ETV Bharat / bharat

ನಟಿ ಮನೆಯಲ್ಲಿ ಕೋಟಿ - ಕೋಟಿ ಹಣ ಜಪ್ತಿ: ಇಡಿಯಿಂದ ಅರ್ಪಿತಾ ಮುಖರ್ಜಿ ಬಂಧನ

ಸಚಿವ ಪಾರ್ಥ ಚಟರ್ಜಿ ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ವಸತಿ ಆವರಣದಲ್ಲಿ ಇಡಿ ಸುಮಾರು 20 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದು, ಇದರ ಬೆನ್ನಲ್ಲೇ ಅವರ ಬಂಧನ ಮಾಡಲಾಗಿದೆ.

ED arrests Arpita Mukherjee
ED arrests Arpita Mukherjee
author img

By

Published : Jul 23, 2022, 4:41 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಶಿಕ್ಷಕರ ನೇಮಕಾತಿ ಹಗರಣದ (SSC scam) ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ, ನಟಿ ಅರ್ಪಿತಾ ಮುಖರ್ಜಿ ಅವರ ಬಂಧನ ಮಾಡಲಾಗಿದೆ. ನಿನ್ನೆ ಇಡಿ ಅಧಿಕಾರಿಗಳು ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಿ ತನಿಖೆ ನಡೆಸಿ ಅರ್ಪಿತಾ ಮನೆಯಲ್ಲಿ 20 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಕೈಗಾರಿಕೆ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಅವನ್ನ ಬಂಧನ ಮಾಡಲಾಗಿದೆ. ಇದರ ಬೆನ್ನಲ್ಲೇ ಅವರ ಆಪ್ತೆ ಅರ್ಪಿತಾ ಅವರನ್ನು ಬಂಧನ ಮಾಡಿದ್ದಾರೆ. ಜೊತೆಗೆ ಮಹತ್ವದ ದಾಖಲೆ ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: WB SSC scam.. ನೇಮಕಾತಿ ಹಗರಣ, ಸಚಿವ ಪಾರ್ಥ ಚಟರ್ಜಿ ಬಂಧನ

ಜಾರಿ ನಿರ್ದೇಶನಾಲಯದ ಮಾಹಿತಿ ಪ್ರಕಾರ, ಅರ್ಪಿತಾ ಮನೆಯಲ್ಲಿ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಕೆಲವೊಂದು ಮಹತ್ವದ ದಾಖಲೆಗಳು ಸಿಕ್ಕಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಳಗ್ಗೆಯಿಂದ ಪಾರ್ಥ ಚಟರ್ಜಿ ಅವರನ್ನ ವಿಚಾರಣೆಗೊಳಪಡಿಸಿತ್ತು. ಇದರ ಬೆನ್ನಲ್ಲೇ ಅರ್ಪಿತಾ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನಲ್ಲೇ ಅವರ ಅಪಾರ್ಟ್​ಮೆಂಟ್ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಚಿನ್ನಾಭರಣ ಹಾಗೂ 20 ಕೋಟಿ ರೂ. ನಗದು ಸಿಕ್ಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.