ನವದೆಹಲಿ: ಅಡುಗೆ ಎಣ್ಣೆಯ ಬೆಲೆ ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ಶೇಕಡಾ 20ರಷ್ಟು ಏರಿಕೆಯಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳ ಮೂಲಕ ಬಹಿರಂಗವಾಗಿದೆ.
ಗ್ರಾಹಕ ದರ ಸೂಚ್ಯಂಕ (ಸಿಪಿಐ) ಜನವರಿ ತಿಂಗಳ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮ ಅಭಿವೃದ್ಧಿ ಮತ್ತು ಅಂಕಿ ಅಂಶ ಇಲಾಖೆ 'ಎಣ್ಣೆ ಮತ್ತು ಕೊಬ್ಬು' ಬೆಲೆಗಳ ಒಟ್ಟಾರೆ ಬೆಲೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 19.71ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.
ಇತರ ಉತ್ಪನ್ನಗಳಾದ ತರಕಾರಿಗಳು, ಹಣ್ಣುಗಳು, ಮಸಾಲೆ ಪದಾರ್ಥಗಳು, ಪಾದರಕ್ಷೆ, ಉಡುಪು, ಮುಂತಾದವುಗಳಿಗಿಂತ 'ಎಣ್ಣೆ ಮತ್ತು ಕೊಬ್ಬು' ಉತ್ಪನ್ನಗಳ ಬೆಲೆ ಏರಿಕೆ ಹಿಂದಿನ ತಿಂಗಳು ಅಂದರೆ ಜನವರಿಗೆ ಹೋಲಿಸಿದಂತೆ ತೀವ್ರವಾಗಿ ಹೆಚ್ಚಳವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಕಣಿವೆಗೆ ಉರುಳಿದ ಬಸ್, 8 ಮಂದಿ ದುರ್ಮರಣ
ಅಡುಗೆ ಎಣ್ಣೆ ಹೊರತುಪಡಿಸಿ, ಹಿಂದಿನ ತಿಂಗಳಿಗೆ ಹೋಲಿಕೆ ಮಾಡಿದರೆ ಮೀನು ಮತ್ತು ಮಾಂಸದ ಬೆಲೆ ಶೇಕಡಾ 12.54ರಷ್ಟು, ಮೊಟ್ಟೆಯ ಬೆಲೆ ಶೇಕಡಾ 12.85ರಷ್ಟು, ಧಾನ್ಯಗಳ ಬೆಲೆ ಶೇಕಡಾ 13.39ರಷ್ಟು ಬೆಲೆ ಏರಿಕೆ ಕಂಡಿವೆ.
'ಎಣ್ಣೆ ಮತ್ತು ಕೊಬ್ಬು' ಉತ್ಪನ್ನಗಳಲ್ಲಿ ವನಸ್ಪತಿ ಮುಖ್ಯವಾಗಿದ್ದು, ಅಡುಗೆ ಎಣ್ಣೆಗಳಲ್ಲಿ ಶೇಂಗಾ, ಸಾಸಿವೆ, ಕೊಬ್ಬರಿ, ಸೂರ್ಯಕಾಂತಿ ಎಣ್ಣೆಗಳು ಅತಿ ಪ್ರಮುಖವಾಗಿವೆ.