ETV Bharat / bharat

ಶಿವಸೇನಾ ಸಂಸದನಿಗೆ ಇಡಿ ಶಾಕ್​.. ಸಂಜಯ್​ ರಾವತ್​ ಪತ್ನಿ ಆಸ್ತಿ ಮುಟ್ಟುಗೋಲು

author img

By

Published : Apr 5, 2022, 3:29 PM IST

Updated : Apr 5, 2022, 4:45 PM IST

1,034 ಕೋಟಿ ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಶಿವಸೇನೆ ನಾಯಕ ಸಂಜಯ್ ರಾವತ್ ಅವರ ಆಸ್ತಿಯನ್ನು ಜಪ್ತಿ ಮಾಡಿದೆ.

ಸಂಜಯ್​ ರಾವುತ್​
ಸಂಜಯ್​ ರಾವುತ್​

ಮುಂಬೈ: ಶಿವಸೇನೆ ನಾಯಕ, ಸಂಸದ ಸಂಜಯ್​ ರಾವತ್​ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. 1,034 ಕೋಟಿ ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸಂಜಯ್ ರಾವತ್ ಅವರ ಅಲಿಬಾಗ್​ನಲ್ಲಿರುವ 8 ನಿವೇಶನಗಳು ಮತ್ತು ಮುಂಬೈನ ದಾದರ್‌ನಲ್ಲಿರುವ ಒಂದು ಫ್ಲಾಟ್ ಅನ್ನು ಜಪ್ತಿ ಮಾಡಿದೆ. ಅಲ್ಲದೇ ಸಂಜಯ್ ರಾವತ್ ಅವರ ಆಪ್ತ ಸ್ನೇಹಿತ ಪ್ರವೀಣ್ ರಾವತ್ ಅವರನ್ನು ಇಡಿ ಬಂಧಿಸಿದೆ.

  • #WATCH "... I'm not one to get scared, seize my property, shoot me, or send me to jail, Sanjay Raut is Balasaheb Thackeray's follower & a Shiv Sainik, he'll fight & expose everyone. I'm not one to stay quiet, let them dance. The truth will prevail": Shiv Sena leader Sanjay Raut pic.twitter.com/UzIdBKN9mc

    — ANI (@ANI) April 5, 2022 " class="align-text-top noRightClick twitterSection" data=" ">

ಕೇಂದ್ರ ಹಣಕಾಸು ತನಿಖಾ ಸಂಸ್ಥೆಯು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಮೀನು ಮತ್ತು ಫ್ಲಾಟ್‌ಗಳನ್ನು ಫ್ರೀಜ್ ಮಾಡಲು ಅನುಮತಿಯನ್ನು ನೀಡಿದೆ. ಕೇಂದ್ರ ಹಣಕಾಸು ತನಿಖಾ ಸಂಸ್ಥೆಯು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಮೀನು ಮತ್ತು ಫ್ಲಾಟ್‌ಗಳನ್ನು ಫ್ರೀಜ್ ಮಾಡಲು ಅನುಮತಿಯನ್ನು ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ರಕ್ಷಕನು ಇವನೇ.. ಬೆಂಕಿಯಲ್ಲಿ ಸಾಹಸ.. ಹಸುಗೂಸನ್ನು ರಕ್ಷಿಸಿದ ಕಾನ್ಸ್​ಟೇಬಲ್!

ಗುರು ಆಶಿಶ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಪ್ರವೀಣ್ ರಾವತ್ ಹೊಂದಿರುವ ಜಮೀನಿನ ರೂಪದಲ್ಲಿರುವ ಒಟ್ಟು 11.15 ಕೋಟಿ ರೂಪಾಯಿ ಆಸ್ತಿಯನ್ನು ಇಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಸಂಜಯ್ ರಾವತ್ ಅವರ ಪತ್ನಿ ವರ್ಷಾ ರಾವತ್​ ದಾದರ್​ನಲ್ಲಿ ಫ್ಲಾಟ್​ ಹೊಂದಿದ್ದು, ಇವರು ಮತ್ತು ಸ್ವಪ್ನಾ ಪಾಟ್ಕರ್​​ ಅವರು ಅಲಿಬಾಗ್​ನಲ್ಲಿ ಜಂಟಿಯಾಗಿ ಹೊಂದಿದ್ದ ಫ್ಲಾಟ್​ನನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಸಂಬಂಧ ಸಂಜಯ್​ ರಾವತ್​ ಪ್ರತಿಕ್ರಿಯಿಸಿದ್ದು, ನನ್ನ ಆಸ್ತಿಯನ್ನು ವಶಪಡಿಸಿಕೊಳ್ಳಲಿ, ನನ್ನನ್ನು ಶೂಟ್ ಮಾಡಲಿ ಅಥವಾ ಜೈಲಿಗೆ ಕಳುಹಿಸಲಿ. ಇದಕ್ಕೆ ನಾನು ಹೆದರುವುದಿಲ್ಲ. ಅಲ್ಲದೇ ಸತ್ಯಕ್ಕೆ ಜಯ ಸಿಗುತ್ತದೆ ಎಂದು ಗುಡುಗಿದ್ದಾರೆ.

Last Updated : Apr 5, 2022, 4:45 PM IST

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.