ನವದೆಹಲಿ: ಪ್ರಸ್ತುತ ಹಿರಿಯ ಚುನಾವಣಾ ಆಯುಕ್ತರಾಗಿರುವ ಸುಶೀಲ್ ಚಂದ್ರ ಅವರು ಮುಂದಿನ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ)ಆಗಿ ನೇಮಕಗೊಳ್ಳಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ
ಹಾಲಿ ಸಿಇಸಿ ಸುನಿಲ್ ಅರೋರಾ ಅವರ ಸೇವಾ ಅವಧಿ ಏಪ್ರಿಲ್ 13 ಅಂದ್ರೆ ನಾಳೆ ಮುಕ್ತಾಯಗೊಳ್ಳಲಿದೆ. ಒಂದು ದಿನದ ಬಳಿಕ ಸುಶೀಲ್ ಚಂದ್ರ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸರ್ಕಾರ ಯಾವಾಗಲು ಅತ್ಯಂತ ಹಿರಿಯ ಚುನಾವಣಾ ಆಯುಕ್ತರನ್ನೇ ಸಿಇಸಿ ಆಗಿ ನೇಮಕ ಮಾಡಲಿದೆ. ಸುಶೀಲ್ ಚಂದ್ರ ಅವರು ಸುನಿಲ್ ಅರೋರಾರ ಸ್ಥಾನ ತುಂಬಲಿದ್ದು, ಯಾವುದೇ ಕ್ಷಣದಲ್ಲಿ ಈ ಬಗ್ಗೆ ಆದೇಶ ಹೊರಬೀಳುವ ಸಾಧ್ಯತೆಯಿದೆ ಎಂಬ ಮಾಹಿತಿ ದೊರೆತಿದೆ.
ಇದನ್ನೂ ಓದಿ: 'ಲಸಿಕೆಗಾಗಿ ದನಿ ಎತ್ತಿ' - ಮನಮುಟ್ಟುವ ವಿಡಿಯೋದೊಂದಿಗೆ ದೇಶದ ಜನತೆಗೆ ರಾಗಾ ಕರೆ
ಲೋಕಸಭಾ ಚುನಾವಣೆಗೆ ಮುನ್ನ 2019ರ ಫೆಬ್ರವರಿ 14ರಂದು ಸುಶೀಲ್ ಚಂದ್ರ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. ಇದಕ್ಕೂ ಮೊದಲು ಇವರು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಅಧ್ಯಕ್ಷರಾಗಿದ್ದರು.
ಇವರ ನೇತೃತ್ವದಲ್ಲಿ ಮುಂದಿನ ಬಾರಿ ಗೋವಾ, ಮಣಿಪುರ, ಉತ್ತರಾಖಂಡ್, ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.