ETV Bharat / bharat

ಅನಂತ್‌ನಾಗ್‌ ಎನ್​​ಕೌಂಟರ್​: ಮೂವರು ಉಗ್ರರ ಸದೆಬಡಿದ ಭದ್ರತಾ ಪಡೆ

author img

By

Published : May 11, 2021, 8:51 AM IST

Updated : May 11, 2021, 11:41 AM IST

ಅನಂತ್‌ನಾಗ್‌ ಜಿಲ್ಲೆಯಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಮೂವರು ಉಗ್ರರ ಹತ್ಯೆಗೈಯ್ಯಲಾಗಿದೆ.

Encounter breaks out in South Kashmir's Anantnag
ಅನಂತ್‌ನಾಗ್‌ನಲ್ಲಿ ಉಗ್ರರು-ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ

ಕಾಶ್ಮೀರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದ ವೈಲೂನಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಮೂವರು ಉಗ್ರರನ್ನು ಸದೆಬಡಿಯಲಾಗಿದೆ.

ವೈಲೂನಲ್ಲಿ ಉಗ್ರರು ಅಡಗಿದ್ದಾರೆಂಬ ನಿಖರ ಮಾಹಿತಿಯ ಮೇರೆಗೆ ಇಂದು ಬೆಳಗ್ಗೆ ಭದ್ರತಾ ಪಡೆ ಎನ್​​ಕೌಂಟರ್​ ಆರಂಭಿಸಿತ್ತು. ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್​ ಮಾಡಿ ಸ್ಪಷ್ಟಪಡಿಸಿದ್ದಾರೆ.

ಎನ್​​ಕೌಂಟರ್​ನಲ್ಲಿ ಮೃತಪಟ್ಟವರು ಲಷ್ಕರ್​- ಎ -ತೊಯ್ಬಾ (ಎಲ್‌ಇಟಿ) ಸಂಘಟನೆಯವರು ಎಂದು ಹೇಳಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

Last Updated : May 11, 2021, 11:41 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.