಲ್ಲಿಕೆಗಳು, ಲಿಖಿತ ದೂರುಗಳು ಮತ್ತು ಹೇಳಿಕೆಗಳ ನಂತರ, ಚಂದಾ ಕೊಚ್ಚಾರ್ ಆರೋಪಿ ಧೂತ್ ಅಥವಾ ವಿಡಿಯೋಕಾನ್‌ಗೆ ಸಾಲ ನೀಡುವಲ್ಲಿ ತನ್ನ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ತೋರುತ್ತದೆ ಎಂದಿದ್ದಾರೆ.
"ಚಂದಾ ಕೊಚ್ಚಾರ್ ತನ್ನ ಪತಿಯ ಮೂಲಕ ವಿವಿಧ ಕಂಪನಿಗಳ ಮೂಲಕ ಅಕ್ರಮ ಹಾಗೂ ಅನಗತ್ಯ ಅಸ್ತಿಗಳನ್ನು ಪಡೆದಿದ್ದಾರೆ" ಎಂದು ನ್ಯಾಯಾಧೀಶರು ಹೇಳಿದರು.
ಎಲ್ಲಾ ಆರೋಪಿಗಳನ್ನು ಫೆಬ್ರವರಿ 12ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಕೋರಲಾಗಿದೆ.