ಹಜಾರಿಬಾಗ್ (ಜಾರ್ಖಂಡ್): ಆನೆಗಳ ಗುಂಪೊಂದು ನಡೆಸಿದ ದಾಳಿಯಲ್ಲಿ ಒಂದೇ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿರುವ ಘಟನೆ ಜಾರ್ಖಂಡ್ನ ಹಜಾರಿಬಾಗ್ ಜಿಲ್ಲೆಯ ಇತೇಜ್ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರೋಹಿಣಿ ದೇವಿ (40), ಅವರ ಮಗ ಮುಖೇಶ್ ಕುಮಾರ್ (12) ಮತ್ತು ಪುತ್ರಿ ಸುಂದರಿ ಕುಮಾರಿ (10) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ರೋಹಿಣಿ ದೇವಿ ಅವರ ಪತಿ ರಾಮ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಹಾಸನದಲ್ಲಿ ಭೀಕರ ಅಪಘಾತ: ಅವಳಿ ಕಂದಮ್ಮಗಳ ದೇಹ ಛಿದ್ರ ಛಿದ್ರ.. ತಾಯಿಯೂ ಸಾವು, ತಂದೆ ಸ್ಥಿತಿ ಗಂಭೀರ
ರಾಮ್ ಸಿಂಗ್ ಅವರು ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ಪುಟ್ಟ ಮನೆ ಮಾಡಿಕೊಂಡು ಹೆಂಡತಿ - ಮಕ್ಕಳೊಂದಿಗೆ ವಾಸವಾಗಿದ್ದರು. ಸುಮಾರು 15 ಆನೆಗಳು ಕೆಲ ದಿನಗಳಿಂದ ಗ್ರಾಮಕ್ಕೆ ನುಗ್ಗಿ ಹೊಲಗಳಲ್ಲಿನ ಬೆಳೆಗಳನ್ನು ನಾಶ ಮಾಡುತ್ತಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ರಾಮ್ ಸಿಂಗ್ ಕುಟುಂಬ ಬಲಿಯಾಗಿದೆ.