ETV Bharat / bharat

ಪುರಾತನ ಲೋಹದ ವಿಗ್ರಹ ಕರಗಿಸಿ, ಗಟ್ಟಿಗಳನ್ನಾಗಿ ಮಾರ್ಪಡಿಸಿದ ಎಂಟು ಜನ ಪೊಲೀಸರು ಸಸ್ಪೆಂಡ್​ - ವಿಗ್ರಹ ಪತ್ತೆ

ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಪುರಾತನ ಲೋಹದ ವಿಗ್ರಹವನ್ನು ಪೊಲೀಸರು ಕರಗಿಸಿ, ಗಟ್ಟಿಗಳನ್ನಾಗಿ ಮಾರ್ಪಡಿಸಿದ ಪ್ರಕರಣದಲ್ಲಿ ಎಂಟು ಜನ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ.

eight-police-personnel-suspended-in-making-biscuits-by-melting-ancient-idol-case-in-haryana
ಪುರಾತನ ಲೋಹದ ವಿಗ್ರಹ ಕರಗಿಸಿ, ಗಟ್ಟಿಗಳನ್ನಾಗಿ ಮಾರ್ಪಡಿಸಿದ ಎಂಟು ಪೊಲೀಸರು ಸಸ್ಪೆಂಡ್​
author img

By

Published : Mar 18, 2023, 6:10 PM IST

ಹಿಸಾರ್ (ಹರಿಯಾಣ): ಪುರಾತನ ಲೋಹದ ವಿಗ್ರಹವನ್ನು ಪೊಲೀಸರು ಕರಗಿಸಿ, ಅದನ್ನು ಗಟ್ಟಿ (ಬಿಸ್ಕೆಟ್)ಗಳನ್ನಾಗಿ ಮಾರ್ಪಡಿಸಿದ ಪ್ರಕರಣ ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಿಕೊಂಡು, ಎಂಟು ಜನ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಜಪ್ತಿ ಮಾಡಿದ ಯಾವುದೇ ವಸ್ತುವನ್ನೂ ಪೊಲೀಸರು ಅದೇ ಸ್ಥಿತಿಯಲ್ಲಿ ತಮ್ಮ ವಶದಲ್ಲಿ ಇರಿಸಿಕೊಳ್ಳಬೇಕು. ಆದರೆ, ಪುರಾತನ ಲೋಹದ ವಿಗ್ರಹವನ್ನು ಪೊಲೀಸರು ಕರಗಿಸಿ ಗಟ್ಟಿಗಳನ್ನಾಗಿ ಪರಿವರ್ತಿಸಿರುವ ಪೊಲೀಸರ ನಡೆ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಹನ್ಸಿ ಪೊಲೀಸ್‌ ಸಿಐಎ-2 ಠಾಣೆಯ ಪ್ರಭಾರಿ ಎಸ್‌ಐ ನಿತಿನ್ ತರಾರ್​, ಎಸ್‌ಐ ಬಾಲ್ಕಿಶನ್, ಎಎಸ್‌ಐ ಸಜನ್ ಸಿಂಗ್, ಸುರೇಶ್ ಸಿಂಗ್, ಹವಾಲ್ದಾರ್​ಗಳಾದ ರವೀಂದ್ರ ಸಿಂಗ್, ಜುಗ್ವೇಂದ್ರ ಸಿಂಗ್, ವಿಜಯ್ ಮತ್ತು ಸುನೀಲ್ ಸೇರಿ ಮಂದಿಯನ್ನು ಅಮಾನತುಗೊಳಿಸಿ ಹಿಸಾರ್ ರೇಂಜ್ ಎಡಿಜಿಪಿ ಶ್ರೀಕಾಂತ್ ಜಾಧವ್ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ?: ಇಲ್ಲಿನ ಹನ್ಸಿ ಪ್ರದೇಶದಲ್ಲಿ ಉತ್ತರ ಪ್ರದೇಶದ ಶಹಜಹಾನ್‌ಪುರದ ನಿವಾಸಿ ಬಬ್ಲು ಎಂಬಾತ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿದ್ದಾರೆ. ಫರೂಕಾಬಾದ್‌ನ ಮಾಣಿಕ್‌ಪುರ ಗ್ರಾಮದಲ್ಲಿ ಬಬ್ಲು ಸಂಬಂಧಿ ರಾಮದಾಸ್ ಎಂಬುವರರು ನೆಲೆಸಿದ್ದಾರೆ. ಈ ರಾಮದಾಸ್​ ಕಳೆದ ಜನವರಿ ತಿಂಗಳಲ್ಲಿ ತಮ್ಮ ಗ್ರಾಮದಲ್ಲಿ ಭೂಮಿ ಸಮತಟ್ಟು ಮಾಡುವಾಗ ಈ ಪುರಾತನ ಲೋಹದ ವಿಗ್ರಹ ಪತ್ತೆಯಾಗಿತ್ತು.

ಈ ವಿಷಯ ಬಬ್ಲುಗೆ ರಾಮದಾಸ್​ ತಿಳಿಸಿದ್ದಾನೆ. ನಂತರ ರಾಮದಾಸ್ ಮತ್ತು ಬಬ್ಲು ಇಬ್ಬರು ಕೂಡ ಸರಿವೇಂದ್ರ, ಬಿಮ್ಲೇಶ್ ಎಂಬುವವರೊಂದಿಗೆ ಸೇರಿಕೊಂಡು ಜನವರಿ 12ರಂದು ಆಭರಣ ವ್ಯಾಪಾರಿ ಬಳಿ ಕೆಲಸ ಮಾಡುತ್ತಿದ್ದ ವಿವೇಕ್ ಪಾಟೀಲ್​ ಎಂಬುವವರನ್ನು ವಿಗ್ರಹ ಸಮೇತವಾಗಿ ಭೇಟಿ ಮಾಡಿದ್ದರು. ಅಷ್ಟರಲ್ಲಿ, ಅದು ಹೇಗೋ ಈ ಮಾಹಿತಿ ತಿಳಿದ ಹನ್ಸಿ ಸಿಐಎ-2 ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಲ್ಲದೇ, ಪೊಲೀಸ್ ಸಿಬ್ಬಂದಿ ಬಬ್ಲು ಮತ್ತು ಆತನ ಸಹಚರರನ್ನು ಹಿಡಿದು ಥಳಿಸಿ ಬೆದರಿಕೆ ಹಾಕಿದ್ದರು.

