ಇಡುಕ್ಕಿ (ಕೇರಳ): ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಎಂಬಲ್ಲಿ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಸಿಬ್ಬಂದಿಯೊಬ್ಬನ ಬಲಗೈಯನ್ನು ಮಾಲೀಕನೇ ಕತ್ತರಿಸಿರುವ ಭೀಕರ ಘಟನೆ ಭಾನುವಾರ ನಡೆದಿದೆ. ಕಟ್ಟಿಗೆ ಮಾರಾಟಕ್ಕೆ ಸಂಬಂಧಿಸಿದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎಳಂಪಕಲ್ ವಿಜಯರಾಜ್ (43) ಹಾಗೂ ಮಾಲೀಕ ಬಿನು ಅವರ ನಡುವೆ ಜಗಳ ನಡೆದಿದೆ.
ಕೈ ಕಡಿದ ಆರೋಪಿಯ ಬಂಧನ: ಎಳಂಪ್ಲಾಕಲ್ ವಿಜಯರಾಜ ಪೊಲಿಂಜಪಾಲಂ ಮೂಲದವರಾಗಿದ್ದಾರೆ. ಬಿನು ಜಿಲ್ಲೆಯ ಆದಿಮಲಿ ಪ್ರದೇಶದಲ್ಲಿ ನೆಲೆಸಿದ್ದಾರೆ. ಬಿನು ಮರದ ಕಟ್ಟಿಗೆ ವ್ಯಾಪಾರಿ. ಭಾನುವಾರ ಸಂಜೆ 6 ಗಂಟೆ ಸುಮಾರಿಗೆ ಪೊಲಿಂಜಪಾಲಂ ಟ್ರಾಫಿಕ್ ಇಂಟರ್‌ಸೆಕ್ಷನ್ ಬಳಿಯ ಅಡಿಮಾಲಿ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಿನು ಈ ಕೃತ್ಯ ಎಸಗಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆಗೆ ಆದೇಶಿಸಿದ್ದಾರೆ.
ಸಂತ್ರಸ್ತ ಎಳಂಪಕಲ್ ವಿಜಯರಾಜ ಅಪಾಯದಿಂದ ಪಾರು: ದಾಳಿಯಲ್ಲಿ ವಿಜಯರಾಜ್ ಅವರ ಶೇ.80 ರಷ್ಟು ಕೈ ತುಂಡಾಗಿದೆ. ಸಂತ್ರಸ್ತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು. ತುಂಡರಿಸಿದ ಕೈಗೆ ವೈದ್ಯರು ಹಲವು ಹೊಲಿಗೆಗಳನ್ನು ಹಾಕಿದ್ದಾರೆ. ಸಂತ್ರಸ್ತ ಎಳಂಪಕಲ್ ವಿಜಯರಾಜ ಅವರು ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಸ್ಥಳೀಯರು ಹೇಳಿದ್ದೇನು?: ಸ್ಥಳೀಯರು ಮತ್ತು ಸ್ಥಳದಲ್ಲಿದ್ದವರ ಪ್ರಕಾರ, ಎಳಂಪಕಲ್ ವಿಜಯರಾಜ ತನ್ನ ಸಹೋದರಿಯ ಮಗನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ. ಅವನ ಕಾರು ಪೊಲಿಂಜಪಾಲಂ ಟ್ರಾಫಿಕ್ ಜಂಕ್ಷನ್‌ಗೆ ಬಂದು ತಲುಪಿತ್ತು. ಆತನನ್ನು ಕಾರಿನಿಂದ ಹೊರಗೆ ಬರುವಂತೆ ಹೇಳಲಾಗಿತ್ತು. ವಾಹನದಿಂದ ಕೆಳಗಿಳಿದ ಕ್ಷಣದಲ್ಲೇ ಮಾಲೀಕ ಬಿನು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಿಬ್ಬಂದಿಯ ಕೈ ತುಂಡಾಗಿದ್ದು, ಆರೋಪಿ ಮಾಲೀಕ ಅಪರಾಧ ನಡೆದ ಸ್ಥಳದ ಸಮೀಪವೇ ಅಡಗಿಕೊಂಡಿದ್ದ. ಬಳಿಕ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹಣಕಾಸಿನ ವಿಷಯಕ್ಕೆ ಗಲಾಟೆ: ಕುಡಿದ ಅಮಲಿನಲ್ಲಿ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿದ್ದು, ಸ್ನೇಹಿತನಿಗೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ (ಜುಲೈ 21ರಂದು) ನಡೆದಿತ್ತು. ನಂಜೇಗೌಡ (30) ಹಲ್ಲೆಗೊಳಗಾದ ಯುವಕನ. ಸೂಲಿಬೆಲೆ ಗ್ರಾಮದ ಈ ಯುವಕ ಕುಡಿದ ಅಮಲಿನಲ್ಲಿ ಸ್ನೇಹಿತನ ಹತ್ತಿರ ಗಲಾಟೆ ಮಾಡಿಕೊಂಡು ಇದೀಗ ಮಚ್ಚಿನಿಂದ ಏಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದನು. ಸೂಲಿಬೆಲೆ ಗ್ರಾಮದ ಆರೋಪಿ ಬಸವರಾಜ್ ಮತ್ತು ಹಲ್ಲೆಗೊಳಗಾದ ನಂಜೇಗೌಡ ಇವರಿಬ್ಬರು ಸ್ನೇಹಿತರು.
ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಕಿರಿಕ್: ಸ್ನೇಹಿತನಿಗೆ ಮಚ್ಚಿನೇಟು