ತಮಿಳುನಾಡು/ಮಾಸಿನಗುಡಿ: ತಮಿಳುನಾಡಿನಲ್ಲಿ ಒಂಟಿ ಸಲಗಕ್ಕೆ ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಬಂಧನ ಮಾಡುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಜನವಸತಿ ಪ್ರದೇಶಕ್ಕೆ ಲಗ್ಗೆ ಹಾಕಿದ್ದ ಆನೆಯನ್ನ ಬೆದರಿಸುವ ಉದ್ದೆಶದಿಂದ ಕೆಲವರು ಬೆಂಕಿ ಹಚ್ಚಿದ್ದಾರೆ. ಇದರಲ್ಲಿ ಓರ್ವ ಸುಡುತ್ತಿದ್ದ ಕಟ್ಟಿಗೆ ತುಂಡನ್ನ ಆನೆಯತ್ತ ಎಸೆದಿದ್ದು, ಈ ವೇಳೆ ಅದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಓದಿ: Watch:ಆಹಾರ ಅರಸಿ ಬಂದ ಗಜರಾಜನಿಗೆ ಬೆಂಕಿ ಹಚ್ಚಿದ ಮನುಜ; ನೋವಿನ ಘೀಳು ಕಲ್ಲು ಹೃದಯವ ಕರಗಿಸದಿರದು!
ಘಟನೆ ನಡೆಯುತ್ತಿದ್ದಂತೆ ಎಚ್ಚೆತ್ತ ಅರಣ್ಯ ಸಿಬ್ಬಂದಿ ಇಲಾಖೆ ಸಿಬ್ಬಂದಿ ಇದೀಗ ಮವನಲ್ಲ ವಿಝ್ ಪ್ರಶಾತ್ ಮತ್ತು ರೆಮಾಂಡ್ ಡೀನ್ ಎಂಬುವವರನ್ನ ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ರಿಕಿ ರಾಯಾನ್ ತಲೆಮರೆಸಿಕೊಂಡಿದ್ದು ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಚಿಕಿತ್ಸೆಗೆಂದು ಅರಣ್ಯ ಇಲಾಖೆ ಆಸ್ಪತ್ರೆಗೆ ಕರೆತಂದಿದ್ದ ಆನೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ.