ETV Bharat / bharat

'ಪತ್ರಾ ಚಾಲ್' ಭೂ ಹಗರಣ ಪ್ರಕರಣ: ಶಿವಸೇನಾ ಸಂಸದ ಸಂಜಯ್ ರಾವುತ್ ಬಂಧನ - ಇಡಿಯಿಂದ ಸಂಜಯ್ ರಾವತ್ ಬಂಧನ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಇಡಿ ಬಂಧಿಸಿದೆ. 16 ಗಂಟೆಗಳ ವಿಚಾರಣೆಯ ನಂತರ ಇಡಿಯಿಂದ ರಾವುತ್ ಅವರನ್ನು ಬಂಧಿಸಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ಸುದ್ದಿಯಾಗಿದೆ.

Sanjay Raut arrested
ಶಿವಸೇನಾ ಸಂಸದ ಸಂಜಯ್ ರಾವತ್ ಬಂಧನ
author img

By

Published : Aug 1, 2022, 7:06 AM IST

ಮುಂಬೈ/ನವದೆಹಲಿ: 'ಪತ್ರಾ ಚಾಲ್' ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖಂಡ, ಸಂಸದ ಸಂಜಯ್ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ವಲಯ ಕಚೇರಿಯಲ್ಲಿ 16 ಗಂಟೆಗಳ ಕಾಲ ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆ.

ಸೋಮವಾರ ಮಧ್ಯರಾತ್ರಿ 12:05 ಗಂಟೆಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಅವರು ತನಿಖೆಗೆ ಸಹಕರಿಸದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಬಳಿಕ ಜಾರಿ ನಿರ್ದೇಶನಾಲಯವು ತನ್ನ ಕಸ್ಟಡಿಗೆ ಪಡೆಯಲಿದೆ ಎಂದು ತಿಳಿದು ಬಂದಿದೆ.

  • Mumbai | Sanjay Raut has been arrested. BJP is afraid of him and got him arrested. They haven't given us any document (regarding his arrest). He has been framed. He will be produced in court tomorrow at 11.30am: Sunil Raut, Sanjay Raut's brother pic.twitter.com/1XXJoE3KCQ

    — ANI (@ANI) July 31, 2022 " class="align-text-top noRightClick twitterSection" data=" ">

ಇಡಿ ತಂಡ ಭಾನುವಾರ ಮುಂಬೈನ ಭಾಂಡೂಪ್ ಪ್ರದೇಶದಲ್ಲಿನ ಅವರ ನಿವಾಸಕ್ಕೆ ತೆರಳಿ ಶೋಧ ನಡೆಸಿದರು. ಅಲ್ಲಿ ರಾವುತ್ ಅವರನ್ನು ಪ್ರಶ್ನಿಸಿ ಸಂಜೆಯ ವೇಳೆಗೆ ಏಜೆನ್ಸಿಯ ಸ್ಥಳೀಯ ಕಚೇರಿಯಲ್ಲಿ ವಿಚಾರಣೆಗಾಗಿ ಕರೆದಿದ್ದರು. ಇಡಿ ಕಚೇರಿಗೆ ಪ್ರವೇಶಿಸುವ ಮೊದಲು, ರಾವುತ್ ಅವರು ಫೆಡರಲ್ ಏಜೆನ್ಸಿಯ ಕ್ರಮವು ಶಿವಸೇನೆ ಮತ್ತು ಮಹಾರಾಷ್ಟ್ರವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ಗುರಿಯನ್ನು ಹೊಂದಿದೆ ಮತ್ತು ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದ್ದರು.

ಜು.1ರಂದು ರಾವತ್ ಅವರನ್ನು ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದ ಇಡಿ ಈ ಸಂದರ್ಭದಲ್ಲಿ ಅವರ ಹೇಳಿಕೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(ಪಿಎಂಎಲ್‍ಎ) ಕ್ರಿಮಿನಲ್ ಸೆಕ್ಷನ್‍ಗಳ ಅಡಿ ದಾಖಲಿಸಿಕೊಂಡಿತ್ತು. ಕಳೆದ ಏಪ್ರಿಲ್‍ನಲ್ಲಿ, ಜಾರಿ ನಿರ್ದೇಶನಾಲಯವು ತನ್ನ ತನಿಖೆಯ ಭಾಗವಾಗಿ ರಾವುತ್ ಅವರ ಪತ್ನಿ ವರ್ಷಾ ರಾವುತ್ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಲಗತ್ತಿಸಲಾದ ಆಸ್ತಿಗಳು ಸಂಜಯ್ ರಾವುತ್ ಅವರ ಸಹಾಯಕ ಮತ್ತು ಗುರು ಆಶಿಶ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ಮಾಜಿ ನಿರ್ದೇಶಕ ಪ್ರವೀಣ್ ಎಂ ರಾವುತ್ ಅವರು ಪಾಲ್ಘರ್, ಸಫಲೆ (ಪಾಲ್ಘರ್‌ನ ಪಟ್ಟಣ) ಮತ್ತು ಪಾದ್ಘಾ (ಥಾಣೆ ಜಿಲ್ಲೆಯಲ್ಲಿ) ಹೊಂದಿರುವ ಜಮೀನಿನ ರೂಪದಲ್ಲಿವೆ.

