ರಾಮನಗರ : ಬೇಟೆ ಹುಡುಕಿಕೊಂಡು ಹೋಗುವ ಹುಲಿಯ ಕಣ್ಮುಂದೆ ಜಿಂಕೆ ಹಿಂಡು ಕಂಡರೂ ಅವುಗಳಿಗೆ ಏನೂ ಮಾಡದೆ ಕಾಡಿನ ರಾಜ ಗಾಂಭೀರ್ಯವಾಗಿ ಹೆಜ್ಜೆ ಹಾಕಿದ ಅಪರೂಪದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಚ್ಚರಿ ವಿಷಯ ಏನ್ ಅಂದ್ರೆ, ಹುಲಿ ಮುಂದೆ ನಡೆದುಕೊಂಡು ಹೋದ್ರೂ ಸಹ ಜಿಂಕೆಗಳು ಮಾತ್ರ ಕದಲದೇ ನಿಂತಿದ್ದವು.
ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ ಹುಲಿಗಳಿಗೆ ಹೆಸರು ವಾಸಿ. ಅನೇಕ ಬಾರಿ ಅಪರೂಪದ ಚಿತ್ರಗಳು ಜಿಮ್ ಕಾರ್ಬೆಟ್ ಪಾರ್ಕ್‌ನಿಂದ ಹೊರ ಬರುತ್ತಲೇ ಇರುತ್ತವೆ. ಸದ್ಯ ಹುಲಿಯೊಂದು ಜಿಂಕೆಗಳ ಹಿಂಡಿನ ಮುಂದೆ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.
ಜಿಂಕೆಗಳು ಸಹ ಹುಲಿ ಮುಂದೆ ಹೋಗುತ್ತಿದ್ದರೂ ನಿರ್ಭಯವಾಗಿ ಅದನ್ನ ನೋಡುತ್ತಾ ನಿಂತಿರುವ ದೃಶ್ಯ ವಿಡಿಯೋದಲ್ಲಿ ಕಾಣಬಹುದು. ಹೊಟ್ಟೆ ತುಂಬಿದ ಮೇಲೆ ಹುಲಿರಾಯ ಬೇಟೆಯಾಡುವುದಿಲ್ಲ ಎಂಬ ಮಾತಿನಂತೆ ಈ ಅಪರೂದ ಘಟನೆಯನ್ನು ಕಂಡ ಪ್ರವಾಸಿಗರು ಅಚ್ಚರಿಗೆ ಒಳಗಾಗಿದ್ದಾರೆ.