ನಾಸಿಕ್ (ಮಹಾರಾಷ್ಟ್ರ): ನಾಸಿಕ್‌ನ ರೈತರೊಬ್ಬರು ದ್ರಾಕ್ಷಿ ತೋಟದಲ್ಲಿ ಹೋಟೆಲ್ ಸ್ಥಾಪಿಸಿದ್ದಾರೆ. ಈ ಹೋಟೆಲ್‌ನಲ್ಲಿ ಸಿಗುವ ಮಸಾಲೆಯುಕ್ತ ಮಿಸಾಲ್ ಪಾವ್ ಸವಿಯಲು ದೂರದೂರುಗಳಿಂದ ಮಿಸಾಲ್ ಪ್ರಿಯರು ಬರುತ್ತಿದ್ದಾರೆ. ನಾಸಿಕ್ ಅನ್ನು ದ್ರಾಕ್ಷಿಗಳ ಹಬ್ ಎಂದು ಕರೆಯಲಾಗುತ್ತದೆ. ಗ್ರೇಪ್ಸ್ ಎಂಬಸಿ ಎಂಬ ಹೋಟೆಲ್ ನಾಸಿಕ್‌ನ ಮಖ್ಮಲಾಬಾದ್ ರಸ್ತೆಯಲ್ಲಿದೆ.
ನಾಸಿಕ್ ನಿವಾಸಿಗಳಿಗಾಗಿ ಮತ್ತು ಮಿಸಾಲ್ ಪ್ರೇಮಿಗಳಿಗಾಗಿ ನೂರಾರು ಮಿಸಾಲ್ ಹೋಟೆಲ್‌ಗಳಿವೆ. ಇದನ್ನು ಮನಗಂಡ ರೈತ ಕಿರಣ ಪಿಂಗಳೆ ಅವರು ವಿನೂತನ ಪರಿಕಲ್ಪನೆಯೊಂದಿಗೆ ನಿಸರ್ಗದಲ್ಲಿ ಹೋಟೆಲ್ ನಿರ್ಮಿಸಿದ್ದಾರೆ. ಮಿಸಾಲ್ ಕೂಡ ಲಭ್ಯವಿದ್ದು, ಇದಲ್ಲದೇ ದ್ರಾಕ್ಷಿ, ಒಣದ್ರಾಕ್ಷಿಗಳಂತಹ ನವೀನ ಖಾದ್ಯಗಳು ಸಹ ಇಲ್ಲಿ ದೊರೆಯುತ್ತವೆ.

ನಾಸಿಕ್ ನಗರದ ದ್ರಾಕ್ಷಿತೋಟ, ಸಿಲ್ವರ್ ಓಕ್ ಮರಗಳಿಂದ ಆವೃತವಾದ ಪೆರುವಿನ ಉದ್ಯಾನದಲ್ಲಿ ಆರಂಭವಾದ ಹೋಟೆಲ್ ವ್ಯಾಪಾರಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದ್ರಾಕ್ಷಿತೋಟದಲ್ಲಿ ಮಿಸಲ್ ಪರಿಕಲ್ಪನೆಯನ್ನು ಕೃಷಿಗೆ ಪೂರಕ ಉದ್ಯೋಗವಾಗಿ ಪರಿಚಯಿಸಲಾಗಿದೆ.
ನಾಸಿಕ್ ನಿವಾಸಿಗಳು ಮಾತ್ರವಲ್ಲದೇ ಹೊರಗಿನ ಗ್ರಾಹಕರೂ ಇಲ್ಲಿಗೆ ಬರುತ್ತಾರೆ. ಇನ್ನೊಂದು ವಿಶೇಷ ಏನೆಂದರೇ ಸೇನೆಯಲ್ಲಿರುವವರಿಗೆ ಶೇ.50ರಷ್ಟು ರಿಯಾಯಿತಿಯನ್ನೂ ಇಲ್ಲಿ ನೀಡಲಾಗುತ್ತದೆ.