ETV Bharat / bharat

ರಾವಣನ ಬದಲಾಗಿ ಇಡಿ, ಸಿಬಿಐ, ಐಟಿ ಪ್ರತಿಕೃತಿ ದಹಿಸಿದ ಗುಜರಾತ್​ ಕಾಂಗ್ರೆಸ್​

author img

By

Published : Oct 6, 2022, 9:59 AM IST

ದೇಶದಲ್ಲಿ ರಾವಣನ ಪ್ರತಿಕೃತಿ ದಹಿಸಿ ದುಷ್ಟಶಕ್ತಿಗಳ ನಾಶಕ್ಕೆ ಪೂಜೆ ನಡೆದಿದೆ. ಇತ್ತ ಗುಜರಾತ್​ನಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಇಡಿ, ಐಟಿ, ಸಿಬಿಐ, ಬೆಲೆಯೇರಿಕೆಯ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದೆ.

ed-cbi-ad-inflation-instead-of-ravana-in-gujurat
ಐಟಿ ಪ್ರತಿಕೃತಿ ದಹಿಸಿದ ಗುಜರಾತ್​ ಕಾಂಗ್ರೆಸ್​

ಭುಜ್​(ಗುಜರಾತ್)​: ದುಷ್ಟಶಕ್ತಿಯ ನಾಶದ ಸೂಚಕವಾಗಿ ಇಡೀ ದೇಶ ರಾವಣನ ಪ್ರತಿಕೃತಿ ದಹಿಸುವ ಮೂಲಕ ದಸರಾವನ್ನು ಆಚರಿಸಿದರೆ, ಗುಜರಾತ್​ನ ಭುಜ್​ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಹಣದುಬ್ಬರದ ಪ್ರತಿಕೃತಿಯನ್ನು ಸುಟ್ಟು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್​ ಪ್ರತಿಭಟನೆಯ ರೂಪದಲ್ಲಿ ರಾವಣನ ಬದಲಿಗೆ ಇಡಿ, ಸಿಬಿಐ ಮತ್ತು ಹಣದುಬ್ಬರ ಪ್ರತಿಕೃತಿಗಳನ್ನು ದಹಿಸಿತು.

ಕೇಂದ್ರ ಸರ್ಕಾರ ಸಂವಿಧಾನಾತ್ಮಕ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ರಾಜಕೀಯ ವಿರೋಧಿ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿ ನಾಯಕರು ಘೋಷಣೆ ಕೂಗಿದರು.

ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜಕೀಯ ಪಕ್ಷಗಳ ಮಧ್ಯೆ ಪ್ರಚಾರದ ಬಿರುಸು ಪಡೆದಿದೆ. ಬೆಲೆ ಏರಿಕೆ, ಹಣದುಬ್ಬರ, ಕಳಪೆ ಆರೋಗ್ಯ ಸೌಲಭ್ಯಗಳು, ದುಬಾರಿ ಶಿಕ್ಷಣ ಮತ್ತು ಜಿಎಸ್‌ಟಿಯಂತಹ ವಿಷಯಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್ಸಿಗರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಓದಿ: ಭಾರತ ಮೂಲದ ಕಾಫ್​ ಸಿರಪ್​ ಕುಡಿದು ಆಫ್ರಿಕಾದ 66 ಮಕ್ಕಳು ಸಾವು: ತನಿಖೆಗೆ WHO ಸೂಚನೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.