ETV Bharat / bharat

ಕಾಶ್ಮೀರ ಪ್ರೆಸ್ ಕ್ಲಬ್‌ ಸ್ವಾಧೀನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ಎಡಿಟರ್ಸ್ ಗಿಲ್ಡ್ - Editors Guild aghast at hostile takeover of Kashmir Press Club

ಸಶಸ್ತ್ರ ಪೊಲೀಸರ ಸಹಾಯದಿಂದ ಪತ್ರಕರ್ತರ ಗುಂಪೊಂದು ಬಲವಂತವಾಗಿ ಕಾಶ್ಮೀರ ಪ್ರೆಸ್ ಕ್ಲಬ್‌ನ ಕಚೇರಿ ಮತ್ತು ಆಡಳಿತವನ್ನು ಸ್ವಾಧೀನಪಡಿಸಿಕೊಂಡ ಕ್ರಮಕ್ಕೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ದಿಗ್ಭ್ರಮೆಗೊಂಡಿದೆ..

ಕಾಶ್ಮೀರ ಪ್ರೆಸ್ ಕ್ಲಬ್‌ ಸ್ವಾಧೀನಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿದ ಎಡಿಟರ್ಸ್ ಗಿಲ್ಡ್

author img

By

Published : Jan 16, 2022, 7:18 PM IST

ಶ್ರೀನಗರ : ಕಣಿವೆಯ ಅತಿದೊಡ್ಡ ಪತ್ರಕರ್ತರ ಸಂಘವಾದ ಕಾಶ್ಮೀರ ಪ್ರೆಸ್ ಕ್ಲಬ್‌ನ ಕಚೇರಿ ಮತ್ತು ಆಡಳಿತವನ್ನು ಜನವರಿ 15ರಂದು ಸಶಸ್ತ್ರ ಪೊಲೀಸರ ಸಹಾಯದಿಂದ ಪತ್ರಕರ್ತರ ಗುಂಪೊಂದು ಬಲವಂತವಾಗಿ ಸ್ವಾಧೀನಪಡಿಸಿಕೊಂಡ ಕ್ರಮಕ್ಕೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ದಿಗ್ಭ್ರಮೆಗೊಂಡಿದೆ.

ಮೇ 2021ರಲ್ಲಿ ಅರ್ಜಿಯ ಪರಿಶೀಲನೆಯ ದೀರ್ಘ ಪ್ರಕ್ರಿಯೆಯ ನಂತರ ಕ್ಲಬ್‌ಗೆ ಡಿಸೆಂಬರ್ 29, 2021 ರಂದು ಹೊಸ ಮರು ನೋಂದಣಿ ನೀಡಲಾಗಿತ್ತು. ಆದರೆ, ಈ ಕ್ಲಬ್ ಮರು ನೋಂದಣಿ ನಂತರ ಮಧ್ಯಂತರ ನಿರ್ವಹಣೆಯಲ್ಲಿತ್ತು ಹಾಗೂ ಜನವರಿ 13, 2022ರಂದು ಹೊಸ ನಿರ್ವಹಣಾ ಸಂಸ್ಥೆ ಮತ್ತು ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲು ದಿನಾಂಕ ಘೊಷಣೆ ಮಾಡಲಾಗಿತ್ತು. ಅದರಂತೆ ಫೆಬ್ರವರಿ 15, 2022ರಂದು ಚುನಾವಣಾ ದಿನಾಂಕವನ್ನೂ ಘೋಷಿಸಿತ್ತು.

ಸಶಸ್ತ್ರ ಪಡೆಯಿಂದ ಆದ ಈ ಸ್ವಾಧೀನವು ಕ್ಲಬ್‌ನ ನಿಯಮ ಆಧಾರಿತ ಕಾರ್ಯಚಟುವಟಿಕೆಯನ್ನು ಪರಿಣಾಮಕಾರಿಯಾಗಿ ತಡೆದಿದೆ. ಗೊಂದಲದ ಸಂಗತಿಯೆಂದರೆ, ರಾಜ್ಯ ಪೊಲೀಸರು ಯಾವುದೇ ವಾರೆಂಟ್ ಅಥವಾ ದಾಖಲೆಗಳಿಲ್ಲದೆ ಆವರಣವನ್ನು ಪ್ರವೇಶಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಲತಾ ಮಂಗೇಶ್ಕರ್ ಸ್ಥಿತಿ ಸ್ಥಿರವಾಗಿದೆ: ಡಾ. ಪ್ರತಿಮ್

