ETV Bharat / bharat

ಸಿಎಂ ಮಮತಾ ಬ್ಯಾನರ್ಜಿ ಆಪ್ತನ ಮನೆ, ಕಚೇರಿಗಳ ಮೇಲೆ ಮುಗಿಬಿದ್ದ ಐಟಿ, ಇಡಿ - Etv Bharat Kannada

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಪ್ತ ಎನ್ನಲಾಗುತ್ತಿರುವ ಉದ್ಯಮಿ ಮತ್ತು ಬೆಂಗಾಲಿಯ ಖಾಸಗಿ ಸುದ್ದಿ ವಾಹಿನಿಯ ಸಿಇಒ ಕೌಸ್ತವ್​ ರಾಯ್​ ಅವರಿಗೆ ಐಟಿ ಮತ್ತು ಇಡಿ ಶಾಕ್​ ನೀಡಿದೆ.

ED and IT raids offices of TV channel head close to Mamata Banerjee
ಸಿಎಂ ಮಮತಾ ಆಪ್ತನಾದ ಸುದ್ದಿ ವಾಹಿನಿ ಸಿಇಓಗೆ ಐಟಿ - ಇಡಿ ಶಾಕ್​
author img

By

Published : Aug 16, 2022, 9:25 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್​ ಅಧ್ಯಕ್ಷೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಆಪ್ತ ಎನ್ನಲಾಗುತ್ತಿರುವ ಉದ್ಯಮಿ ಮತ್ತು ಬೆಂಗಾಲಿಯ ಖಾಸಗಿ ಸುದ್ದಿ ವಾಹಿನಿಯ ಸಿಇಒ ಕೌಸ್ತವ್​ ರಾಯ್​ ಅವರ ಕಚೇರಿ ಮತ್ತು ಮನೆಯ ಮೇಲೆ ಆದಾಯ ತೆರಿಗೆ (ಐಟಿ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಇಡಿ ಮತ್ತು ಐಟಿ ಅಧಿಕಾರಿಗಳ ತಂಡ ಏಕಾಏಕಕ್ಕೆ ಈ ದಾಳಿ ಮಾಡಿದೆ. ಆದರೆ, ಇದಕ್ಕೆ ಕಾರಣವೇನು ಎಂಬುವುದು ಇನ್ನೂ ಗೊತ್ತಾಗಿಲ್ಲ. ಈ ಬಗ್ಗೆ ಕೌಸ್ತವ್​ ರಾಯ್​ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಂಪ್ಯೂಟರ್, ಸಾಫ್ಟ್‌ವೇರ್ ಮತ್ತು ಮಾಧ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ರಾಯ್​ ಇದೇ ವರ್ಷದ ಮೇ ತಿಂಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದರು. ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತಂತೆ ಸರ್ಕಾರ ಯೋಜನೆ ಮತ್ತು ಮೇಲ್ವಿಚಾರಣೆಗಾಗಿ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿಯ ಅಧ್ಯಕ್ಷರನ್ನಾಗಿ ರಾಯ್​ ಅವರನ್ನು ನೇಮಕ ಮಾಡಿದ್ದು, ಚರ್ಚೆಗೆ ಗ್ರಾಸವಾಗಿತ್ತು. ಇದಾದ ನಂತರ ಆಗಿನ ರಾಜ್ಯಪಾಲ ಜಗದೀಶ್ ಧನಕರ್​ ಅವರು ರಾಯ್​ರನ್ನು ವಜಾ ಮಾಡಿದ್ದರು.

ಆರ್‌ಪಿ ಇನ್ಫೋಸಿಸ್ಟಮ್ಸ್‌ನ ನಿರ್ದೇಶಕರಾಗಿರುವ ರಾಯ್​ರನ್ನು 2018ರ ಮಾರ್ಚ್​ನಲ್ಲಿ ಸಿಬಿಐ ಬಂಧಿಸಿತ್ತು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್‌ಗಳಿಗೆ 515 ಕೋಟಿ ರೂ. ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು.

ಇನ್ನೊಂದೆಡೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಯ್ ಒಡೆತನದ ಬಂಗಾಳಿ ಚಾನೆಲ್​ಗೆ ಕೇಂದ್ರ ಸರ್ಕಾರ ನೋಟಿಸ್​ ಜಾರಿ ಮಾಡಿತ್ತು. ಗೃಹ ವ್ಯವಹಾರಗಳ ಸಚಿವಾಲಯದ ಭದ್ರತಾ ಕ್ಲಿಯರೆನ್ಸ್ ನಿರಾಕರಣೆಯನ್ನು ಉಲ್ಲೇಖಿಸಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಪರವಾನಗಿ ರದ್ದುಗೊಳಿಸುವ ನೋಟಿಸ್​ ನೀಡಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿಹಾರ ಸಂಪುಟ ಸೇರಿದ 31 ಸಚಿವರು, ಆರ್​​ಜೆಡಿಗೆ ಸಿಂಹಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.