ಮುಂಬೈ: ಮಹಾರಾಷ್ಟ್ರ ರಾಜಕೀಯ ನಾಟಕಕ್ಕೆ ಅಧಿಕೃತ ಅಂಕೆ ಬಿದ್ದಿದೆ. ಇಂದು ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ ಸಿಎಂ ಏಕನಾಥ್ ಶಿಂದೆ 162 ಮತಗಳನ್ನು ಪಡೆಯುವ ಮೂಲಕ ಬಹುಮತ ಸಾಬೀತು ಮಾಡಿದ್ದಾರೆ. ಈ ಮೂಲಕ ಉದ್ಧವ್ ಠಾಕ್ರೆಗೆ ಮತ್ತೊಂದು ಪೆಟ್ಟು ನೀಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಅಧಿವೇಶನದ ಆರಂಭಗೊಂಡ ಬಳಿಕ ಬಿಜೆಪಿಯ ಸುಧೀರ್ ಮುಂಗಂಟಿವಾರ್ ಮತ್ತು ಶಿವಸೇನೆಯ ಭರತ್ ಗೊಗವಾಲೆ ಅವರು ವಿಶ್ವಾಸ ಮತವನ್ನು ಮಂಡಿಸಿದರು. ಬಳಿಕ ಸಭಾಪತಿ ರಾಹುಲ್ ನಾರ್ವೇಕರ್ ಸರ್ವಸದಸ್ಯರ ಅನುಮತಿಯ ಮೇರೆಗೆ ಸದನವನ್ನು ಧ್ವನಿಮತಕ್ಕೆ ಹಾಕಿದರು.
ಈ ವೇಳೆ ನಡೆದ ಪ್ರಕ್ರಿಯೆಯಲ್ಲಿ ಸಿಎಂ ಏಕನಾಥ್ ಶಿಂದೆ 162 ಮತಗಳನ್ನು ಪಡೆದು ಬಹುಮತ ಸಾಬೀತು ಮಾಡಿದರು. ಅವರ ವಿರುದ್ಧ 99 ಮತಗಳು ಚಲಾವಣೆಯಾದವು. 23 ನಿಮಿಷಗಳಲ್ಲಿ ಸರ್ಕಾರ ಬಹುಮತ ಪಡೆಯಿತು.
ಓದಿ; ಏಕನಾಥ್ ಶಿಂದೆಗೆ ಇಂದು 'ಬಹುಮತ' ಪರೀಕ್ಷೆ; ಬಿಜೆಪಿ-ಶಿವಸೇನೆ ಮೈತ್ರಿಗೆ ಸುಲಭ ಗೆಲುವಿನ ಗುರಿ