ETV Bharat / bharat

ತೆರಿಗೆ ವಂಚನೆ, ದೇಶದ ಗೌಪ್ಯ ಮಾಹಿತಿ ಸೋರಿಕೆ: 40 ಕಡೆ ಚೀನಿ ಕಂಪನಿಗಳ ಮೇಲೆ ಇಡಿ ದಾಳಿ - ಚೀನಾಗೆ ಭಾರತ ಏಟು

ದೇಶದಲ್ಲಿನ ಚೀನಿ ಮೂಲದ ಟೆಲಿಕಾಂ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು 40 ಕಡೆ ದಾಳಿ ನಡೆಸಿ ಮಹತ್ತರ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ್ದಾರೆ.

ದೇಶದ 40 ಕಡೆ ಚೀನಿ ಮೂಲದ ಕಂಪನಿಗಳ ಮೇಲೆ ಇಡಿ ದಾಳಿ

author img

By

Published : Jul 5, 2022, 1:00 PM IST

ನವದೆಹಲಿ: ಚೀನಾಗೆ ಭಾರತ ಮತ್ತೊಂದು ಶಾಕ್​ ನೀಡಿದೆ. ತೆರಿಗೆ ವಂಚನೆ ತನಿಖೆಯ ಭಾಗವಾಗಿ ದೇಶದಲ್ಲಿನ ಚೀನಾದ ಟೆಲಿಕಾಂ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಬಳಿಕ ಇದೀಗ ಜಾರಿ ನಿರ್ದೇಶನಾಲಯ ಕೂಡ ದಾಳಿ ನಡೆಸಿದೆ.

ತೆರಿಗೆ ವಂಚನೆ ಮತ್ತು ದೇಶದ ಗೌಪ್ಯ ವಿಚಾರಗಳನ್ನು ಸೋರಿಕೆ ಮಾಡುತ್ತಿರುವ ಗಂಭೀರ ಆರೋಪದ ಮೇಲೆ ಚೀನಾಗೆ ಸಂಬಂಧಿಸಿದ ದೇಶದಲ್ಲಿನ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ.

ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಲ್ಲಿನ ಚೀನಾ ಕಂಪನಿಗಳ ಮೇಲೆ ರೈಡ್​ ನಡೆಸಿ ಪರಿಶೀಲನೆಗೆ ಒಳಪಡಿಸಲಾಗಿದೆ. ಈಗಾಗಲೇ ಸಿಬಿಐ ಸಂಸ್ಥೆ ಇಂತಹ ಕಂಪನಿಗಳ ಮೇಲೆ ನಿಗಾ ಇಟ್ಟಿದ್ದು, ಈ ಹಿಂದೆ ದಾಳಿ ಮಾಡಿ ಪರಿಶೀಲನೆ ನಡೆಸಿತ್ತು. ಇದೀಗ ಇಡಿ ಕೂಡ ಕಂಪನಿಗಳ ಮೇಲೆ ಚಾಟಿ ಬೀಸಿದೆ.

ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿರುವ ಚೀನಾ ಮೂಲದ ಟೆಲಿಕಾಂ ಕಂಪನಿಗಳ ಆದಾಯ ವಿವರ ಸಲ್ಲಿಕೆಯಲ್ಲಿ ಲೋಪದೋಷಗಳು ಕಂಡು ಬಂದಿರುವ ಆರೋಪದ ಮೇಲೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ಬಿಸಿ ಮುಟ್ಟಿಸಿದೆ.

ಕಳೆದ ಕೆಲ ವರ್ಷಗಳಿಂದ ಚೀನಿ ಮೂಲದ ಮೊಬೈಲ್​ ಕಂಪನಿಗಳು ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದರೂ, ನಷ್ಟವನ್ನು ತೋರಿಸುತ್ತಿವೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಆದಾಯ ತೆರಿಗೆಯಿಂದ ನುಣುಚಿಕೊಳ್ಳಲು ಕಂಪನಿಗಳ ಈ ರೀತಿ ಮೋಸ ಮಾಡುತ್ತಿವೆ ಎಂಬ ಅನುಮಾನದ ಮೇಲೆ ತನಿಖೆಗೆ ಸೂಚಿಸಲಾಗಿದೆ.

ಇದನ್ನೂ ಓದಿ: ಶಾಸಕ ಜಮೀರ್​ಗೆ ಶಾಕ್: ಮನೆ, ಕಚೇರಿಗಳ ಮೇಲೆ ಎಸಿಬಿ ದಾಳಿ, ದಾಖಲೆಗಳ ಶೋಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.