ಶೋಪಿಯಾನ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶುಕ್ರವಾರ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಉಗ್ರರೊಂದಿಗೆ ನಂಟು ಹೊಂದಿದ್ದ 7 ಮಂದಿಯನ್ನ ಭದ್ರತಾ ಪಡೆ ಬಂಧಿಸಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ. ನಿನ್ನೆ ಇಲ್ಲಿನ ಪುಲ್ವಾಮಾ ಜಿಲ್ಲೆಯಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ 7 ಮಂದಿಯನ್ನ ಸೇನೆ ಸೆರೆ ಹಿಡಿದಿತ್ತು. ಪಾಕಿಸ್ತಾನ ಪ್ರೇರಿತ ಉಗ್ರ ಸಂಘಟನೆಯೊಂದಿಗೆ ಈ 7 ಮಂದಿ ಸಂಪರ್ಕದಲ್ಲಿದ್ದರು. ಅಲ್ಲದೆ ಅವರಿಗೆ ಸಹಾಯ ಮಾಡುವ ಉದ್ದೇಶ ಅವರದ್ದಾಗಿತ್ತು ಎಂದು ಪೊಲೀಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಬಂಧಿತರು ಸ್ಥಳೀಯ ಟ್ರಾಲ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಅಕಿಬ್ ಅಹ್ಮದ್ ದೋಬಿ, ಮುಫೀಜ್ ಅಹ್ಮದ್ ಜರ್ಗರ್, ಲಿಯಾಕಾತ್ ಅಹ್ಮದ್ ಖಂಡೇ ಅಲಿಯಾಸ್ ಅಮೀರ್, ಶೋಯೆಬ್ ಅಹ್ಮದ್ ಭಟ್ ಮತ್ತು ಬಿಲಾಲ್ ಅಹ್ಮದ್ ಜಬೂ, ಶೈಫುಲ್ ಅಹ್ಮದ್ ಶಾ ಬಂಧಿತರಾಗಿದ್ದಾರೆ.
ಬಂಧಿತರು ಟ್ರಾಲ್ ಮತ್ತು ಅವಂತಿಪೋರಾ ಪ್ರದೇಶಗಳಲ್ಲಿ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರಿಗೆ ಲಾಜಿಸ್ಟಿಕ್ಸ್, ಆಶ್ರಯ, ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳನ್ನು ಸಾಗಿಸುವುದು ಮತ್ತು ಇತರ ರೀತಿಯ ಬೆಂಬಲವನ್ನು ನೀಡುವಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.