ನವದೆಹಲಿ: 325 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ 'ಶಿನಾಗೊ ಪ್ಲಾಂಟೇಶನ್ ಪ್ರೈವೇಟ್ ಲಿಮಿಟೆಡ್'ನ ಇಬ್ಬರು ನಿರ್ದೇಶಕರಾದ ಹಿತೇಶ್ ಪಟೇಲ್ ಮತ್ತು ಸುರೇಶ್ ಎನ್ ಪಟೇಲ್ ಅವರನ್ನು ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ ಶನಿವಾರ ತಿಳಿಸಿದೆ.
ತಮಿಳುನಾಡಿನಲ್ಲಿರುವ ಸುಮಾರು 20 ಘಟಕಗಳ ಜಾಲವನ್ನು ಬಳಸಿಕೊಂಡು ಈ ಕಂಪನಿಯ ಇಬ್ಬರು ನಿರ್ದೇಶಕರನ್ನು ಪಿಎಂಎಲ್‌ಎ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಧಾರವಾಗಿ ನೀಡಲಾದ ಆಸ್ತಿಗಳ ಮೌಲ್ಯವನ್ನು ಆಧರಿಸಿ ಬಂಧಿತ ಆರೋಪಿಗಳು ಈ ಹಿಂದಿನ ಕಾರ್ಪೊರೇಷನ್ ಬ್ಯಾಂಕ್‌ನಿಂದ (ಪ್ರಸ್ತುತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ) ಸಾಲವನ್ನು ಪಡೆದುಕೊಂಡಿದ್ದಾರೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ತನಿಖೆ ವೇಳೆ, ಲೆಟರ್ ಆಫ್ ಕ್ರೆಡಿಟ್ (ಎಲ್ಸಿ) ಮತ್ತು ನಗದು ಕ್ರೆಡಿಟ್ (ಸಿಸಿ) ಮಿತಿಗಳು ಅಥವಾ ಕೃಷಿ ಅವಧಿಯ ಸಾಲಗಳ ರೂಪದಲ್ಲಿ ವಿವಿಧ ವ್ಯಕ್ತಿಗಳು ಅಥವಾ ಗ್ರೂಪ್ಸ್ಗಳಿಂದ ಪಡೆದ ಹಣವನ್ನು ಗುಂಪು ಘಟಕಗಳ ಮೂಲಕ ವರ್ಗಾಯಿಸಲಾಗಿದೆ ಎಂದು ಇಡಿ ಅಧಿಕಾರಿ ಹೇಳಿದ್ದಾರೆ.
ಒಂದು ದಿನದ ನ್ಯಾಯಾಂಗ ಬಂಧನದ ನಂತರ, ವಿಶೇಷ ನ್ಯಾಯಾಲಯವು ಶುಕ್ರವಾರ ಆರೋಪಿಗಳನ್ನು 10 ದಿನಗಳ ಕಾಲ ಇಡಿ ಕಸ್ಟಡಿಗೆ ವಿಧಿಸಿದೆ ಎಂದು ಇಡಿ ತಿಳಿಸಿದೆ.
ಇದನ್ನೂ ಓದಿ:ರಾಕೇಶ್ ಟಿಕಾಯತ್ಗೆ ಕೊಲೆ ಬೆದರಿಕೆ: ಟೀ ಮಾರಾಟಗಾರನ ಬಂಧನ, ಬಿಡುಗಡೆ