ರಾಯ್ಪುರ್(ಛತ್ತೀಸ್ಗಢ): ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ಆಚರಣೆಗೆ ದಿನಗಣನೇ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಮೇಕೆಗಳ ವ್ಯಾಪಾರ ಬಲು ಜೋರಾಗಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವಿಶೇಷತೆ ಹೊಂದಿರುವ ಮೇಕೆಗಳನ್ನ ಖರೀದಿ ಮಾಡಲಾಗುತ್ತಿದೆ. ಇದರ ಮಧ್ಯೆ ಕೆಲವೊಂದು ಮಾರುಕಟ್ಟೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮೇಕೆಗಳು ಜನರ ಗಮನ ಸೆಳೆಯುತ್ತಿವೆ.
ಸದ್ಯ ಛತ್ತೀಸ್ಗಢದ ರಾಯ್ಪುರ್ ಬಕ್ರಿ ಮಂಡಿ ಮಾರುಕಟ್ಟೆಯಲ್ಲಿ ಬರೋಬ್ಬರಿ 70 ಲಕ್ಷ ರೂಪಾಯಿ ಮೇಕೆ ಎಲ್ಲರ ಗಮನ ಸೆಳೆಯುತ್ತಿದೆ. ಮಧ್ಯಪ್ರದೇಶದ ಅನುಪ್ಪೂರ್ನ ದೇಶಿ ಮೇಕೆ ಇದಾಗಿದೆ. ಇದರ ದೇಹದ ಮೇಲೆ ಉರ್ದು ಭಾಷೆಯಲ್ಲಿ ಅಲ್ಲಾ ಮತ್ತು ಮೊಹಮ್ಮದ್ ಎಂದು ಬರೆಯಲಾಗಿದ್ದು, ಹೀಗಾಗಿ, ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಮಾಲೀಕ ವಾಹಿದ್ ಹುಸೇನ್.
ಇದನ್ನೂ ಓದಿರಿ: 'ತಾಕತ್ತಿದ್ದರೆ ನಮ್ಮನ್ನು ತಡೆಯಿರಿ' ದೇಶದ 133 ಕೋಟಿ ಭಾರತೀಯರಿಗೆ ಪ್ರಧಾನಿ ಸವಾಲು: ರಾಹುಲ್ ಟ್ವೀಟ್
ಈ ಮೇಕೆಗೆ ಈಗಾಗಲೇ ನಾಗ್ಪುರದಿಂದ 22 ಲಕ್ಷ ರೂಪಾಯಿ ಆಫರ್ ಬಂದಿದೆ. ಆದರೆ, ನಾನು ಮಾರಾಟ ಮಾಡಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಆಡಿನ ಚಿತ್ರ ಪೋಸ್ಟ್ ಮಾಡಿ, ನನ್ನ ನಂಬರ್ ಹಂಚಿಕೊಂಡಿದ್ದೇನೆ ಎಂದಿದ್ದಾರೆ ವ್ಯಾಪಾರಿ. ಇನ್ನು ಮಾಳವದಲ್ಲಿ 11 ಲಕ್ಷ ಮೌಲ್ಯದ ಮೇಕೆ ಮಾರಾಟವಾಗಿದ್ದು, ರಾಜಸ್ಥಾನದ ಜೈಪುರ್ದಲ್ಲಿ ಎರಡು ಲಕ್ಷ ರೂಪಾಯಿ ಮೌಲ್ಯದ ಮೇಕೆ ಮಾರಾಟ ಮಾಡಲಾಗಿದೆ.