ಪೊಲೀಸರು ಮತ್ತು ಸ್ಥಳೀಯ ಆಡಳಿತದ ಈ ಉಲ್ಲಂಘನೆಯು ರಾಜ್ಯದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ನಿರಂತರ ಪ್ರವೃತ್ತಿಯ ದ್ಯೋತಕವಾಗಿದೆ ಎಂದು ಕರೆಯಲಾಗಿದೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೇವಲ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಯುವ ಪತ್ರಕರ್ತ ಸಾಜದ್ ಗುಲ್ ಅನ್ನು ಬಂಧಿಸಲಾಗಿತ್ತು.

ಯಥಾಸ್ಥಿತಿಯನ್ನು ಮರುಸ್ಥಾಪಿಸಲು ಎಡಿಟರ್ಸ್ ಗಿಲ್ಡ್ ಒತ್ತಾಯಿಸುತ್ತಿದ್ದು, ಸಶಸ್ತ್ರ ಪಡೆಗಳು ಕ್ಲಬ್ ಆವರಣವನ್ನು ಹೇಗೆ ಪ್ರವೇಶಿಸಿದವು ಎಂಬುದರ ಕುರಿತು ಗಿಲ್ಡ್ ಸ್ವತಂತ್ರ ತನಿಖೆಗೆ ಒತ್ತಾಯಿಸಿದೆ.

ಗುಂಪುಗಾರಿಕೆ..

ಎಂ ಸಲೀಂ ಪಂಡಿತ್ ನೇತೃತ್ವದ ಪತ್ರಕರ್ತರ ಗುಂಪು ಮುಂದಿನ ಚುನಾವಣೆ ನಡೆಯುವವರೆಗೆ ಕೆಪಿಸಿಯ ಆಡಳಿತವನ್ನು ವಹಿಸಿಕೊಂಡಿದೆ. ಪಂಡಿತ್ ಅವರು ಜುಲೈ 2019ರವರೆಗೆ ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾಗಿದ್ದರು. ಅವರು ಮೊದಲ ಚುನಾಯಿತ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಹಂಗಾಮಿ ಮಂಡಳಿಯ ಪ್ರಧಾನ ಕಾರ್ಯದರ್ಶಿಯಾಗಿ ಜುಲ್ಫಿಕರ್ ಮಜೀದ್ ಮತ್ತು ಖಜಾಂಚಿಯಾಗಿ ಅರ್ಷದ್ ರಸೂಲ್ ಕೂಡ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸ ಚುನಾವಣೆಗಳು ನಡೆಯುವವರೆಗೆ ಮಧ್ಯಂತರ ಸಂಸ್ಥೆಯು ಕ್ಲಬ್ ಅನ್ನು ನಿರ್ವಹಿಸುತ್ತದೆ ಎನ್ನಲಾಗಿದೆ.

ಚುನಾಯಿತ ಸಂಸ್ಥೆಯು ತನ್ನ ಅವಧಿಯನ್ನು ಎರಡು ವರ್ಷಗಳ ಅವಧಿಗೆ ಪೂರ್ಣಗೊಳಿಸಿದೆ. ಅದು ಜುಲೈ 14, 2021ರಂದು ಮುಕ್ತಾಯಗೊಂಡಿದೆ. ಹಿಂದಿನ ಸಮಿತಿಯು ಕೆಲವು ಕಾರಣಗಳಿಗಾಗಿ ಚುನಾವಣೆಯನ್ನು ವಿಳಂಬಗೊಳಿಸಿದ್ದರಿಂದ ಕ್ಲಬ್ ಯಾವುದೇ ಕೆಲಸಗಳು ನಡೆದಿರಲಿಲ್ಲ. ಈ ಕಾರಣದಿಂದ ಈ ಬೆಳವಣಿಗೆ ಕಂಡು ಬಂದಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.