ETV Bharat / bharat

Assembly Election 2022: ಪಂಚರಾಜ್ಯ ಫೈಟ್.. ಫೆ. 10ರಿಂದ 7 ಹಂತದಲ್ಲಿ ಮತದಾನ, ಮಾರ್ಚ್​ 10ಕ್ಕೆ ರಿಸಲ್ಟ್​ ​ - Assembly elections in five states

Five states Assembly Election-2022: ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಾಧ್ಯಮಗೋಷ್ಟಿ ನಡೆಸಿ, ಮತದಾನದ ದಿನಾಂಕ ಘೋಷಣೆ ಮಾಡಿದೆ.

five state assembly polls
five state assembly polls
author img

By

Published : Jan 8, 2022, 3:44 PM IST

Updated : Jan 8, 2022, 5:16 PM IST

ನವದೆಹಲಿ: ಉತ್ತರ ಪ್ರದೇಶ, ಗೋವಾ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆ ಚುನಾಣೆಯ ದಿನಾಂಕ ಘೋಷಿಸಲಾಗಿದೆ. ಮಾಧ್ಯಮಗೋಷ್ಟಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥರು ಐದು ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಚುನಾವಣೆ ನಡೆಸುವ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್​ ಚಂದ್ರ ಸೇರಿದಂತೆ ಆಯೋಗದ ವಿವಿಧ ಅಧಿಕಾರಿಗಳು ಮಾಧ್ಯಮಗೋಷ್ಟಿಯಲ್ಲಿ ಭಾಗಿಯಾಗಿದ್ದರು.

Assembly Election 2022
ಪಂಚ ರಾಜ್ಯಗಳ ಮತದಾನದ ದಿನಾಂಕ ಇಂತಿದೆ...

ಕೇಂದ್ರ ಚುನಾವಣಾ ಆಯೋಗದ ಮಾಧ್ಯಮಗೋಷ್ಟಿಯ ಪ್ರಮುಖಾಂಶಗಳು

ಚುನಾವಣೆ ದಿನಾಂಕ ಘೋಷಣೆ(seven-phase polls in 5 states)

ಐದು ರಾಜ್ಯಗಳಲ್ಲಿ ಒಟ್ಟು ಏಳು ಹಂತಗಳಲ್ಲಿ ಚುನಾವಣೆ

  • ಉತ್ತರ ಪ್ರದೇಶ: ಫೆ. 10ರಂದು ಮೊದಲ ಹಂತದ ಮತದಾನ
  • ಫೆ. 14ರಂದು ಎರಡನೇ ಹಂತದ ವೋಟಿಂಗ್​
  • 20 ಫೆ. 3ನೇ ಹಂತದ ಮತದಾನ
  • 23 ಫೆ. 4ನೇ ಹಂತದ ಮತದಾನ
  • 2ನೇ ಹಂತ ಉತ್ತರ ಪ್ರದೇಶ, ಪಂಜಾಬ್​, ಉತ್ತರಾಖಂಡ ಹಾಗೂ ಗೋವಾದಲ್ಲಿ ಫೆ. 14ರಂದು
  • ಫೆ. 27ರಂದು 5ನೇ ಹಂತದ ಮತದಾನ