ಈ ಆಸ್ತಿಗಳು ಮುಂಬೈನ ಉಪನಗರ ದಾದರ್‌ನಲ್ಲಿ ವರ್ಷಾ ರಾವುತ್ ಹೊಂದಿರುವ ಫ್ಲಾಟ್ ಮತ್ತು ಅಲಿಬಾಗ್‌ನ ಕಿಹಿಮ್ ಬೀಚ್‌ನಲ್ಲಿರುವ ಎಂಟು ಪ್ಲಾಟ್‌ಗಳನ್ನು ವರ್ಷಾ ರಾವುತ್ ಮತ್ತು ಸಂಜಯ್ ರಾವುತ್ ಅವರ "ಆಪ್ತ ಸಹಚರ" ಸುಜಿತ್ ಪಾಟ್ಕರ್ ಅವರ ಪತ್ನಿ ಸ್ವಪ್ನಾ ಪಾಟ್ಕರ್ ಜಂಟಿಯಾಗಿ ಹೊಂದಿದ್ದಾರೆ ಎಂದು ಇಡಿ ತಿಳಿಸಿದೆ.

ಏನಿದು 'ಪತ್ರಾ ಚಾಲ್' ಭೂ ಹಗರಣ: ಮುಂಬೈನ ಗೋರೆಗಾಂವ್‌ನಲ್ಲಿರುವ ಸಿದ್ಧಾರ್ಥ್ ನಗರ, ಇದನ್ನು ಪತ್ರಾ ಚಾಲ್ ಎಂದೂ ಕರೆಯುತ್ತಾರೆ. ಇದು 47 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದೆ. ಪತ್ರಾ ಚಾಲ್‌ನ ಪುನರಾಭಿವೃದ್ಧಿಯಲ್ಲಿನ ರಿಗ್ಗಿಂಗ್ ಕುರಿತು ಇಡಿ ತನಿಖೆ ನಡೆಸುತ್ತಿದೆ. 2008 ರಲ್ಲಿ, ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ಪತ್ರಾ ಚಾಲ್‌ನ ಪುನರಾಭಿವೃದ್ಧಿಯ ಕೆಲಸವನ್ನು ಪ್ರಾರಂಭಿಸಿತು. ಇದು 672 ಬಾಡಿಗೆದಾರರನ್ನು ಹೊಂದಿತ್ತು. ಪುನರಾಭಿವೃದ್ಧಿಯ ಗುತ್ತಿಗೆಯನ್ನು ಗುರು ಆಶಿಶ್ ಕನ್ಸ್ಟ್ರಕ್ಷನ್ ಲಿಮಿಟೆಡ್‌ಗೆ ನೀಡಲಾಯಿತು.

14 ವರ್ಷಗಳ ನಂತರವೂ ಬಾಡಿಗೆದಾರರು ತಮ್ಮ ಮನೆಗಳನ್ನು ಮರಳಿ ಪಡೆಯಲು ಕಾಯುತ್ತಿದ್ದಾರೆ. ಈ ಜಾಗವನ್ನು ಫ್ಲ್ಯಾಟ್‌ ನಿರ್ಮಿಸದೆ ಒಂಬತ್ತು ಬಿಲ್ಡರ್‌ಗಳಿಗೆ 901.79 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ಈ ಮೂಲಕ ನಿರ್ಮಾಣ ಸಂಸ್ಥೆ ಅಕ್ರಮವಾಗಿ 1,034.79 ಕೋಟಿ ರೂ. ಗಳಿಸಿದೆ. ಈ ವಿಷಯದಲ್ಲಿ ಅಂದಿನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರವನ್ನು ತೀವ್ರವಾಗಿ ಟೀಕಿಸಿದರು. ಇದಕ್ಕೆ ಕಾರಣರಾದ ಕಾರ್ಯಪಾಲಕ ಇಂಜಿನಿಯರ್‌ ಅವರನ್ನು ನಂತರ ಅಮಾನತುಗೊಳಿಸಲಾಗಿತ್ತು.

ಇದನ್ನೂ ಓದಿ: ಸಂಜಯ್ ರಾವತ್ ಮೇಲೆ ದಾಳಿ.. ಶಿವಸೇನಾ ವಕ್ತಾರ ಇಡಿ ವಶಕ್ಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.