ಶೋಪಿಯಾನ್(ಜಮ್ಮು-ಕಾಶ್ಮೀರ): ಕಣಿವೆ ನಾಡಿನಲ್ಲಿ ಮತ್ತೆ ಉಗ್ರರು ಉಪಟಳ ಮುಂದುವರೆಸಿದ್ದು ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ಇಂದು ಬೆಳಗ್ಗೆ ಶೋಫಿಯಾನ್ ಜಿಲ್ಲೆಯ ಚೆಕ್-ಎ-ಚೋಲಂದ್ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ಭದ್ರತಾ ಪಡೆಗಳತ್ತ ಗುಂಡು ಹಾರಿಸುತ್ತಿದಂತೆ ಪ್ರತಿದಾಳಿ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಪ್ರವೃತ್ತವಾಗಿದ್ದು, ಹೆಚ್ಚಿನ ಪಡೆಗಳನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ.
ಇದನ್ನೂ ಓದಿ: VIDEO: 9,000 ಅಡಿ ಎತ್ತರದ ಹಿಮದಿಂದಾವೃತ ಕಾಶ್ಮೀರಿ ಕಣಿವೆಯಲ್ಲಿ ಸೇನೆ ಜಂಟಿ ಅಭ್ಯಾಸ