  • ಮಾರ್ಚ್​ 10ರಂದು ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶ ಬಹಿರಂಗ
  • ಮಣಿಪುರದಲ್ಲಿ ಎರಡು ಹಂತದಲ್ಲಿ ಚುನಾವಣೆ
  • ಉತ್ತರಾಖಂಡ, ಗೋವಾದಲ್ಲಿ ಒಂದೇ ಹಂತದಲ್ಲಿ ವೋಟಿಂಗ್​
  • ಫೆ. 10ರಿಂದ ಮಾರ್ಚ್​ 7ರೊಳಗೆ ಎಲ್ಲ ರಾಜ್ಯದ ಚುನಾವಣೆ ಮುಕ್ತಾಯ
  • ಉತ್ತರ ಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ
  • ಪಂಜಾಬ್, ಗೋವಾ, ಉತ್ತರಾಖಂಡದಲ್ಲಿ ಒಂದೇ ಹಂತ, ಮಣಿಪುರದಲ್ಲಿ ಎರಡು ಹಂತದ ವೋಟಿಂಗ್
  • ಕೋವಿಡ್​ ಮಾರ್ಗಸೂಚಿ ಗಮನದಲ್ಲಿಟ್ಟುಕೊಂಡು ಚುನಾವಣೆ ನಡೆಸಲು ನಿರ್ಧಾರ
  • ಐದು ರಾಜ್ಯಗಳಿಂದ 690 ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆ
  • ಕೋವಿಡ್ ಮಾರ್ಗಸೂಚಿಗೆ ಹೆಚ್ಚಿನ ಆದ್ಯತೆ
  • ಮಾಸ್ಕ್​, ಸ್ಯಾನಿಟೈಸರ್​​ ಬಳಕೆ ಕಡ್ಡಾಯಗೊಳಿಸಲಾಗಿದ್ದು, ಚುನಾವಣಾ ಸಿಬ್ಬಂದಿ ಶೇ. 60ರಷ್ಟು ಏರಿಕೆ
  • ವಿಶೇಷ ಚೇತನರು, ಮಹಿಳಾ ವೋಟರ್ಸ್​ಗೆ ವಿಶೇಷ ಮತಕೇಂದ್ರ ರಚನೆಗೆ ನಿರ್ಧಾರ
  • ಐದು ರಾಜ್ಯಗಳಲ್ಲಿ ಚುನಾವಣೆ ನಡೆಸಲು ಈಗಾಗಲೇ ಎಲ್ಲ ರೀತಿಯ ಸಿದ್ಧತೆ ಮಾಡಲಾಗಿದೆ
  • ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಲು ನಿರ್ಧಾರ
  • ಎಲ್ಲ ಮತಗಟ್ಟೆಗಳಲ್ಲಿ ಥರ್ಮಲ್​ ಸ್ಕ್ರೀನಿಂಗ್, ಮಾಸ್ಕ್​, ಸ್ಯಾನಿಟೈಸರ್​ಗಳ ಬಳಕೆ ಕಡ್ಡಾಯ
  • 18.34 ಕೋಟಿ ಮತದಾರರು ಐದು ರಾಜ್ಯಗಳಲ್ಲಿ ಮತದಾನ
  • 29.4 ಲಕ್ಷ ಹೊಸ ಮತದಾರರಿಂದ ವೋಟಿಂಗ್​
  • ಎಲ್ಲ ಮತಗಟ್ಟೆ ಗ್ರೌಂಡ್​ ಫ್ಲೋರ್​​ನಲ್ಲಿ ನಿರ್ಮಾಣ ಮಾಡಲು ನಿರ್ಧಾರ
  • ಐದು ರಾಜ್ಯಗಳಲ್ಲಿ ಒಟ್ಟು 1,15,368 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದೆ
  • 80 ವರ್ಷ ಮೇಲ್ಪಟ್ಟ ವೃದ್ಧರು, ವಿಶೇಷ ಚೇತನರಿಗೆ ವೋಟ್ ಮಾಡಲು ವ್ಹೀಲ್​ ಚೇರ್​
  • ಯಾವುದೇ ರೀತಿಯ ಅಕ್ರಮ ಚುನಾವಣೆಗೆ ಅವಕಾಶವಿಲ್ಲ, ಪ್ರತಿ ಮತಕ್ಷೇತ್ರಕ್ಕೂ ಅಧಿಕಾರಿ ನೇಮಕ
  • ಮತದಾನಕ್ಕಾಗಿ ವಿವಿಪ್ಯಾಟ್​, EVMಗಳ ಬಳಕೆಗೆ ನಿರ್ಧಾರ
  • ಕೊರೊನಾ ಸೋಂಕಿತರಿಗೆ ಮನೆಯಿಂದಲೇ ಪೋಸ್ಟಲ್​ ಮತದಾನ ಮಾಡಲು ಅವಕಾಶ
  • ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸದಂತೆ ಸೂಚನೆ, ಅಭ್ಯರ್ಥಿಗಳ ಎಲೆಕ್ಷನ್​ ಖರ್ಚಿನಲ್ಲಿ ಏರಿಕೆ
  • ಅಭ್ಯರ್ಥಿಗಳಿಗೆ ಆನ್​ಲೈನ್​ ಮೂಲಕ ನಾಮಪತ್ರ ಸಲ್ಲಿಕೆಗೆ ಅವಕಾಶ
  • ಐಎಎಸ್, ಐಪಿಎಸ್​ ಹಾಗೂ ಐಎಫ್​ಎಸ್​ ಅಧಿಕಾರಿಗಳು ಚುನಾವಣಾ ಅಧಿಕಾರಿಗಳಾಗಿ ನಿಯೋಜನೆ
  • ಅಭ್ಯರ್ಥಿಗಳು ತಮ್ಮ ಕ್ರಿಮಿನಲ್​ ಮಾಹಿತಿ ನೀಡುವುದು ಕಡ್ಡಾಯ
  • ಚುನಾವಣಾ ಸಿಬ್ಬಂದಿಗೆ ಎರಡು ಡೋಸ್ ಕೋವಿಡ್ ಲಸಿಕೆ ಕಡ್ಡಾಯ, ಬೂಸ್ಟರ್​ ವ್ಯಾಕ್ಸಿನ್​​
  • ಚುನಾವಣಾ ಸಿಬ್ಬಂದಿ ಕೋವಿಡ್​​ ಫ್ರಂಟ್​ಲೈನ್​ ವಾರಿಯರ್ಸ್​​ ರೀತಿಯಲ್ಲಿ ಬಳಕೆ
  • ಚುನಾವಣೆ ನಡೆಸಲು ಅನೇಕ ಸುತ್ತಿನ ಮಾತುಕತೆ ನಂತರ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ
  • ಮಣಿಪುರದಲ್ಲಿ ಅಭ್ಯರ್ಥಿಗಳು 28 ಲಕ್ಷ ರೂ. ಖರ್ಚು ಮಾಡಲು ಸೂಚನೆ
  • ಮತದಾನದ ಅವಧಿ 1 ಗಂಟೆ ಏರಿಕೆ ಮಾಡಿದ ಕೇಂದ್ರ ಚು. ಆಯೋಗ
  • ವರ್ಚುವಲ್​ ಕ್ಯಾಂಪೇನ್​ಗೂ ಅವಕಾಶ
  • 15 ಜನವರಿವರೆಗೆ ಯಾವುದೇ ರೀತಿಯ ಸಾರ್ವಜನಿಕ ಸಭೆಗಳಿಗೆ ಅವಕಾಶವಿಲ್ಲ
  • ಯಾವುದೇ ರೀತಿಯ ಪಾದಯಾತ್ರೆ, ಚುನಾವಣಾ ಸಭೆ, ರೋಡ್​ ಶೋಗಳಿಗೆ ಅವಕಾಶವಿಲ್ಲ
  • ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಿದ ಕೇಂದ್ರ ಚುನಾವಣಾ ಆಯೋಗ

Last Updated : Jan 8, 2022, 5:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.