ಅಂಬಾಲಾ(ಹರಿಯಾಣ): ತಾಂತ್ರಿಕ ದೋಷದಿಂದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರಿದ್ದ ಹೆಲಿಕಾಪ್ಟರ್ ಶನಿವಾರ ಅಂಬಾಲಾದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಖಟ್ಟರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಅಂಬಾಲಾ ಪೊಲೀಸ್ ಲೈನ್ಸ್ ಮೈದಾನದಲ್ಲಿ ತುರ್ತು ಭೂಸ್ಪರ್ಶಿಸಿತು. ವಿಷಯ ತಿಳಿದ ತಕ್ಷಣ ಪೊಲೀಸ್ ಅಧೀಕ್ಷಕ ಜಶಾನ್‌ದೀಪ್ ಸಿಂಗ್ ರಾಂಧವಾ ಮತ್ತು ಎಸ್‌ಡಿಎಂ ಹಿತೇಶ್ ಕುಮಾರ್ ಅವರು ತಮ್ಮ ಜೊತೆಗೆ ಎರಡು ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ವಾಹನದೊಂದಿಗೆ ಸ್ಥಳಕ್ಕೆ ಧಾವಿಸಿದ್ದರು.
ಪೊಲೀಸ್ ಲೈನ್ಸ್ ಮೈದಾನದಲ್ಲಿ 43 ನಿಮಿಷಗಳ ನಿಲುಗಡೆಯಲ್ಲಿ ಹೆಲಿಕಾಪ್ಟರ್‌ನೊಳಗಿನ ತಾಂತ್ರಿಕ ದೋಷವನ್ನು ಸರಿಪಡಿಸಲಾಯಿತು. ಮತ್ತೆ ಸಂಜೆ 5 ಗಂಟೆಗೆ ಅದೇ ಹೆಲಿಕಾಪ್ಟರ್ನಿಂದ ಖಟ್ಟರ್ ತೆರಳಿದರು ಎಂದು ಅಧಿಕಾರಿಗಳು ತಿಳಿಸಿದರು.
ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ನಂತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಯಾವ ಕಾರಣಕ್ಕೆ ತುರ್ತು ಲ್ಯಾಂಡಿಂಗ್ ಮಾಡಬೇಕಾಯಿತು ಎಂಬ ಕುರಿತು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಎಂಎ, ಎಂಬಿಎ ಪದವೀಧರ; ಆನ್ಲೈನ್ ಟ್ರೇಡಿಂಗ್ಗೋಸ್ಕರ ಐದು ಕೊಲೆ; ಸೀರಿಯಲ್ ಕಿಲ್ಲರ್ನ ಬಂಧನ