ನವದೆಹಲಿ: ಜಮ್ಮು- ಕಾಶ್ಮೀರ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಿಚಾರಣೆಗೊಳಪಟ್ಟಿರುವ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ವಿರುದ್ಧ ಇಂದು ಚಾರ್ಜ್ಶೀಟ್ ಸಲ್ಲಿಕೆಯಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಕಾರಣ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ವಿರುದ್ಧ ಜಾರಿ ನಿರ್ದೇಶನಾಯಲದಿಂದ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. 84 ವರ್ಷದ ಫಾರೂಖ್ ಅಬ್ದುಲ್ಲಾ ಜಾರಿ ನಿರ್ದೇಶನಾಲಯದಿಂದ ಅನೇಕ ಸಲ ಪ್ರಶ್ನೆಗೊಳಪಟ್ಟಿದ್ದು, ಕೊನೆಯದಾಗಿ 2022ರ ಮೇ. 31ರಂದು ಅವರನ್ನ ವಿಚಾರಣೆ ನಡೆಸಲಾಗಿತ್ತು.
ಇದನ್ನೂ ಓದಿರಿ: ಟೀಂ ಇಂಡಿಯಾದಲ್ಲಿ ವಿರಾಟ್ ಸ್ಥಾನ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ: ರಾಬಿನ್ ಉತ್ತಪ್ಪ
ಮೂರು ಅವಧಿಗೆ ಸಿಎಂ ಆಗಿ ಸೇವೆ ಸಲ್ಲಿಸಿರುವ ಫಾರೂಖ್ ಅಬ್ದುಲ್ಲಾ 2019ರಲ್ಲಿ ಇಡಿಯಿಂದ ವಿಚಾರಣೆಗೊಳಪಟ್ಟಿದ್ದರು. ಇದಾದ ಬಳಿಕ 2020ರ ಡಿಸೆಂಬರ್ ತಿಂಗಳಲ್ಲಿ ಅಬ್ದುಲ್ಲಾ ಅವರಿಗೆ ಸೇರಿದ್ದ 11.86 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿತ್ತು. ಕಾಶ್ಮೀರ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ವೇಳೆ ಫಾರೂಖ್ ಅಬ್ದುಲ್ಲಾ ತಮ್ಮ ಸ್ಥಾನ ದುರುಪಯೋಗ ಪಡಿಸಿಕೊಂಡಿದ್ದರು. ಜೊತೆಗೆ ಕ್ರೀಡಾ ಸಂಸ್ಥೆಯಲ್ಲಿ ಅಕ್ರಮವಾಗಿ ನೇಮಕಾತಿ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು.