ಅಮ್ರೇಲಿ: ಗುಜರಾತ್ನ ಅಮ್ರೆಲಿ ಜಿಲ್ಲೆಯ ಹಳ್ಳಿಯಲ್ಲಿ ಟ್ರಕ್‌ವೊಂದು ಗುಡಿಸಲಿಗೆ ನುಗ್ಗಿದ್ದು 8 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಇಂದು (ಸೋಮವಾರ) ಮುಂಜಾನೆ 2:30 ರ ಸುಮಾರಿಗೆ ನಡೆದಿದೆ.
ಅಮ್ರೆಲಿ ಜಿಲ್ಲೆಯ ಬಧದ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, 8 ಮತ್ತು 13 ವರ್ಷ ಇಬ್ಬರು ಮಕ್ಕಳು ಸೇರಿ ಎಂಟು ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಬೈಕ್ಗೆ ಕಾರು ಡಿಕ್ಕಿ : ಅಕ್ಕ-ತಮ್ಮ ಸ್ಥಳದಲ್ಲೇ ಸಾವು
ಕ್ರೇನ್ ರೀತಿ ಪರಿವರ್ತಿಸಿದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಗುಡಿಸಲಿಗೆ ನುಗ್ಗಿದೆ. ಇದರಿಂದ ನಿದ್ರೆಗೆ ಜಾರಿದ್ದ ಎಂಟು ಮಂದಿ ಅಸುನೀಗಿದ್ದಾರೆ ಎಂದು ಅಮ್ರೇಲಿ ಪೊಲೀಸ್ ವರಿಷ್ಠಾಧಿಕಾರಿ ನಿರ್ಲಿಪ್ತ್ ರಾಯ್ ಮಾಹಿತಿ ನೀಡಿದರು.