ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ನಿರ್ದೇಶನದ ಮುಂಬರುವ 'ಎಮರ್ಜೆನ್ಸಿ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಅನೌನ್ಸ್‌ಮೆಂಟ್ ಟೀಸರ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ಸ್ಟಾದಲ್ಲಿ ಈ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಒಂದೂವರೆ ನಿಮಿಷಗಳ ಟೀಸರ್ ಶೇರ್ ಮಾಡಿಕೊಂಡಿದ್ದು, ಅದಕ್ಕೆ "Presenting 'Her' who was called 'Sir'" ಎಂದು ಶೀರ್ಷಿಕೆ ನೀಡಿದ್ದಾರೆ.
ಟೀಸರ್‌ನಲ್ಲಿ ಕಂಗನಾ ಭಾರತದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿಯವರ ಪಾತ್ರವನ್ನು ಪುನರಾವರ್ತಿಸುವುದನ್ನು ಕಾಣಬಹುದಾಗಿದೆ. ಎನರ್ಜೆನ್ಸಿ ಚಿತ್ರವು 'ತನು ವೆಡ್ಸ್ ಮನು' ನಟಿಯ ಮೊದಲ ಏಕವ್ಯಕ್ತಿ ನಿರ್ದೇಶನದ ಚಿತ್ರವಾಗಿದೆ. ಈ ಹಿಂದೆ, ಅವರು 2019 ರಲ್ಲಿ ಮಣಿಕರ್ಣಿಕಾ ಎಂಬ ಚಲನಚಿತ್ರವನ್ನು ಸಹ-ನಿರ್ದೇಶಿಸಿದ್ದರು ಹಾಗೂ ಅವರ ವೃತ್ತಿಜೀವನದ ಎರಡನೇ ಜೀವನಚರಿತ್ರೆ ಚಲನಚಿತ್ರವಾದ 'ತಲೈವಿ' ಮೂಲಕ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಕುರಿತಾದ ಚಿತ್ರದಲ್ಲಿ ನಟಿಸಿದ್ದರು.
ನಟಿ ರಣಾವತ್ ಫಸ್ಟ್ ಲುಕ್ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದ್ದಾರೆ. ಅದಕ್ಕೆ ಅವರು "#EmergencyFirstLook ಎಂದು ಬರೆದುಕೊಂಡಿದ್ದಾರೆ.
- " class="align-text-top noRightClick twitterSection" data="
">
ನಟಿ ಈ ಮೊದಲು 'ಧಕಡ್' ನಲ್ಲಿ ಕಾಣಿಸಿಕೊಂಡಿದ್ದರು, ಅದು ಗಲ್ಲಾಪೆಟ್ಟಿಗೆಯಲ್ಲಿ ಪ್ರೇಕ್ಷಕರನ್ನು ಮೆಚ್ಚಿಸುವಲ್ಲಿ ವಿಫಲವಾಗಿತ್ತು. ಇದಾದ ನಂತರ 'ತೇಜಸ್' ನಲ್ಲಿ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ಅವರು ಭಾರತೀಯ ವಾಯುಪಡೆಯ ಅಧಿಕಾರಿಯ ಪಾತ್ರವನ್ನು ನಿಭಾಯಿಸಿದ್ದಾರೆ.
ಇದಲ್ಲದೆ, ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತಮ್ಮ ಮುಂದಿನ ನಿರ್ಮಾಣ ಉದ್ಯಮದ 'ಟಿಕು ವೆಡ್ಸ್ ಶೇರು' ಮೂಲಕ ನಿರ್ಮಾಪಕಿಯಾಗಿಯೂ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಮಾಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ಜೀರೋ ಟ್ರಾಫಿಕ್ನಲ್ಲಿ ಬೆಳಗಾವಿ ಕೆಇಎಲ್ ಆಸ್ಪತ್ರೆಗೆ ಕಿಡ್ನಿ ರವಾನೆ