ಸಿಧ್ರಾ(ಜಮ್ಮು ಕಾಶ್ಮೀರ): ಜಮ್ಮು ಜಿಲ್ಲೆಯ ಸಿಧ್ರಾ ಪ್ರದೇಶದಲ್ಲಿ ಇಂದು ಬೆಳಗ್ಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರ ಸದ್ದಡಗಿಸಲಾಗಿದೆ. ಭಯೋತ್ಪಾದಕರು ಟ್ರಕ್ನಲ್ಲಿ ಸಾಗುತ್ತಿದ್ದ ವೇಳೆ ತಡೆದು ನಿಲ್ಲಿಸಿದಾಗ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರತಿದಾಳಿ ನಡೆಸಿದ ಸೇನಾಪಡೆ ನಾಲ್ವರನ್ನು ಹೊಡೆದುರುಳಿಸಿದ್ದಾರೆ.
ಸಿಧ್ರಾದಲ್ಲಿ ಟ್ರಕ್ ಅನುಮಾನಾಸ್ಪದವಾಗಿ ಚಲಿಸುತ್ತಿದ್ದಾಗ ಅದನ್ನು ತಡೆದು ಪರಿಶೀಲನೆಗೆ ಮುಂದಾದೆವು. ಟ್ರಕ್ ಚಾಲಕ ಪರಾರಿಯಾದ. ಅದರಲ್ಲಿದ್ದ ಉಗ್ರರು ಗುಂಡು ಹಾರಿಸಲು ಶುರು ಮಾಡಿದರು. ಬಳಿಕ ಭದ್ರತಾ ಪಡೆಗಳು ದಾಳಿ ನಡೆಸಿದರು ಎಂದು ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾಹಿತಿ ನೀಡಿದರು.
ಈ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿದ್ದಾರೆ ಎಂಬ ಮಾಹಿತಿಯ ಮೇರೆಗೆ ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಲಾಯಿತು. ಮಂಗಳವಾರವಷ್ಟೇ ಉಧಮ್‌ಪುರ ಜಿಲ್ಲೆಯಲ್ಲಿ 15 ಕಿಲೋ ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ನಿಷ್ಕ್ರಿಯಗೊಳಿಸಿದ ನಂತರ ಈ ಗುಂಡಿನ ಚಕಮಕಿ ನಡೆದಿದೆ. ಇದಕ್ಕೂ ಮೊದಲು ಬಸಂತ್‌ಗಢ ಪ್ರದೇಶದಲ್ಲಿ ಸಿಲಿಂಡರ್ ಆಕಾರದ ಐಇಡಿ, 400 ಗ್ರಾಂ ಆರ್‌ಡಿಎಕ್ಸ್, ಏಳು ಬಂದೂಕುಗಳು ಮತ್ತು 5 ಡಿಟೋನೇಟರ್‌ಗಳನ್ನು ವಶಪಡಿಸಿಕೊಂಡು, ದೊಡ್ಡ ಭಯೋತ್ಪಾದನಾ ಸಂಚನ್ನು ತಪ್ಪಿಸಲಾಗಿತ್ತು.