ETV Bharat / bharat

VIDEO: ಅಡುಗೆ ಕೋಣೆ ಕಿಟಕಿ ಮುರಿದು ಸೊಂಡಿಲಿನಿಂದಲೇ ಆಹಾರ ಹುಡುಕಾಡಿದ ಆನೆ - ಸೊಂಡಲಿನಿಂದಲೇ ಅಡುಗೆ ಮನೆಯಲ್ಲಿ ಆಹಾರಕ್ಕಾಗಿ ಹುಡುಕಾಟ

ಅಡುಗೆ ಮನೆಗೆ ನುಗ್ಗಿದ ಆನೆಯೊಂದು ತಿನ್ನಲು ಏನಾದ್ರೂ ಸಿಗುತ್ತಾ ಎಂದು ಸೊಂಡಿಲಿನಿಂದ ಹುಡುಕಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ.

elephant entered to kitchen and searched for food; video viral
ಅಡುಗೆ ಕೋಣೆ ಕಿಟಕಿ ಮುರಿದು ಸೊಂಡಲಿನಿಂದಲೇ ಆಹಾರ ಹುಡುಕಾಡಿದ ಆನೆ - ವಿಡಿಯೋ
author img

By

Published : Dec 16, 2021, 7:51 PM IST

Updated : Dec 17, 2021, 12:36 PM IST

ಹೈದರಾಬಾದ್‌: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಆನೆಯೊಂದು ಅಡುಗೆ ಕೋಣೆಯ ಕಿಟಿಕಿ ಮುರಿದು ಸೊಂಡಿಲಿನಿಂದ ಆಹಾರ ಹುಡುಕಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ರಾತ್ರಿ ಸಮಯದಲ್ಲಿ ಮನೆಯ ಅಡುಗೆ ಕೋಣೆ ಕಿಟಕಿ ಸರಳುಗಳನ್ನು ಮುರಿದಿರುವ ಆನೆ ಸೊಂಡಿಲಿನಿಂದಲೇ ಅಡುಗೆ ಮನೆ ಒಳಗಡೆ ಏನಾದ್ರೂ ತಿನ್ನುವುದಕ್ಕೆ ಸಿಗುತ್ತಾ ಅಂತ ಹುಡುಕಾಟ ನಡೆಸಿದೆ.

ಅಡುಗೆ ಕೋಣೆ ಕಿಟಕಿ ಮುರಿದು ಸೊಂಡಿಲಿನಿಂದಲೇ ಆಹಾರ ಹುಡುಕಾಡಿದ ಆನೆ

ಈ ವೇಳೆ ಅಲ್ಲಿದ್ದ ಪಾತ್ರೆಗಳು ಸೇರಿದಂತೆ ಇತರ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಸೆದಿದೆ. ಸೊಂಡಿಲಿಗೆ ಸಿಕ್ಕ ಎಲ್ಲ ಕಬೋರ್ಡ್‌ಗಳನ್ನು ತೆರೆದು ಶೋಧ ನಡೆಸಿದೆ. ಚಿಕ್ಕ ಕಬೋರ್ಡ್‌ವೊಂದನ್ನು ತೆರೆದು ಅದರಲ್ಲಿ ಏನೂ ಸಿಗದಿದ್ದಾಗ ಮತ್ತೆ ಸೊಂಡಿಲಿನಿಂದಲೇ ಮುಚ್ಚಿದೆ.

ಮನೆಯ ಹಾಲ್‌ನಲ್ಲಿದ್ದವರು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಭಾರಿ ವೈರಲ್‌ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

''ಆನೆ ಸೊಂಡಿಲಿನಿಂದ ಚಿಕ್ಕ ಕಬೋರ್ಡ್‌ ಅನ್ನು ತೆರೆಯುತ್ತಿರುವುದು ಇಷ್ಟವಾಯಿತು. ಆದರೆ, ಏನೂ ಸಿಗಲಿಲ್ಲ ಮತ್ತೆ ಅದನ್ನು ಮುಚ್ಚಿದೆ'' ಎಂದು ಸುತಿಕ್ಷಾರಾಮ್‌ ಎಂಬುವವರು ಕಾಮೆಂಟ್‌ ಮಾಡಿದ್ದಾರೆ. ''

''ಇದು ಗುರುಪುರದ ಟಿಬೆಟ್‌ ಕ್ಯಾಂಪ್‌ನದ್ದು'' ಎಂದು ಸಂತೋಶ್‌ ಕುಮಾರ್‌ ಎಂಬುವರು ಹೇಳಿದ್ದಾರೆ.

ಆನೆ ಅಡುಗೆ ಮನೆಗೆ ನುಗ್ಗಿ ಆಹಾರ ಹುಡುಕಾಡಿದ್ದ ಇಂತಹದ್ದೇ ಘಟನೆ ಈ ಹಿಂದೆಯೂ ನಡೆದಿತ್ತು.

elephant entered to kitchen and searched for food
ಆನೆ ಆಹಾರ ಹುಡುಕಾಟದ ಬಗ್ಗೆ ನೆಟ್ಟಿಗರ ಪ್ರತಿಕ್ರಿಯೆಗಳು

ಇದನ್ನೂ ಓದಿ: ಆಹಾರ ಹುಡುಕುತ್ತ ಬಂದು, ಅಡುಗೆ ಮನೆಯ ಗೋಡೆ ಒಡೆದು ಹಾಕಿದ ಕಾಡಾನೆ!

Last Updated : Dec 17, 2021, 12:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.