ನವದೆಹಲಿ : ಕಪ್ಪು ಹಣ ಮತ್ತು ತೆರಿಗೆ ವಿಧಿಸುವ ಕಾಯ್ದೆ-2015ರ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಉದ್ಯಮಿಗಳಾದ ಸುಂದ್ರು ಭಗವಾನ್ ದಾಸ್ ಹಿರಾನಂದಾನಿ ಮತ್ತು ಆರ್ ಪಿ ಮನ್ಸಿಂಗ್ಕಾ ಸೇರಿದಂತೆ ಹಲವರ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಸುಮಾರು 3.27 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸುಂದ್ರು ಭಗವಾನ್ ದಾಸ್ ಹಿರಾನಂದಾನಿ ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಬಹಿರಂಗಪಡಿಸಿದ ಆಸ್ತಿ ಹೊಂದಿದೆ. ಬ್ಯಾಂಕ್ ಖಾತೆ ಸಿಂಗಾಪುರದಲ್ಲಿತ್ತು ಎಂದು ಹೇಳಲಾಗಿತ್ತು.
ಇದನ್ನೂ ಓದಿ: 'ಗೊಡ್ಡು ಸಲಾಂ ಹೊಡೆದು ರಾಜಕೀಯ ಮಾಡಲ್ಲ, ಈಶ್ವರಪ್ಪನ ಸ್ಥಿತಿ ಬಂದಿದ್ರೇ ಸ್ವಾಭಿಮಾನ ಬಿಟ್ಟು ಮಂತ್ರಿಯಾಗಿರ್ತಿರಲಿಲ್ಲ'
ಆರ್ ಪಿ ಮನ್ಸಿಂಗ್ಕಾ ಅವರ ಆಸ್ತಿಗಳು ವಿದೇಶದಲ್ಲಿವೆ. ಆದಾಯ ತೆರಿಗೆ ಸಲ್ಲಿಸುವಲ್ಲಿ ವಿಫಲವಾಗಿರುವುದು ಜಾರಿ ನಿರ್ದೇಶನಾಲಯ ಹಣ ವರ್ಗಾವಣೆ ತನಿಖೆಯ ಸಮಯದಲ್ಲಿ ಕಂಡು ಬಂದಿದೆ. ಸುಮಾರು 3 ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೂರು ದಾಖಲು ಮಾಡಿಕೊಂಡಿದ್ದು, ವಿಚಾರಣೆ ಪ್ರಗತಿಯಲ್ಲಿದೆ.