ETV Bharat / bharat

ವಿದ್ಯುತ್​ ತಗುಲಿ ಸತ್ತ ಆನೆ ಮರಿ ಎಬ್ಬಿಸಲು ಮೂರು ಆನೆಗಳ ಪ್ರಯತ್ನ - ಕರುಳು ಹಿಂಡುವಂತಿತ್ತು ದೃಶ್ಯ!

ವಿದ್ಯುತ್ ತಂತಿ ಸ್ಪರ್ಶಿಸಿ (death by electric shock) ಗಂಡು ಆನೆ ಮರಿ (elephant death) ಮೃತಪಟ್ಟಿದೆ. ಆ ಮೃತ ಮರಿಯನ್ನು ಎಬ್ಬಿಸಲು ಮೂರು ಆನೆಗಳು ಪ್ರಯತ್ನಪಟ್ಟ ದೃಶ್ಯ ಮನ ಕಲಕುವಂತಿತ್ತು.

Elephants try to wake up an electrocuted calf at Kerala
ಸತ್ತ ಆನೆ ಮರಿಯನ್ನು ಎಬ್ಬಿಸಲು ಆನೆಗಳ ಪ್ರಯತ್ನ
author img

By

Published : Nov 17, 2021, 12:32 PM IST

Updated : Nov 17, 2021, 3:57 PM IST

ಪಾಲಕ್ಕಾಡ್ (ಕೇರಳ): ವಿದ್ಯುತ್​ ಶಾಕ್​ ಹೊಡೆದು ಸತ್ತ ಗಂಡು ಆನೆ ಮರಿಯನ್ನು ಎಬ್ಬಿಸಲು ಮೂರು ಆನೆಗಳು ನಡೆಸಿದ ಪ್ರಯತ್ನ ನೋಡುಗರ ಕರುಳು ಹಿಂಡುವಂತಿತ್ತು.

ಸತ್ತ ಆನೆ ಮರಿಯನ್ನು ಎಬ್ಬಿಸುವ ಪ್ರಯತ್ನ

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ (Palakkad, Kerala) ಸೋಮವಾರ ರಾತ್ರಿ ವಿದ್ಯುತ್ ತಂತಿ ಸ್ಪರ್ಶಿಸಿ (death by electric shock) ಗಂಡು ಆನೆ ಮರಿ(elephant death) ಮೃತಪಟ್ಟಿದೆ. ಮೂರು ಆನೆಗಳು ಮೃತ ಆನೆಯ ಸುತ್ತ ನಿಂತಿದ್ದು, ಆ ಪೈಕಿ ಒಂದು ಆನೆ, ಮೃತ ಆನೆ ಮರಿಯನ್ನು ಎಬ್ಬಿಸಲು ಪ್ರಯತ್ನ ಪಟ್ಟಿದೆ.

ಇದನ್ನೂ ಓದಿ: ದಿಢೀರ್​ ಕಾರ್​​ನ ಬಾಗಿಲು ತೆರೆದ ಚಾಲಕ.. ಟ್ರಕ್​ನಡಿ ಸಿಲುಕಿ ಸ್ಥಳದಲ್ಲೇ ಹಾರಿಹೋಯ್ತು ಬೈಕ್ ಸವಾರನ ಪ್ರಾಣ - Video

ಮೂರು ಆನೆಗಳು ಕೆಲ ಘಂಟೆಗಳ ಕಾಲ ಅಲ್ಲೇ ನಿಂತಿದ್ದು, ಯಾರನ್ನೂ ಹತ್ತಿರ ಸುಳಿಯಲು ಬಿಟ್ಟಿಲ್ಲ. ಮೃತ ಆನೆಯ ದೇಹವನ್ನು ಶವ ಸಂಸ್ಕಾರಕ್ಕಾಗಿ ಹೊರತರುವ ಮುನ್ನ ಅರಣ್ಯಾಧಿಕಾರಿಗಳು ಆನೆಗಳು ಹೊರಡುವವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

Last Updated : Nov 17, 2021, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.