ನವದೆಹಲಿ/ಬೆಂಗಳೂರು: ಚೀನಾ ಮೂಲದ ಸ್ಮಾರ್ಟ್ಫೋನ್ ತಯಾರಿಕಾ(ಟೆಲಿಕಾಂ) ಕಂಪನಿ ಶಿವೋಮಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಬರೋಬ್ಬರಿ 5,551 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಈ ಅತಿದೊಡ್ಡ ಕಾರ್ಯಾಚರಣೆ ನಡೆಸಲಾಗಿದೆ.
-
ED has seized Rs 5551.27 crores of Xiaomi Technology India Private Limited, lying in the bank accounts under the provisions of the Foreign Exchange Management Act, 1999 in connection with the illegal outward remittances made by the company: ED pic.twitter.com/6ZmO9Odltg
— ANI (@ANI) April 30, 2022 " class="align-text-top noRightClick twitterSection" data="
">ED has seized Rs 5551.27 crores of Xiaomi Technology India Private Limited, lying in the bank accounts under the provisions of the Foreign Exchange Management Act, 1999 in connection with the illegal outward remittances made by the company: ED pic.twitter.com/6ZmO9Odltg
— ANI (@ANI) April 30, 2022ED has seized Rs 5551.27 crores of Xiaomi Technology India Private Limited, lying in the bank accounts under the provisions of the Foreign Exchange Management Act, 1999 in connection with the illegal outward remittances made by the company: ED pic.twitter.com/6ZmO9Odltg
— ANI (@ANI) April 30, 2022
1999ರ ವಿದೇಶಿ ವಿನಿಯಮ ನಿರ್ವಹಣಾ ಕಾಯ್ದೆ ನಿಬಂಧನೆಗಳ ಅಡಿಯಲ್ಲಿ ಈ ದಾಳಿ ನಡೆಸಲಾಗಿದ್ದು, ಶಿವೋಮಿಯ ನಾಲ್ಕು ಬ್ಯಾಂಕ್ಗಳ ಖಾತೆಯಲ್ಲಿದ್ದ ಇಷ್ಟೊಂದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ ಕಳೆದ ಒಂದು ತಿಂಗಳ ಕಾಲ ಸುದೀರ್ಘ ತನಿಖೆ ನಡೆಸಿದ್ದು, ಇದೀಗ ಇಷ್ಟೊಂದು ಹಣ ವಶಪಡಿಸಿಕೊಂಡಿದೆ. ಭಾರತದಲ್ಲಿ ಮಾರಾಟವಾಗುತ್ತಿರುವ ಟಾಪ್ ಮೊಬೈಲ್ ಫೋನ್ ಬ್ರ್ಯಾಂಡ್ಗಳಲ್ಲಿ ಶಿವೋಮಿ ಕೂಡ ಒಂದಾಗಿದ್ದು, ಇದು ವಾರ್ಷಿಕವಾಗಿ ಭಾರತದಲ್ಲಿ 34,000 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಜಾರಿ ನಿರ್ದೇಶನಾಲಯದಿಂದ ಶಾಕ್.. 6 ಕೋಟಿಗೂ ಹೆಚ್ಚು ನಗದು ಜಪ್ತಿ!
ದಾಳಿ ಬಳಿಕ ಮಾತನಾಡಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಹೆಚ್ಚಿನ ಹಣವನ್ನ ಕಂಪನಿ ಈಗಾಗಲೇ ಚೀನಾದಲ್ಲಿರುವ ತನ್ನ ಸಮೂಹ ಸಂಸ್ಥೆಗಳಿಗೆ ರವಾನೆ ಮಾಡಿದೆ. ಸದ್ಯ 5,551 ಕೋಟಿ ರೂಪಾಯಿ HSBC, ಸಿಟಿ ಬ್ಯಾಂಕ್, IDBI ಮತ್ತು Deutsche ಬ್ಯಾಂಕ್ನಿಂದ ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಿದ್ದಾರೆ. ಚೀನಾ ಮೂಲದ ಶವೋಮಿ ಭಾರತದಲ್ಲಿ 2014ರಿಂದಲೂ ಕಾರ್ಯ ನಿರ್ವಹಿಸುತ್ತಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ನಿಂಬಧನೆ ಮುರಿದಿರುವುದಾಗಿ ತಿಳಿದು ಬಂದಿದೆ.