ETV Bharat / bharat

500 ರೂಪಾಯಿಗೆ ಜಗಳ: ಒಡಹುಟ್ಟಿದ ತಮ್ಮನನ್ನೇ ಹೊಡೆದು ಕೊಂದ ಅಣ್ಣ!

author img

By

Published : Jul 31, 2021, 3:19 PM IST

500 ರೂಪಾಯಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಹೊಡೆದು ಕೊಲೆ ಮಾಡಿರುವ ಘಟನೆ ಬಿಹಾರದ ಕೈಮೂರ್​ನಲ್ಲಿ ನಡೆದಿದೆ.

elder brother killed younger brother
elder brother killed younger brother

ಕೈಮೂರ್​(ಬಿಹಾರ): ಕೇವಲ 500ರೂಪಾಯಿ ಆಸೆಗೋಸ್ಕರ ಒಡಹುಟ್ಟಿದ ತಮ್ಮನನ್ನೇ ಅಣ್ಣನೊಬ್ಬ ಹೊಡೆದು ಕೊಲೆ ಮಾಡಿರುವ ಘಟನೆ ನಡೆದಿದ್ದು, ಅಪರಾದವೆಸಗಿರುವ ಅಣ್ಣನನ್ನ ಈಗಾಗಲೇ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಿಹಾರದ ಕೈಮೂರ್​​ನಲ್ಲಿ ಈ ಘಟನೆ ನಡೆದಿದ್ದು, 500ರೂಪಾಯಿ ನೀಡುವಂತೆ ಸಹೋದರನಾದ ಖುಷಿ ಶರ್ಮಾ ಬಳಿ ಅಣ್ಣ ರಾಮು ಕೇಳಿಕೊಂಡಿದ್ದಾನೆ. ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರಿಂದ ಆಕ್ರೋಶಗೊಂಡಿರುವ ರಾಮು ಆತನಿಗೆ ಹಿಗ್ಗಾಮುಗ್ಗಾ ಥಳಿಸಿ ತದನಂತರ ಕೊಲೆ ಮಾಡಿದ್ದಾನೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು, ಆರೋಪಿಯ ಬಂಧನ ಮಾಡಿದ್ದಾರೆ.

ಇದನ್ನೂ ಓದಿರಿ: GST ಹಣ ಕಟ್ಟಬೇಡಿ: ನರೇಂದ್ರ ಮೋದಿ ಸಹೋದರನಿಂದ ವ್ಯಾಪಾರಿಗಳಿಗೆ ಮನವಿ

ಏನಿದು ಪ್ರಕರಣ

ಬಂಧನಕ್ಕೊಳಗಾಗಿರುವ ಆರೋಪಿಯನ್ನ ವಿಚಾರಣೆಗೊಳಪಡಿಸಿದಾಗ, ಸಹೋದರ ಖುಷಿ ಶರ್ಮಾ ಮೇಲಿಂದ ಮೇಲೆ ತನ್ನ ಜೇಬಿನಿಂದ ಹಣ ತೆಗೆದುಕೊಂಡು ಮದ್ಯಪಾನ ಮಾಡುತ್ತಿದ್ದನು. ಈ ರೀತಿ ಮಾಡದಂತೆ ಅನೇಕ ಸಲ ಬುದ್ಧಿವಾದ ಹೇಳಿದ್ದೆ. ಇಷ್ಟಾದರೂ 500ರೂ. ಕಳ್ಳತನ ಮಾಡಿದ್ದನು. ವಾಪಸ್ ನೀಡುವಂತೆ ಕೇಳಿದಾಗ ಆತ ನಿರಾಕರಿಸಿದ್ದರಿಂದ ಕೋಪದಲ್ಲಿ ಈ ರೀತಿಯಾಗಿ ನಡೆದುಕೊಂಡಿದ್ದೇನೆ. ಆದರೆ, ನಾನು ಅಷ್ಟೊಂದು ಕ್ರೂರವಾಗಿ ಆತನ ಮೇಲೆ ಹಲ್ಲೆ ನಡೆಸಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾನೆ.

ಇದೇ ಘಟನೆ ಬಗ್ಗೆ ಗ್ರಾಮಸ್ಥರು ಸಹ ಮಾತನಾಡಿದ್ದು, ಇಬ್ಬರ ನಡುವೆ ಮೇಲಿಂದ ಮೇಲೆ ಜಗಳ ನಡೆಯುತ್ತಲೇ ಇತ್ತು. ಇದೇ ಕಾರಣಕ್ಕಾಗಿ ಇಂದು ಬೆಳಗ್ಗೆ ಸಹ ಜಗಳವಾಗಿದೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.