ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಗೆ ಜಾರಿ ನಿರ್ದೇಶನಾಲಯ ಬುಧವಾರ ಶಾಕ್ ನೀಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಸಂಬಂಧ ಪಿಎಫ್‌ಐ ಹಾಗೂ ಇದರ ಸಂಸ್ಥೆಯಾದ ರಿಹಬ್ ಇಂಡಿಯಾ ಫೌಂಡೇಶನ್ (ಆರ್‌ಐಎಫ್)ನ 33 ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಇಡಿ ಜಪ್ತಿ ಮಾಡಿದೆ.
-
ED has provisionally attached bank accounts of Popular Front of India and Rehab India Foundation having collective balance of Rs. 68,62,081 under PMLA, 2002.
— ED (@dir_ed) June 1, 2022 " class="align-text-top noRightClick twitterSection" data="
">ED has provisionally attached bank accounts of Popular Front of India and Rehab India Foundation having collective balance of Rs. 68,62,081 under PMLA, 2002.
— ED (@dir_ed) June 1, 2022ED has provisionally attached bank accounts of Popular Front of India and Rehab India Foundation having collective balance of Rs. 68,62,081 under PMLA, 2002.
— ED (@dir_ed) June 1, 2022
ಬುಧವಾರ ಈ ಬಗ್ಗೆ ಇಡಿ ಅಧಿಕೃತ ಪ್ರಕಟಣೆ ನೀಡಿದ್ದು, ಪಿಎಫ್‌ಐಗೆ ಸೇರಿರುವ 23 ಬ್ಯಾಂಕ್ ಖಾತೆಗಳಲ್ಲಿರುವ 59,12,051 ರೂ. ಹಾಗೂ ಆರ್ಐಎಫ್ಗೆ ಸೇರಿದ 10 ಬ್ಯಾಂಕ್ಗಳ ಖಾತೆಗಳಲ್ಲಿರುವ 9,50,030 ರೂ. ಸೇರಿ ಒಟ್ಟಾರೆ 68,62,081 ರೂ.ಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ. ಅಲ್ಲದೇ, ಪ್ರಶ್ನಾರ್ಹ ಮೂಲಗಳಿಂದ ಅಪಾರ ಪ್ರಮಾಣದ ಹಣವನ್ನು ಪಿಎಫ್‌ಐ ಮತ್ತು ಆರ್‌ಎಫ್‌ಐ ಸ್ವೀಕರಿಸಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಇಡಿ ಎಂದು ಹೇಳಿದೆ.
ಪಿಎಫ್‌ಐ ಬ್ಯಾಂಕ್ ಖಾತೆಗಳಲ್ಲಿ 2009ರಿಂದ 30 ಕೋಟಿ ರೂ.ಗೂ ಅಧಿಕ ನಗದು ಠೇವಣಿ ಸೇರಿದಂತೆ 60 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಜಮಾ ಮಾಡಲಾಗಿದೆ. ಅದೇ ರೀತಿ, ಆರ್‌ಐಎಫ್ ಬ್ಯಾಂಕ್ ಖಾತೆಗಳಲ್ಲಿ 2010ರಿಂದ ಸುಮಾರು 58 ಕೋಟಿ ರೂ.ಗಳನ್ನು ಜಮಾ ಮಾಡಲಾಗಿದೆ ಎಂದು ಬಹಿರಂಗ ಪಡಿಸಿದೆ.
ಇದನ್ನೂ ಓದಿ: ಲಾಕ್ಡೌನ್ನಲ್ಲಿ ಕೆಲಸ ಕಳೆದುಕೊಂಡಿದ್ದ ಅಪ್ಪ.. ಮಗಳ ಶಾಲಾ ಶುಲ್ಕ ಕಟ್ಟಲಾಗದೇ ವಿಷ ಸೇವಿಸಿ ಆತ್ಮಹತ್ಯೆ