ಮುಂಗರ್(ಬಿಹಾರ) : 2ನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದುರುಳರು, ಅಷ್ಟು ಸಾಲದು ಎಂಬಂತೆ ಆಕೆಯ ಕಣ್ಣು ಮತ್ತು ಉಗುರುಗಳನ್ನು ಕಿತ್ತು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಬಿಹಾರದ ಮುಂಗೇರ್ ಜಿಲ್ಲೆಯಲ್ಲಿ ಇಂತಹದೊಂದು ರಾಕ್ಷಸೀ ಕೃತ್ಯ ನಡೆದಿದೆ.
ತಂದೆಯ ಜೊತೆ ಮೀನುಗಾರಿಕೆಗೆಂದು ಬಾಲಕಿ ಗಂಗಾ ನದಿ ತೀರಕ್ಕೆ ಹೋಗಿದ್ದಳು. ಬಳಿಕ ಆಕೆಯನ್ನು ಮನೆಗೆ ಹೋಗಲು ಅಪ್ಪ ಸೂಚಿಸಿದ್ದು, ಆಕೆ ದೋಣಿ ಇಳಿದು ಹೋಗಿದ್ದಾಳೆ. ತಂದೆ ಮನೆಗೆ ಹೋದಾಗ ಮಗಳು ಇನ್ನೂ ಬಂದಿಲ್ಲದ ವಿಚಾರ ತಿಳಿದ ಪೋಷಕರು, ಹುಡುಕಲು ಶುರು ಮಾಡಿದ್ದಾರೆ.
ಸಫಿಯಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರ ಇಟ್ಟಿಗೆ ತಯಾರಿಕಾ ಘಟಕದ ಬಳಿ ಸಂತ್ರಸ್ತೆಯ ಮೃತದೇಹ ಬಿದ್ದಿರುವುದನ್ನು ಗ್ರಾಮದ ಕೆಲ ಮಕ್ಕಳು ನೋಡಿ ವಿಷಯ ಮುಟ್ಟಿಸಿದ್ದಾರೆ.
ಇದನ್ನೂ ಓದಿ: ಯುವತಿಗೆ ಲೈಂಗಿಕ ಕಿರುಕುಳ ಆರೋಪ: ಚಲನಚಿತ್ರ ನಿರ್ಮಾಣ ಕಂಪನಿಯ ಸಿಇಓ ವಿರುದ್ಧ ದೂರು
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಂತ್ರಸ್ತೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅತ್ಯಾಚಾರದ ಬಳಿಕ ಆಕೆಯ ಕಣ್ಣು ಮತ್ತು ಉಗುರುಗಳನ್ನು ಕಿತ್ತು ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.