ಇದರ ಮರು ದಿನ ವಿವೇಕ್​ ಪಾಟೀಲ್ ಪೊಲೀಸರನ್ನು ಭೇಟಿ ಮಾಡಿ ಬಬ್ಲು, ರಾಮದಾಸ್, ಸರಿವೇಂದ್ರ, ಬಿಮ್ಲೇಶ್​ನನ್ನು ಬಿಡುಗಡೆ ಮಾಡಿಸಿದ್ದರು. ಇದರಿಂದ ನಾಲ್ವರೂ ಉತ್ತರ ಪ್ರದೇಶಕ್ಕೆ ಮರಳಿದ್ದರು. ಇದೇ ಸಂದರ್ಭದಲ್ಲಿ 14 ಲಕ್ಷ ರೂಪಾಯಿಗೆ ವಿಗ್ರಹ ಮಾರಾಟವಾಗಿದೆ ಎಂದು ವಿವೇಕ್​ ಹೇಳಿದ್ದರು. ಮತ್ತೊಂದೆಡೆ, ಇದು ಕಳ್ಳತನವಾದ ವಿಗ್ರಹ ಎಂದು ಹೇಳಿ ಪೊಲೀಸರು ಆ ವಿಗ್ರಹವನ್ನು ಸ್ವಾಧೀನಪಡಿಸಿಕೊಂಡಿದ್ದರು.

ಆದರೆ, ಇದಾದ ನಂತರ ಬಬ್ಲು ಮತ್ತೆ ವಿಗ್ರಹದ ವಿಷಯವನ್ನು ಎತ್ತಿದ್ದರು. ಅಲ್ಲದೇ, ಈ ಸಂಬಂಧ ಮಾರ್ಚ್ 6ರಂದು ಹಿಸಾರ್ ಐಜಿಗೆ ಬಬ್ಲು ದೂರು ನೀಡಿದ್ದರು. ಈ ವೇಳೆ ಯಾವುದೇ ರೀತಿಯ ಕ್ರಮವನ್ನು ಪೊಲೀಸರು ತೆಗೆದುಕೊಂಡಿಲ್ಲ. ಹೀಗಾಗಿಯೇ ಬಬ್ಲು ಹಿಸಾರ್ ರೇಂಜ್‌ ಎಡಿಜಿ ಶ್ರೀಕಾಂತ್ ಜಾಧವ್​ ಅವರಿಗೆ ದೂರು ನೀಡಿದ್ದರು. ಆಗ ಈ ಕುರಿತ ತನಿಖೆಗೆ ಹನ್ಸಿ ಡಿಎಸ್ಪಿಗೆ ಎಡಿಜಿ ಸೂಚಿಸಿದ್ದರು.

ಚಿನ್ನದ ಶಂಕೆ ಮೇಲೆ ವಿಗ್ರಹ ಕರಗಿಸಿದ್ರಾ ಪೊಲೀಸರು?: ಪುರಾತನ ಲೋಹದ ವಿಗ್ರಹದ ಬಗ್ಗೆ ತನಿಖೆ ಆರಂಭಿಸಿದಾಗ ಅಚ್ಚರಿ ವಿಷಯ ಬೆಳಕಿಗೆ ಬಂದಿದೆ. ವಶಕ್ಕೆ ಪಡೆದಿದ್ದ ವಿಗ್ರಹವನ್ನು ಲಾಕರ್​​ನಲ್ಲಿ ಇಡುವ ಬದಲಿಗೆ ಪೊಲೀಸರು ಅದನ್ನು ಅಕ್ಕಸಾಲಿಗರಿಗೆ ಕೊಟ್ಟು ಕರಗಿಸಿರುವುದು ಬಯಲಾಗಿದೆ. ಈ ವಿಗ್ರಹ ಎಷ್ಟು ಹಳೆಯದು?, ಅದರಲ್ಲಿ ಎಷ್ಟು ಚಿನ್ನವಿದೆ ಎಂಬುವುದನ್ನು ತಿಳಿಯಲು ಪೊಲೀಸರು ವಿಗ್ರಹವನ್ನು ಕರಗಿಸಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.

ಸದ್ಯ ಪುರಾತನ ವಿಗ್ರಹವನ್ನು ಕರಗಿಸಿ, ಗಟ್ಟಿಗಳಾಗಿ ಮಾರ್ಪಡಿಸಿದ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದೆ. ಈ ಪ್ರಕರಣದ ಆರೋಪಿತ ಎಂಟು ಜನ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಲ್ಲದೇ, ಈ ಲೋಹದ ಗಟ್ಟಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ತಜ್ಞರನ್ನು ಒಪ್ಪಿಸಲಾಗಿದೆ ಎಂದು ಎಡಿಜಿ ಶ್ರೀಕಾಂತ್ ಜಾಧವ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು : ಪುರಾತನ ಬುದ್ಧನ ವಿಗ್ರಹ ವಿದೇಶಕ್ಕೆ ಸಾಗಿಸಲು ಯತ್ನಿಸುತ್ತಿದ್ದ ಐವರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.