ಗಾಂಧಿನಗರ( ಗುಜರಾತ್) : ವಿಧಾನಸಭಾ ಚುನಾವಣೆ ಹಿನ್ನೆಲೆ ಈಗಾಗಲೇ ಹಲವು ಸಿದ್ಧತೆಗಳು ನಡೆದಿವೆ. ನಾಳೆ ಮೊದಲ ಹಂತದ ಮತದಾನ ನಡೆಯಲಿದ್ದು, ಇಲ್ಲಿನ ರಾಜುಲಾ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಶಿಯಾಲ್‌ಬೆಟ್ ದ್ವೀಪಕ್ಕೆ ಚುನಾವಣಾ ಸಿಬ್ಬಂದಿ ಮತ್ತು ಅಧಿಕಾರಿಗಳು ಬೋಟ್ನಲ್ಲಿ ತೆರಳಿದ್ದಾರೆ. ಸುಮಾರು 50 ಸಿಬ್ಬಂದಿಗಳು ಬೋಟ್ ಮೂಲಕ ಮತದಾನ ಸ್ಥಳಕ್ಕೆ ತೆರಳಿದ್ದು, ನಾಳಿನ ಚುನಾವಣೆಗೆ ತಯಾರಿ ನಡೆಸಿದ್ದಾರೆ.
ದ್ವೀಪದಲ್ಲಿ ಮತದಾನ : ರಾಜುಲಾ ವಿಧಾನಸಭಾ ಕ್ಷೇತ್ರದ ಭಾಗವಾಗಿರುವ ಶಿಯಾಲ್‌ಬೆಟ್ ದ್ವೀಪದಲ್ಲಿ ಮತದಾನ ನಡೆಯಲಿದೆ. ಶಿಯಾಲ್‌ಬೆಟ್ ದ್ವೀಪವು ಸುತ್ತಲೂ ನೀರಿನಿಂದ ಆವೃತವಾಗಿದೆ. ಇಲ್ಲಿ ಸುಮಾರು 7,700 ಕ್ಕೂ ಹೆಚ್ಚು ಮತದಾರರಿದ್ದು, ದ್ವೀಪದಲ್ಲಿ ಐದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚುನಾವಣೆ ಹಿನ್ನಲೆ ಸಿಬ್ಬಂದಿ ಇವಿಎಂ ವಿವಿಪ್ಯಾಟ್ ಸೇರಿದಂತೆ ಮತದಾನಕ್ಕೆ ಬೇಕಾದ ಎಲ್ಲ ಅಗತ್ಯ ವಸ್ತುಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಚುನಾವಣಾ ಸಿಬ್ಬಂದಿಗಳ ಜೊತೆಗೆ ಸುರಕ್ಷತೆ ದೃಷ್ಟಿಯಿಂದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ಶಿಯಾಲ್ಬೆಟ್ನಲ್ಲಿ ಮತದಾನ: ಶಿಯಾಲ್‌ಬೆಟ್ ದ್ವೀಪದಲ್ಲಿ ಕಳೆದ ಕೆಲವು ದಶಕಗಳಿಂದ ಚುನಾವಣೆಗಳನ್ನು ನಡೆಯುತ್ತಿದೆ. ನೀರಿನಿಂದ ಆವೃತವಾಗಿರುವ ದ್ವೀಪದಲ್ಲಿ ಮೀನುಗಾರರು ಮಾತ್ರ ನೆಲೆಸಿದ್ದು, ಒಟ್ಟು 7,757 ಮತಗಳಿವೆ.
ಇದನ್ನೂ ಓದಿ : ಗುಜರಾತ್ ಚುನಾವಣೆ: ಪ್ರಥಮ ಹಂತದ ಮತದಾನ ನಾಳೆ