ETV Bharat / bharat

ನಾಳೆಯೇ ಬನ್ನಿ.. ಸಂಜಯ್ ರಾವುತ್​ಗೆ ಇಡಿ ಸಮನ್ಸ್​ - ಮಹಾವಿಕಾಸ ಅಘಾಡಿ ಬಿಕ್ಕಟ್ಟು

ರಾಜ್ಯಸಭಾ ಸಂಸದರೂ ಆಗಿರುವ ಸಂಜಯ್ ರಾವುತ್​, ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆಯಡಿ ಮಂಗಳವಾರ ದಕ್ಷಿಣ ಮುಂಬೈನಲ್ಲಿರುವ ತಮ್ಮ ಕಚೇರಿಗೆ ಆಗಮಿಸಿ ಹೇಳಿಕೆ ದಾಖಲಿಸುವಂತೆ ಇಡಿ ತಿಳಿಸಿದೆ.

ED summons Sena MP Sanjay Raut
ED summons Sena MP Sanjay Raut
author img

By

Published : Jun 27, 2022, 1:50 PM IST

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಶಿವಸೇನಾ ಮುಖಂಡ ಸಂಜಯ್ ರಾವುತ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್​ ಜಾರಿ ಮಾಡಿದೆ. ಮುಂಬೈನ ಸ್ಲಮ್ ಒಂದರ ಮರು-ಅಭಿವೃದ್ಧಿ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಂಗಳವಾರ ಇಡಿ ಮುಂದೆ ಹಾಜರಾಗುವಂತೆ ಅವರಿಗೆ ಸಮನ್ಸ್​ ನೀಡಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ರಾಜಕೀಯ ಬಿಕ್ಕಟ್ಟಿನ ನಡುವೆ ಸಮನ್ಸ್​: ಶಿವಸೇನೆ ಪಕ್ಷ ಹಾಗೂ ಸರ್ಕಾರದಲ್ಲಿ ಬಂಡಾಯ ಭುಗಿಲೆದ್ದ ಬೆನ್ನಲ್ಲೇ ರಾವುತ್ ಅವರಿಗೆ ಇಡಿ ಸಮನ್ಸ್​ ನೀಡಿದ್ದು ಗಮನಾರ್ಹವಾಗಿದೆ. ರಾಜ್ಯಸಭಾ ಸಂಸದರೂ ಆಗಿರುವ ಸಂಜಯ್ ರಾವುತ್​, ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆಯಡಿ ಮಂಗಳವಾರ ದಕ್ಷಿಣ ಮುಂಬೈನಲ್ಲಿರುವ ತನ್ನ ಕಚೇರಿಗೆ ಆಗಮಿಸಿ ಹೇಳಿಕೆಯನ್ನು ದಾಖಲಿಸುವಂತೆ ಇಡಿ ತಿಳಿಸಿದೆ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಳೆದ ಏಪ್ರಿಲ್​ನಲ್ಲಿ ರಾವುತ್ ಪತ್ನಿ ವರ್ಷಾ ರಾವುತ್ ಹಾಗೂ ಅವರ ಇಬ್ಬರು ಸಹವರ್ತಿಗಳಿಗೆ ಸೇರಿದ 11.15 ಕೋಟಿಗೂ ಅಧಿಕ ಮೌಲ್ಯದ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಂಡಿದೆ.

ಇದನ್ನು ಓದಿ:'ಅವರ ಆತ್ಮ ಸತ್ತಿದೆ' ಎಂದು ನಾನು ಹೇಳಿದ್ದು: ವಿವಾದಾತ್ಮಕ ಹೇಳಿಕೆಗೆ ರಾವುತ್ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.