ಮುಂಬೈ(ಮಹಾರಾಷ್ಟ್ರ) : ಪತ್ರಾಚಲ್ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ, ರಾಜ್ಯಸಭೆ ಸದಸ್ಯ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಎರಡನೇ ಸಮನ್ಸ್ ಜಾರಿ ಮಾಡಿದೆ. ಜುಲೈ 1ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಆಡಳಿತಾರೂಢ ಪಕ್ಷದ ನಾಯಕರಾದ ಸಂಜಯ್ ರಾವತ್ ಅವರಿಗೆ ಇಂದು (ಜೂನ್ 8ರಂದು) ವಿಚಾರಣೆಗೆ ಹಾಜರಾಗುವಂತೆ ಇಡಿ ಮೊದಲು ಸಮನ್ಸ್ ನೀಡಿತ್ತು. ಆದರೆ, ಇಂದು ರಾವತ್ ವಿಚಾರಣೆಗೆ ಹೋಗಿರಲಿಲ್ಲ. ಇತ್ತ, ಇವರ ಪರ ವಕೀಲರು 13-14 ದಿನಗಳ ಕಾಲಾವಕಾಶವನ್ನೂ ಇಡಿಗೆ ಕೋರಿದ್ದರು.
ಆದರೆ, ಇಡಿ ಅಧಿಕಾರಿಗಳು ಇಷ್ಟೊಂದು ದಿನಗಳ ಕಾಲಾವಕಾಶವನ್ನು ನೀಡಿಲ್ಲ. ಬದಲಿಗೆ ಮೂರೇ ದಿನಗಳ ಹೆಚ್ಚುವರಿ ಸಮಯವನ್ನು ನೀಡಿ ಜುಲೈ 1ಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ. ಅಲ್ಲದೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖವಾದ ದಾಖಲೆಗಳನ್ನು ತರುವಂತೆ ರಾವುತ್ ಅವರಿಗೆ ತಿಳಿಸಲಾಗಿದೆ.
ಇದನ್ನೂ ಓದಿ: 50 ಶಾಸಕರು ನಮ್ಮೊಂದಿಗಿದ್ದಾರೆ, ಶೀಘ್ರವೇ ಮುಂಬೈಗೆ ಹೋಗ್ತೀವಿ : ಏಕನಾಥ್ ಶಿಂಧೆ