ETV Bharat / bharat

ಕಾಡು ಬೆಕ್ಕು ದಾಳಿಯಿಂದ ಎಂಟು ತಿಂಗಳ ಮಗು ಸಾವು.. ತಾಯಿ ಮೇಲೂ ಅಟ್ಯಾಕ್​ - ಈಟಿವಿ ಭಾರತ ಕನ್ನಡ

ರಾತ್ರಿ ತಾಯಿಯೊಂದಿಗೆ ಮಲಗಿದ್ದ ಮಗುವಿನ ಮೇಲೆ ಕಾಡು ಬೆಕ್ಕು ದಾಳಿ ಮಾಡಿದ್ದರಿಂದ ಮಗು ಸಾವನ್ನಪ್ಪಿದೆ.

eight-month-old-innocent-died-in-wild-cat-attack
ಪ್ರತಾಪಗಢ: ಕಾಡು ಬೆಕ್ಕು ದಾಳಿಯಿಂದ ಎಂಟು ತಿಂಗಳ ಮಗು ಸಾವು
author img

By

Published : Dec 10, 2022, 6:35 PM IST

ಪ್ರತಾಪಗಢ(ಉತ್ತರಪ್ರದೇಶ): ಕಾಡು ಬೆಕ್ಕಿನ ದಾಳಿಯಿಂದ ಎಂಟು ತಿಂಗಳ ಮಗು ಸಾವನ್ನಪ್ಪಿರುವ ಘಟನೆ ಪ್ರತಾಪಗಢ ಜಿಲ್ಲೆಯ ಕೊತ್ವಾಲಿ ಪ್ರದೇಶದಲ್ಲಿ ನಡೆದಿದೆ. ರಾತ್ರಿ ತಾಯಿಯೊಂದಿಗೆ ಮಲಗಿದ್ದ ಮಗುವಿನ ಮೇಲೆ ಬೆಕ್ಕು ದಾಳಿ ಮಾಡಿದೆ.

ಕೊತ್ವಾಲಿಯ ಮಾಹುಲಿ ನಿವಾಸಿ ಅಜಯ್​ ಗೌರ್​ ಎಂಬುವರು ರಾಜಸ್ಥಾನದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಐವರು ಹೆಣ್ಣು ಮಗುವಿನ ಬಳಿಕ ಪತ್ನಿ ಉಮಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಒಬ್ಬನೇ ಮಗನನ್ನು ಬಹಳಷ್ಟು ಪ್ರೀತಿಯಿಂದ ಕುಟುಂಬ ನೋಡಿಕೊಳ್ಳುತ್ತಿತ್ತು.

ಗುರುವಾರ ರಾತ್ರಿ ಪತ್ನಿ ಉಮಾ ತಮ್ಮ ಎಂಟು ತಿಂಗಳ ಮಗ ರಾಜ್​ ಜೊತೆ ಕೋಣೆಯಲ್ಲಿ ಮಲಗಿದ್ದರು. ಈ ವೇಳೆ ಕಾಡು ಬೆಕ್ಕು ಕಿಟಕಿಯಿಂದ ಒಳ ಪ್ರವೇಶಿಸಿದ್ದು, ಮಗುವಿನ ಮೇಲೆ ದಾಳಿ ಮಾಡಿದೆ. ಅಲ್ಲದೇ ಮೈಯೆಲ್ಲಾ ಪರಚಿ, ಕಚ್ಚಿ ಗಾಯಗೊಳಿಸಿದೆ. ಬಳಿಕ ಉಮಾ ಮೇಲೂ ಬೆಕ್ಕು ದಾಳಿ ಮಾಡಿದಾಗ ಅವರು ಎಚ್ಚರಗೊಂಡಾಗ ಬೆಕ್ಕು ಅಲ್ಲಿಂದ ಓಡಿ ಹೋಗಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಕಂಡು ಉಮಾ ಕಿರುಚಿದ್ದು, ಕುಟುಂಬಸ್ಥರು ಕೋಣೆಗೆ ಧಾವಿಸಿದ್ದಾರೆ. ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೃತಪಟ್ಟಿದೆ.

ಇದನ್ನೂ ಓದಿ:ಕೊರಟಗೆರೆ: ಇರಕಸಂದ್ರ ಕಾಲೋನಿಯಲ್ಲಿ ಬಾಲಕರ ಮೇಲೆ ಚಿರತೆ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.