ETV Bharat / bharat

ಹಾಡಹಗಲೇ ಫೈನಾನ್ಸ್​ ಕಂಪನಿ ದರೋಡೆ ಯತ್ನ.. ಗುಂಡಿನ ದಾಳಿಯಲ್ಲಿ ಓರ್ವ ಕಳ್ಳ ಹತ

ಜಾರ್ಖಂಡ್​ನಲ್ಲಿ ಖಾಸಗಿ ಫೈನಾನ್ಸ್​ ಕಂಪನಿಯನ್ನು ಹಾಡಹಗಲೇ ದರೋಡೆ ಮಾಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದು, ಓರ್ವನನ್ನು ಹೊಡೆದುರುಳಿಸಿದ್ದಾರೆ.

robbery
ಹಗಲಲ್ಲೇ ಫೈನಾನ್ಸ್​ ಕಂಪನಿ ದರೋಡೆ ಯತ್ನ
author img

By

Published : Sep 6, 2022, 6:58 PM IST

ಧನಬಾದ್: ಜಾರ್ಖಂಡ್​ನ ಧನಬಾದ್​ನಲ್ಲಿನ ಫೈನಾನ್ಸ್​​ ಕಂಪನಿಯನ್ನು ದೋಚಲು ಬಂದ ದುಷ್ಕರ್ಮಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ಅದರಲ್ಲಿ ಓರ್ವ ಹತನಾಗಿದ್ದಾನೆ. ಜೊತೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಜಾರ್ಖಂಡ್​ನ ಧನಬಾದ್​ ಜಿಲ್ಲೆಯಲ್ಲಿನ ಖಾಸಗಿ ಫೈನಾನ್ಸ್ ಕಂಪನಿಯೊಳಗೆ ದರೋಡೆಕೋರರು ಹಗಲಲ್ಲೇ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾರೆ. ಬಂದೂಕು ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ದೋಚಲು ಯತ್ನಿಸಿದ್ದಾರೆ. ಈ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಫೈನಾನ್ಸ್​​ ಕಂಪನಿಯನ್ನು ಸುತ್ತುವರಿದಿದ್ದಾರೆ.

ಹಗಲಲ್ಲೇ ಫೈನಾನ್ಸ್​ ಕಂಪನಿ ದರೋಡೆ ಯತ್ನ

ಪೊಲೀಸರನ್ನು ಕಂಡ ದರೋಡೆಕೋರರು ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರೂ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ದರೋಡೆಕೋರ ಸ್ಥಳದಲ್ಲೇ ಹತನಾಗಿದ್ದಾನೆ ಎಂದು ತಿಳಿದುಬಂದಿದೆ. ಬಳಿಕ ಒಳನುಗ್ಗಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಓದಿ: ಕಾಶ್ಮೀರದಲ್ಲಿ ಇಬ್ಬರು ಉಗ್ರರ ಎನ್​ಕೌಂಟರ್​ ಮಾಡಿದ ಭದ್ರತಾ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.