ಸುಕ್ಮಾ, ಛತ್ತೀಸ್‌ಗಢ: ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ನಕ್ಸಲರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಸೇರಿದಂತೆ ಮೂವರು ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ತಾರ್ ರೇಂಜ್ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿ) ಪಿ ಸುಂದರರಾಜ್ ಅವರ ಪ್ರಕಾರ, ಶನಿವಾರ ಬೆಳಗ್ಗೆ 9 ಗಂಟೆಗೆ ಜಾಗರಗುಂದ ಮತ್ತು ಕುಂಡೆಡ್ ನಡುವಿನ ಜಾಗರಗುಂದ ಪೊಲೀಸ್ ಠಾಣಾ ವ್ಯಾಪ್ತಿಯೊಳಗೆ ಈ ಎನ್‌ಕೌಂಟರ್ ನಡೆದಿದೆ. ಹುತಾತ್ಮರಾದವರ ಗುರುತು ಪತ್ತೆಯಾಗಿದ್ದು, ಡಿಆರ್‌ಜಿ ಭದ್ರತಾ ಸಿಬ್ಬಂದಿ ವನಜಂ ಭೀಮಾ, ಎಎಸ್‌ಐ ರಾಮುರಾಮ್ ನಾಗ್ ಮತ್ತು ಸಹಾಯಕ ಕಾನ್ಸ್‌ಟೇಬಲ್ ಕುಂಜಮ್ ಜೋಗಾ ಎಂದು ತಿಳಿದು ಬಂದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
-
#UPDATE | Three DRG officials were killed during the encounter between security forces and Naxals in district Sukma. The deceased include ASI Ramuram Nag, Assistant Constable Kunjam Joga and Sainik Vanjam Bheema.
— ANI MP/CG/Rajasthan (@ANI_MP_CG_RJ) February 25, 2023 " class="align-text-top noRightClick twitterSection" data="
">#UPDATE | Three DRG officials were killed during the encounter between security forces and Naxals in district Sukma. The deceased include ASI Ramuram Nag, Assistant Constable Kunjam Joga and Sainik Vanjam Bheema.
— ANI MP/CG/Rajasthan (@ANI_MP_CG_RJ) February 25, 2023#UPDATE | Three DRG officials were killed during the encounter between security forces and Naxals in district Sukma. The deceased include ASI Ramuram Nag, Assistant Constable Kunjam Joga and Sainik Vanjam Bheema.
— ANI MP/CG/Rajasthan (@ANI_MP_CG_RJ) February 25, 2023
ಇಂದು ಬೆಳಗ್ಗೆ ಡಿಆರ್‌ಜಿಯ ತಂಡವು ಕೂಂಬಿಂಗ್ ಕಾರ್ಯಾಚರಣೆಯಲ್ಲಿತ್ತು ಮತ್ತು ಅವರು ಜಾಗರಗುಂಡ ಮತ್ತು ಕುಂಡೆಡ್‌ಗೆ ತಲುಪಿದಾಗ ನಕ್ಸಲರು ಗುಂಡಿನ ದಾಳಿ ನಡೆಸಿದರು. ನಕ್ಸಲರ ದಾಳಿಗೆ ಭದ್ರತಾ ಅಧಿಕಾರಿಗಳು ಪ್ರತ್ಯುತ್ತರ ನೀಡಿದ್ದರು.ಈ ಘಟನೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದು, ಈ ದಾಳಿಯಲ್ಲಿ ನಕ್ಸಲರಿಗೂ ಸಾಕಷ್ಟು ಹಾನಿಯಾಗಿದ್ದು, 6 ರಿಂದ 7 ನಕ್ಸಲರು ಹತ್ಯೆ ಮಾಡಿರುವ ಸುದ್ದಿಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಗುಂಡಿನ ದಾಳಿ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ: 5 ವರ್ಷಗಳಲ್ಲಿ 1000 ಉಗ್ರರು ಹತ: 626 ಎನ್‌ಕೌಂಟರ್
ಫೆಬ್ರವರಿ ತಿಂಗಳಲ್ಲೇ ಬಸ್ತಾರ್ ವಿಭಾಗದ ವಿವಿಧ ಪ್ರದೇಶಗಳಲ್ಲಿ ನಕ್ಸಲೀಯರು ಜವಾನರನ್ನು ಗುರಿಯಾಗಿಸಲು ಹಲವು ಬಾರಿ ಪ್ರಯತ್ನಿಸಿದ್ದರು. ಇದಕ್ಕೂ ಮೊದಲು ಫೆಬ್ರವರಿ 12 ರಂದು ಕಂಕೇರ್ ಜಿಲ್ಲೆಯ ಛೋಟೆಬೆಟಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಆಳಂದ ಅರಣ್ಯದಲ್ಲಿ ಪೊಲೀಸರು ಮತ್ತು ನಕ್ಸಲೀಯರ ನಡುವೆ ಎನ್‌ಕೌಂಟರ್ ನಡೆದಿತ್ತು. ಆ ವೇಳೆ, ಯಾವುದೇ ಯೋಧರಿಗೆ ಹಾನಿಯಾಗಿರಲಿಲ್ಲ. ಹಲವು ನಕ್ಸಲೀಯರು ಗಾಯಗೊಂಡಿರುವ ಸುದ್ದಿ ಬಂದಿತ್ತು.
