ETV Bharat / bharat

ವಿಮಾನ ನಿಲ್ದಾಣಕ್ಕೆ ನುಗ್ಗಿದ ಕಾಡಾನೆ... ಏರ್​​​​ಪೋರ್ಟ್​​​ನಲ್ಲಿ ಅವಾಂತರ - ಆನೆಯೊಂದು ರನ್​ ವೇ ಪ್ರವೇಶ

ಮಾನವ - ವನ್ಯಮೃಗ ಸಂಘರ್ಷ ಮುಂದುವರೆದಿದ್ದು, ವಿಮಾನ ನಿಲ್ದಾಣದ ರನ್​ವೇ ಆನೆಯೊಂದು ನುಗ್ಗಿ ಅವಾಂತರ ಸೃಷ್ಟಿಸಿದೆ.

elephant-reached-the-runway-by-breaking-the-boundary-wall-of-jolly-grant-airport
ಉತ್ತರಾಖಂಡದ ಜಾಲಿ ಗ್ರಾಂಟ್ ವಿಮಾನ ನಿಲ್ದಾಣಕ್ಕೆ ಕಾಡಾನೆ ಕಾಟ
author img

By

Published : Sep 15, 2021, 11:50 AM IST

ಡೆಹ್ರಾಡೂನ್​(ಉತ್ತರಾಖಂಡ): ವಿಮಾನ ನಿಲ್ದಾಣಕ್ಕೆ ಆನೆಯೊಂದು ಪ್ರವೇಶಿಸಿ, ಆತಂಕ ಸೃಷ್ಟಿಸಿದೆ. ಉತ್ತರಾಖಂಡದ ದೋಯಿವಾಲಾದಲ್ಲಿರುವ ಜಾಲಿ ಗ್ರಾಂಟ್ ವಿಮಾನ ನಿಲ್ದಾಣದ ಗೇಟ್​ ಮುರಿದು ಆನೆಯೊಂದು ರನ್​ ವೇ ಪ್ರವೇಶಿಸಿದ್ದು, ಸೆಕ್ಯೂರಿಟಿ ಸಿಬ್ಬಂದಿ ಒಮ್ಮೆ ಕಕ್ಕಾಬಿಕ್ಕಿಯಾಗಿದ್ದಾರೆ.

ಮಂಗಳವಾರ ರಾತ್ರಿ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದ ಸಿಬ್ಬಂದಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಓಡಿಸಿದ್ದಾರೆ.

ವಿಮಾನ ನಿಲ್ದಾಣದಿಂದ ಹೊರಗೆ ಬಂದ ಆನೆ, ಹತ್ತಿರದ ಗ್ರಾಮವನ್ನು ಪ್ರವೇಶಿಸಿ, ಪುಂಡಾಟ ಮುಂದುವರೆಸಿದೆ. ಹಲವಾರು ಮನೆಗಳಿಗೆ ಹಾನಿಯನ್ನು ಉಂಟುಮಾಡಿದ್ದು, ಇದಾದ ನಂತರ ಮತ್ತೊಮ್ಮೆ ವಿಮಾನ ನಿಲ್ದಾಣಕ್ಕೆ ಮುಂಜಾನೆ 4 ಗಂಟೆ ಸುಮಾರಿಗೆ ಧಾವಿಸಿದೆ. ಈ ವೇಳೆ ಅರಣ್ಯ ಸಿಬ್ಬಂದಿ ಸತತ ಎರಡು ಗಂಟೆ ಕಾರ್ಯಾಚರಣೆ ಮೂಲಕ ಆನೆಯನ್ನು ಹೊರಗೆ ಕಳುಹಿಸಿದ್ದಾರೆ.

ಮಾನವ- ವನ್ಯಮೃಗ ಸಂಘರ್ಷ ಇಲ್ಲಿ ಹೊಸತೇನಲ್ಲ. ಇದಕ್ಕೂ ಮೊದಲು ದೋಯಿವಾಲಾ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಆನೆಗಳು ಅತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ಸೋಡಾ ಸಿರೋಲಿ ಎಂಬಲ್ಲಿ ಯುವಕನೊಬ್ಬ ಆನೆ ದಾಳಿಗೆ ಬಲಿಯಾಗಿದ್ದನು.

ಇದನ್ನೂ ಓದಿ: ಸಫಾರಿಗರ ಮುಂದೆ ಮರಿಗಳನ್ನು ಹುಡುಕಿದ ಹುಲಿ: ಬಂಡೀಪುರದ ವಿಡಿಯೋ ವೈರಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.