ETV Bharat / bharat

ಎನ್‌ಸಿಪಿ ನಾಯಕ ಹಸನ್ ಮುಶ್ರಿಫ್ ಮನೆ ಮೇಲೆ ಇಡಿ ದಾಳಿ, ಕಾರ್ಯಕರ್ತರ ಪ್ರತಿಭಟನೆ

ಎನ್‌ಸಿಪಿ ನಾಯಕ ಹಸನ್ ಮುಶ್ರಿಫ್ ಅಧ್ಯಕ್ಷತೆಯ ಬ್ಯಾಂಕ್​ ಮೇಲೆ ಈ ಹಿಂದೆ ಇಡಿ ದಾಳಿ - ಇಂದು ಮುಂಜಾನೆ ಹಸನ್ ಮುಶ್ರಿಫ್ ಮನೆ ಮೇಲೆ ಜಾರಿ ನಿರ್ದೆಶನಾಲಯದ ಅಧಿಕಾರಿಗಳ ದಾಳಿ - ಸಂತಾಜಿ ಘೋರ್ಪಡೆ ಸಕ್ಕರೆ ಕಾರ್ಖಾನೆ ಹಗರಣಕ್ಕೆ ಸಂಬಂಧ ತನಿಖೆ

ED raid on NCP leader Hasan Mushrif's house, activists protest outside the house
ಎನ್‌ಸಿಪಿ ನಾಯಕ ಹಸನ್ ಮುಶ್ರಿಫ್ ಮನೆ ಮೇಲೆ ಇಡಿ ದಾಳಿ
author img

By

Published : Mar 11, 2023, 1:47 PM IST

ಕೊಲ್ಹಾಪುರ (ಮಹಾರಾಷ್ಟ್ರ): ಎನ್‌ಸಿಪಿ ನಾಯಕ ಹಾಗೂ ಮಾಜಿ ಗ್ರಾಮೀಣಾಭಿವೃದ್ಧಿ ಸಚಿವ ಹಸನ್ ಮುಶ್ರೀಫ್ ಅವರ ಕಾಗಲ್‌ನಲ್ಲಿರುವ ನಿವಾಸದ ಮೇಲೆ ಇಡಿ ಇಂದು ಮತ್ತೊಮ್ಮೆ ದಾಳಿ ನಡೆಸಿದೆ. ಕಳೆದ ಒಂದೂವರೆ ತಿಂಗಳಲ್ಲಿ ಇದು ಎರಡನೇ ದಾಳಿಯಾಗಿದೆ. ನಾಲ್ಕೈದು ಇಡಿ ಅಧಿಕಾರಿಗಳು ಕಾಗಲ್‌ನಲ್ಲಿರುವ ಹಸನ್ ಮುಶ್ರಿಫ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದು, ಇಂದು ಮುಂಜಾನೆ ತನಿಖೆ ಆರಂಭಿಸಿದ್ದಾರೆ. ಇದು ಸಂಚಲನ ಮೂಡಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಹಸನ್ ಮುಶ್ರಿಫ್ ಅಧ್ಯಕ್ಷತೆಯ ಕೊಲ್ಹಾಪುರ ಜಿಲ್ಲಾ ಕೇಂದ್ರ ಬ್ಯಾಂಕ್‌ನ ಮೇಲೂ ಈ ಹಿಂದೆ ಇಡಿ ದಾಳಿ ನಡೆಸಿ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಕಾಗಲ್‌ನ ಮನೆ ಮೇಲೆ ಮತ್ತೊಮ್ಮೆ ಇಡಿ ದಾಳಿ ನಡೆಸಿದ್ದು, ಸಂಚಲನ ಮೂಡಿಸಿದೆ. ಇಡಿ ಅಧಿಕಾರಿಗಳು ಬೆಳಗ್ಗೆ ಮುಶ್ರಿಫ್ ಮನೆಗೆ ಬಂದು ತನಿಖೆ ಆರಂಭಿಸಿದ್ದು, ಈ ಕಾರ್ಯಾಚರಣೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆಯದಂತೆ ಮುಶ್ರಿಫ್ ಮನೆಯ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸಂತಾಜಿ ಘೋರ್ಪಡೆ ಸಕ್ಕರೆ ಕಾರ್ಖಾನೆ ಹಗರಣ: ಸಂತಾಜಿ ಘೋರ್ಪಡೆ ಸಕ್ಕರೆ ಕಾರ್ಖಾನೆ ಹಗರಣಕ್ಕೆ ಸಂಬಂಧಿಸಿದಂತೆ ಮುಶ್ರೀಫ್ ಅವರ ಮನೆ ಮೇಲೆ ದಾಳಿ ನಡೆದಿದೆ. ಕೋಲ್ಕತ್ತಾದ ಬೋಗಸ್ ಕಂಪನಿಗಳಿಂದ ಈ ಕಾರ್ಖಾನೆಗೆ 158 ಕೋಟಿ ರೂ. ಈ ಹಣ ಎಲ್ಲಿಂದ ಬಂತು? ಈ ಕಂಪನಿ ಎಲ್ಲಿದೆ? ಇದು ಅಕ್ರಮ ಹಣ ಎಂದು ಕಿರೀಟ್ ಸೋಮಯ್ಯ ಆರೋಪ ಮಾಡಿದ್ದರು.

