ನವದೆಹಲಿ: ಬಹುನಿರೀಕ್ಷಿತ ಪಂಚ ರಾಜ್ಯಗಳ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ಕೊನೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಮೇ 2ರಂದು ಎಲ್ಲ ರಾಜ್ಯಗಳ ಚುನಾವಣೆ ಫಲಿತಾಂಶ ಬಹಿರಂಗಗೊಳ್ಳಲಿದೆ.
![Election Commission](https://etvbharatimages.akamaized.net/etvbharat/prod-images/10789573_twdfdfd.jpg)
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣೆ ಆಯೋಗದ ಮುಖ್ಯಸ್ಥ ಸುನಿಲ್ ಅರೋರಾ, ಎಲ್ಲ ರಾಜ್ಯಗಳಲ್ಲೂ ಇಂದಿನಿಂದಲೇ ನೀತಿ ಸಂಹಿತೆ ಜಾರಿಗೊಳ್ಳಲಿದೆ ಎಂದು ಹೇಳಿದ್ದಾರೆ. ಇದರ ಜತೆಗೆ ಈ ಸಲ ಆನ್ಲೈನ್ ಮೂಲಕ ನಾಮಪತ್ರ ಸಲ್ಲಿಕೆ ಮಾಡಲು ಅವಕಾಶ ನೀಡಿದ್ದಾರೆ.
ಯಾವ ರಾಜ್ಯದಲ್ಲಿ ಎಂದು ವೋಟಿಂಗ್, ಎಷ್ಟು ಹಂತ: ಇಲ್ಲಿದೆ ವಿವರ
1.ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ : 294 ಕ್ಷೇತ್ರ
8 ಹಂತಗಳಲ್ಲಿ ನಡೆಯಲಿದೆ ಚುನಾವಣೆ
ಮೊದಲ ಹಂತ: ಮಾರ್ಚ್ 27
ಎರಡನೇ ಹಂತ: ಏಪ್ರಿಲ್ 1
ಮೂರನೇ ಹಂತ: ಏಪ್ರಿಲ್ 6
ನಾಲ್ಕನೇ ಹಂತ: ಏಪ್ರಿಲ್ 10
ಐದನೇ ಹಂತ: ಏಪ್ರಿಲ್ 17
ಆರನೇ ಹಂತ: ಏಪ್ರಿಲ್ 22
ಏಳನೇ ಹಂತ: ಏಪ್ರಿಲ್ 26
ಎಂಟನೇ ಹಂತ: ಏಪ್ರಿಲ್ 29
ಮೇ 2ರಂದು ಮತದಾನದ ಫಲಿತಾಂಶ
2.ತಮಿಳುನಾಡು: 234 ಕ್ಷೇತ್ರಗಳಿಗೂ ಒಂದೇ ಹಂತದಲ್ಲಿ ಮತದಾನ
ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ
ಮೇ 2ರಂದು ಮತದಾನದ ಫಲಿತಾಂಶ
3.ಪುದುಚೇರಿ : 30 ವಿಧಾನಸಭೆ ಸ್ಥಾನ
ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ
ಮೇ 2ರಂದು ಮತದಾನದ ಫಲಿತಾಂಶ
ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ: ಮೇ. 2ರಂದು ಎಲ್ಲ ರಾಜ್ಯಗಳ ಚುನಾವಣೆ ಫಲಿತಾಂಶ
4.ಕೇರಳ ವಿಧಾನಸಭೆ ಚುನಾವಣೆ
140 ಸ್ಥಾನಕ್ಕೂ ಒಂದೇ ಹಂತದಲ್ಲಿ ಮತದಾನ
ಏಪ್ರಿಲ್ 6ರಂದು ವೋಟಿಂಗ್
ಮೇ 2ರಂದು ಮತದಾನದ ಫಲಿತಾಂಶ
5.ಅಸ್ಸೋಂ ವಿಧಾನಸಭೆ ಕ್ಷೇತ್ರ: ಒಟ್ಟು ಸ್ಥಾನ 126
ಮೂರ ಹಂತಗಳಲ್ಲಿ ನಡೆಯಲಿರುವ ವೋಟಿಂಗ್
ಮೊದಲ ಹಂತ: ಮಾರ್ಚ್ 27
ಎರಡನೇ ಹಂತ: ಏಪ್ರಿಲ್ 1
ಮೂರನೇ ಹಂತ: ಏಪ್ರಿಲ್ 6
ಮೇ 2ರಂದು ಮತದಾನದ ಫಲಿತಾಂಶ
ಐದು ರಾಜ್ಯಗಳ 824 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 18.68 ಕೋಟಿ ಮತದಾರರು ವೋಟ್ ಮಾಡಲಿದ್ದಾರೆ. ಇದಕ್ಕಾಗಿ 2.7 ಲಕ್ಷ ವೋಟಿಂಗ್ ಕೇಂದ್ರ ಇರಲಿವೆ. ಕೋವಿಡ್ ಕಾರಣ ಒಂದು ಗಂಟೆ ಕಾಲ ಹೆಚ್ಚು ಮತದಾನಕ್ಕೆ ಅವಕಾಶ ನೀಡಲಾಗಿದೆ.