ETV Bharat / bharat

ಗೂಗಲ್, ಫೇಸ್‌ಬುಕ್ ಸುದ್ದಿ ಸಂಸ್ಥೆಗಳಿಗೆ ಸಂಭಾವಣೆ ನೀಡುವ ಕಾನೂನು ರೂಪಿಸಿ : ಸುಶೀಲ್‌ಕುಮಾರ್ ಮೋದಿ - Sushil Kumar Modi demands in Rajya Sabha

ಸುದ್ದಿ ಮಾಧ್ಯಮಗಳು ಅವರು ಉತ್ಪಾದಿಸುವ ವಿಷಯಕ್ಕೆ ತಕ್ಕಷ್ಟು ಸಂಭಾವನೆ ಪಡೆಯಬೇಕು. ಕಳೆದ ತಿಂಗಳು ವಿಶ್ವದಲ್ಲೇ ಮೊದಲ ಬಾರಿಗೆ ಇಂತಹ ಕಾನೂನನ್ನು ಆಸ್ಟ್ರೇಲಿಯಾ ಅಂಗೀಕರಿಸಿದೆ. ಅದನ್ನು ನೋಡಿ ಭಾರತದ ಸರ್ಕಾರ ಕೂಡ ಅಂತಹ ಕಾನೂನು ರೂಪಿಸಬೇಕು..

Formulate Royalty law for news publishers
ಸುದ್ದಿ ಸಂಸ್ಥೆಗಳಿಗೆ ಸಂಭಾವನೆ ನೀಡುವ ಕಾನೂನು ರೂಪಿಸಿ
author img

By

Published : Mar 17, 2021, 9:54 PM IST

ನವದೆಹಲಿ : ಆಸ್ಟ್ರೇಲಿಯಾದಂತೆ ಭಾರತದಲ್ಲಿ ಕೂಡ ಫೇಸ್‌ಬುಕ್ ಮತ್ತು ಗೂಗಲ್ ಸಂಸ್ಥೆಗಳು ಸ್ಥಳೀಯ ಸುದ್ದಿ ಪ್ರಕಾಶಕರಿಗೆ ಹಣ ಪಾವತಿಸುವಂತಹ ಕಾನೂನು ರೂಪಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆಯಲ್ಲಿ ಒತ್ತಾಯಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಹಾರದ ಮಾಜಿ ಉಪಮುಖ್ಯಮಂತ್ರಿ, ಗೂಗಲ್, ಫೇಸ್​ಬುಕ್ ಮತ್ತು ಯೂಟ್ಯೂಬ್​ ಸಂಸ್ಥೆಗಳು ಮುದ್ರಣ ಮಾಧ್ಯಮ ಮತ್ತು ಚಾನೆಲ್​ಗಳ ಸುದ್ದಿಯನ್ನು ಉಚಿತವಾಗಿ ಬಳಸುತ್ತಿವೆ. ಇನ್ನುಮುಂದೆ ಅವುಗಳಿಗೆ ಈ ಸಂಸ್ಥೆಗಳು ಹಣ ಪಾವತಿಸುವಂತೆ ಕಾನೂನು ರೂಪಿಸಬೇಕು ಎಂದರು.

ಓದಿ : ಬಿಜೆಪಿಗೆ ಎಎಪಿ ಶಾಸಕರ ಖರೀದಿಸಲು ಸಾಧ್ಯವಾಗ್ತಿಲ್ಲ, ಹೀಗಾಗಿ ಹೊಸ ಮಸೂದೆ ಜಾರಿ: ಕೇಜ್ರಿವಾಲ್

ಸುದ್ದಿ ಮಾಧ್ಯಮಗಳು ಅವರು ಉತ್ಪಾದಿಸುವ ವಿಷಯಕ್ಕೆ ತಕ್ಕಷ್ಟು ಸಂಭಾವನೆ ಪಡೆಯಬೇಕು. ಕಳೆದ ತಿಂಗಳು ವಿಶ್ವದಲ್ಲೇ ಮೊದಲ ಬಾರಿಗೆ ಇಂತಹ ಕಾನೂನನ್ನು ಆಸ್ಟ್ರೇಲಿಯಾ ಅಂಗೀಕರಿಸಿದೆ. ಅದನ್ನು ನೋಡಿ ಭಾರತದ ಸರ್ಕಾರ ಕೂಡ ಅಂತಹ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಸಾಮಾಜಿಕ ಮಾಧ್ಯಮಗಳು ಮತ್ತು ಒಟಿಟಿ ಫ್ಲ್ಯಾಟ್​ ಫಾರ್ಮ್​ಗಳನ್ನು ನಿಯಂತ್ರಿಸಲು ಸರ್ಕಾರ ಡಿಜಿಟಲ್ ಮಾಧ್ಯಮ ನಿಯಮ ರೂಪಿಸಿದೆ. ಅದೇ ರೀತಿ ಟೆಕ್ ಸಂಸ್ಥೆಗಳಿಂದ ಸುದ್ದಿ ಪ್ರಕಾಶಕರು ಸಂಭಾವಣೆ ಪಡೆಯುವಂತಹ ಕಾನೂನು ತರಬೇಕು ಎಂದು ಅವರು ಆಗ್ರಹಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.