ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆನಾಡಿನಲ್ಲಿ ಉಗ್ರರ ಉಪಟಳ ಹೆಚ್ಚಾಗಿದೆ. ಶ್ರೀನಗರದ ನೌಗಮ್ ಪ್ರದೇಶದ ವಾಗೂರಾದಲ್ಲಿ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಅಪರಿಚಿತ ಭಯೋತ್ಪಾದಕನನ್ನು ಭದ್ರತಾ ಪಡೆ ಹತ್ಯೆಗೈದಿದೆ.
ಕಾಶ್ಮೀರ ವಲಯ ಪೊಲೀಸರು ಈ ಕುರಿತು ಟ್ವೀಟ್ ಮಾಡಿದ್ದು, ಓರ್ವ ಅಪರಿಚಿತ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಇಬ್ಬರನ್ನು ಟ್ರ್ಯಾಪ್ ಮಾಡಲಾಗಿದೆ. ಉಳಿದವರಿಗಾಗಿ ಹೆಚ್ಚಿನ ಶೋಧ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಶೋಧ ಕಾರ್ಯಾಚರಣೆಯ ಹಿನ್ನೆಲೆ..
ಶನಿವಾರ ಸೊಪೋರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಪೊಲೀಸರು ಮತ್ತು ಮೂವರು ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ದಾಳಿಯ ಹಿಂದೆ ಲಷ್ಕರ್ ಎ ತೈಬಾ ಉಗ್ರಗಾಮಿ ಸಂಘಟನೆಯ ಕೈವಾಡವಿದೆ ಎಂದು ಕಾಶ್ಮೀರ ಐಜಿ ವಿಜಯಕುಮಾರ್ ತಿಳಿಸಿದರು.
-
#SrinagarEncounterUpdate: 01 unidentified #terrorist killed. Search going on. Further details shall follow. @JmuKmrPolice https://t.co/AinO0mUdP6
— Kashmir Zone Police (@KashmirPolice) June 16, 2021 " class="align-text-top noRightClick twitterSection" data="
">#SrinagarEncounterUpdate: 01 unidentified #terrorist killed. Search going on. Further details shall follow. @JmuKmrPolice https://t.co/AinO0mUdP6
— Kashmir Zone Police (@KashmirPolice) June 16, 2021#SrinagarEncounterUpdate: 01 unidentified #terrorist killed. Search going on. Further details shall follow. @JmuKmrPolice https://t.co/AinO0mUdP6
— Kashmir Zone Police (@KashmirPolice) June 16, 2021
ಇದನ್ನೂ ಓದಿ: ಚೀನಾ 'ಪ್ರೇಮ' ಬದಿಗಿಟ್ಟು, ಮಿಲಿಟರಿ, ಆರ್ಥಿಕ ಕ್ರಮ ಕೈಗೊಳ್ಳಿ: ಮೋದಿಗೆ ಕಾಂಗ್ರೆಸ್ ಒತ್ತಾಯ
ಸೋಪೋರ್ನ ಮುಖ್ಯ ಮಾರುಕಟ್ಟೆಯಲ್ಲಿ ಪೊಲೀಸರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು. ಅಪರಿಚಿತ ಉಗ್ರನೋರ್ವ ಏಕಾಏಕಿ ದಾಳಿ ನಡೆಸಿದ್ದ. ಈ ವೇಳೆ ಪೊಲೀಸರು ಮಾತ್ರವಲ್ಲದೇ ನಾಗರೀಕರೂ ಪ್ರಾಣ ಕಳೆದುಕೊಂಡಿದ್ದರು. ಉಗ್ರ ಸ್ಥಳದಿಂದ ಪರಾರಿಯಾಗಿದ್ದು, ಬಂಧನಕ್ಕೆ ಶೋಧ ಕಾರ್ಯ ಮುಂದುವರೆದಿದೆ.