ಸ್ಥಳದಿಂದ ಅಪಾರ ಪ್ರಮಾಣದ ನಕ್ಸಲೀಯ ವಸ್ತುಗಳು ಪತ್ತೆಯಾಗಿದ್ದವು. ಮತ್ತೊಂದೆಡೆ, ಫೆಬ್ರವರಿ 8 ರಂದು ಬೆಳಗ್ಗೆ 04.00 ರಿಂದ 5.00 ರವರೆಗೆ ಠಾಣಾ ತರ್ರೆಮ್ ವ್ಯಾಪ್ತಿಯ ಗುಂಡಮ್ ಚುಟ್ವಾಯ್ ಅರಣ್ಯದಲ್ಲಿ ನಕ್ಸಲೀಯರು ಮತ್ತು ಪೊಲೀಸರ ನಡುವೆ ಎನ್‌ಕೌಂಟರ್ ನಡೆದಿತ್ತು. ಇದರಲ್ಲಿ ಗ್ರಾಮಸ್ಥರೊಬ್ಬರು ಸಾವನ್ನಪ್ಪಿದ್ದರು. ಎನ್‌ಕೌಂಟರ್ ನಂತರ ಗ್ರಾಮಸ್ಥರು ಎನ್‌ಕೌಂಟರ್ ನಕಲಿ ಎಂದು ಹೇಳಿದ್ದಾರೆ. ಎನ್‌ಕೌಂಟರ್ ವೇಳೆ ಗ್ರಾಮದ ನಕ್ಸಲೀಯರು ಹೊಂಚುದಾಳಿಯಲ್ಲಿ ಸಿಕ್ಕಿಬಿದ್ದಿದ್ದರು ಎಂದು ಭದ್ರತಾ ಪಡೆ ಮಾಹಿತಿ ನೀಡಿತ್ತು.
ಫೆಬ್ರವರಿ 8 ರಂದು, ಬಿಜಾಪುರದ ಗಡಿ ಪ್ರದೇಶವಾದ ತಾರೆಮ್‌ನಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ನಕ್ಸಲೀಯರು DRG, STF ಮತ್ತು CoBRA ಪೊಲೀಸರ ಮೇಲೆ ದಾಳಿ ಮಾಡಿದ್ದರು. ಆದರೆ, ಪೊಲೀಸರು ಗುಂಡು ಹಾರಿಸಿದ ಬಳಿಕ ನಕ್ಸಲೀಯರು ಓಡಿ ಹೋಗಿದ್ದರು. ಸ್ಥಳದಿಂದ ಭದ್ರತಾ ಪಡೆ ಸಿಬ್ಬಂದಿಗೆ ಅಪಾರ ಪ್ರಮಾಣದ ನಕ್ಸಲೀಯರ ಸಾಮಗ್ರಿ ಸಿಕ್ಕಿದ್ದು, ಕಾರ್ಯಾಚರಣೆ ಮುಂದುವರಿಸಿದ್ದರು.
ಓದಿ: ಬುದ್ಗಾಮ್ ಎನ್‌ಕೌಂಟರ್: ಇಬ್ಬರು ಉಗ್ರರ ಹತ್ಯೆಗೈದ ಭಾರತೀಯ ಸೇನೆ