ಈ ಪ್ರಕರಣದಲ್ಲಿ ಮುಶ್ರೀಫ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೋಮಯ್ಯ ಒತ್ತಾಯಿಸಿದರು. ಕೇವಲ ಹದಿನೈದು ದಿನಗಳಲ್ಲಿ ಹಸನ್ ಮುಶ್ರೀಫ್ ಅಧ್ಯಕ್ಷರಾಗಿರುವ ಕೊಲ್ಹಾಪುರ ಜಿಲ್ಲಾ ಕೇಂದ್ರ ಬ್ಯಾಂಕ್‌ನಲ್ಲಿ ಎರಡು ದಿನಗಳ ಕಾಲ ತಂಡ ದಾಖಲೆಗಳನ್ನು ಪರಿಶೀಲಿಸಿತು. ಈ ನಡುವೆ, ಈ ತನಿಖೆಯ ಯಾವುದೇ ಮಾಹಿತಿಯನ್ನು ಇಡಿ ಬಿಟ್ಟುಕೊಟ್ಟಿಲ್ಲ. ಆದರೆ ಎರಡು ದಿನಗಳ ಹಿಂದೆ ಜಿಲ್ಲಾ ಬ್ಯಾಂಕ್ ಖಾತೆಗಳ ಲೆಕ್ಕ ಪರಿಶೋಧನೆಗೆ ಆದೇಶ ನೀಡಲಾಗಿತ್ತು ಎಂಬ ಮಾಹಿತಿ ಸಿಕ್ಕಿದೆ.

ಆರೋಪದ ವಿರುದ್ಧ ನ್ಯಾಯಾಂಗದ ಮೊರೆ: ಹಸನ್ ಮುಶ್ರೀಫ್ ತಮ್ಮ ವಿರುದ್ಧದ ಕ್ರಮವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಸಂಬಂಧ ನಿನ್ನೆ ಕೋರ್ಟ್​ ವಿಚಾರಣೆ ನಡೆದಿದ್ದು, ಇದರಲ್ಲಿ ಹಸನ್ ಮುಶ್ರೀಫ್ ರಿಲೀಫ್ ಪಡೆದಿದ್ದರು. ಕೋರ್ಟ್​ ತೀರ್ಪಿನಿಂದ ಭ್ರಷ್ಟಾಚಾರ ಆರೋಪ ಮಾಡಿದ್ದ ಬಿಜೆಪಿ ಮುಖಂಡ ಕಿರೀಟ್ ಸೋಮಯ್ಯ ಅವರಿಗೆ ತೀವ್ರ ಹಿನ್ನಡೆಯಾಗಿತ್ತು. ಪ್ರಕರಣಕ್ಕೂ ಹಸನ್ ಮುಶ್ರೀಫ್ ಅವರಿಗೂ ನೇರ ಸಂಬಂಧವಿಲ್ಲದಿರುವಾಗ ಕಿರೀಟ್ ಸೋಮಯ್ಯ ಅವರಿಗೆ ನ್ಯಾಯಾಲಯದ ಆದೇಶಗಳ ಪ್ರತಿ ಹಾಗೂ ಪ್ರಕರಣದ ಎಫ್‌ಐಆರ್‌ನ ಪ್ರತಿ ಸಿಕ್ಕಿದ್ದು ಹೇಗೆ? ಎಂದು ನ್ಯಾಯಾಲಯ ಬಿಜೆಪಿ ಮುಖಂಡನನ್ನು ಪ್ರಶ್ನೆ ಮಾಡಿತ್ತು.

ಇದನ್ನೂ ಓದಿ: ತಂದೆಗೆ ಅನಗತ್ಯ ಕಿರುಕುಳ.. ಅವರಿಗೆ ಸಮಸ್ಯೆಯಾದರೆ ಯಾರನ್ನೂ ಬಿಡುವುದಿಲ್ಲ: ಲಾಲು ಪುತ್ರಿ ರೋಹಿಣಿ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.