ETV Bharat / bharat

ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪನ: ದೆಹಲಿ, ನೋಯ್ಡಾದಲ್ಲೂ ನಡುಗಿದ ಭೂಮಿ - ನೋಯ್ಡಾದಲ್ಲೂ ಭೂಕಂಪನದ ಅನುಭವ

ನೆರೆ ದೇಶ ನೇಪಾಳದಲ್ಲಿಂದು ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪನ ಸಂಭವಿಸಿದೆ. ಇದರ ನಂತರ ದೆಹಲಿ-ಎನ್‌ಸಿಆರ್‌, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡದಲ್ಲೂ ಭೂಮಿ ನಡುಗಿದೆ. ಗಾಬರಿಗೊಂಡ ಜನತೆ ಕಟ್ಟಡಗಳಿಂದ ಹೊರಗಡೆ ಓಡಿ ಬಂದಿದ್ದಾರೆ.

earthquake-tremors-felt-across-delhi-ncr
ನೇಪಾಳದಲ್ಲಿ 6.2 ತೀವ್ರತೆಯ ಭೂಕಂಪನ: ದೆಹಲಿ, ನೋಯ್ಡಾದಲ್ಲೂ ನಡುಗಿದ ಭೂಮಿ
author img

By ETV Bharat Karnataka Team

Published : Oct 3, 2023, 3:21 PM IST

Updated : Oct 3, 2023, 4:23 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಭೂ ಕಂಪನ ಸಂಭವಿಸಿದೆ. ದೆಹಲಿ-ಎನ್‌ಸಿಆರ್‌, ಉತ್ತರ ಪ್ರದೇಶದ ನೋಯ್ಡಾದಲ್ಲಿ ಜನರಿಗೆ ಕಂಪನದ ಅನುಭವವಾಗಿದೆ. ನೋಯ್ಡಾ ಸೆಕ್ಟರ್ 75ರ ಹಲವೆಡೆ ಕಂಪಿಸಿದ ದೃಶ್ಯಗಳು ದಾಖಲಾಗಿವೆ. ನೇಪಾಳದಲ್ಲಿ 5 ಕಿ.ಮೀ ಆಳದಲ್ಲಿ ಪ್ರಬಲ 6.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಇಂದು ಎರಡು ಭೂಕಂಪನಗಳು ಜರುಗಿವೆ. ಮಧ್ಯಾಹ್ನ 2.24ಕ್ಕೆ 10 ಕಿಲೋ ಮೀಟರ್​ ಆಳದಲ್ಲಿ ರಿಕ್ಟರ್​ ಮಾಪನದಲ್ಲಿ 4.6 ತೀವ್ರತೆಯೊಂದಿಗೆ ಮೊದಲ ಕಂಪನ ದಾಖಲಾಗಿದೆ. ಮತ್ತೊಂದು ಕಂಪನ ಮಧ್ಯಾಹ್ನ 2.51ರ ಸುಮಾರಿಗೆ ಸಂಭವಿಸಿತು. ಇದರ ತೀವ್ರತೆಯು ರಿಕ್ಟರ್​ ಮಾಪಕದಲ್ಲಿ 6.2ರಷ್ಟು ದಾಖಲಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

  • Hey Delhi people!

    We hope you all are safe. Please come out of your buildings to a safe spot, but do not panic.

    DO NOT USE ELEVATORS!

    For any emergency help, dial 112.#earthquake

    — Delhi Police (@DelhiPolice) October 3, 2023 " class="align-text-top noRightClick twitterSection" data=" ">

ಇದರ ಪರಿಣಾಮ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್​) ಸೇರಿದಂತೆ ಉತ್ತರ ಭಾರತದ ಹಲವೆಡೆ ಬಲವಾದ ಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಉಂಟಾದ ಪ್ರಬಲ ಕಂಪನದ ನಂತರ ಇಲ್ಲಿನ ಜನರಿಗೆ ಭೂಮಿ ನಡುಗಿರುವ ಅನುಭವ ಆಗಿದೆ. ಕಚೇರಿಗಳು ಹಾಗೂ ಎತ್ತರ ಕಟ್ಟಡಗಳಲ್ಲಿ ನೆಲೆಸಿದ್ದವರು ಹೊರಗಡೆ ಓಡಿ ಬಂದಿದ್ದಾರೆ. ಜನತೆ ಗಾಬರಿಯಾಗುವುದು ಬೇಡ ಎಂದು ಪೊಲೀಸರು ಮನವಿ ಮಾಡಿದರು.

  • #WATCH | Delhi | Union Health Minister Mansukh Mandaviya stepped out of Nirman Bhawan, along with others, as strong tremors hit different parts of north India. pic.twitter.com/8EbNFX4b46

    — ANI (@ANI) October 3, 2023 " class="align-text-top noRightClick twitterSection" data=" ">

''ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ನಾವು ಆಶಿಸುತ್ತೇವೆ. ದಯವಿಟ್ಟು ನಿಮ್ಮ ಕಟ್ಟಡಗಳಿಂದ ಸುರಕ್ಷಿತ ಸ್ಥಳಗಳಿಗೆ ಬನ್ನಿ. ಯಾವುದೇ ಗಾಬರಿಗೆ ಒಳಗಾಡಬೇಡಿ. ಎಲಿವೇಟರ್‌ಗಳನ್ನು ಬಳಕೆ ಮಾಡಬೇಡಿ (DO NOT USE ELEVATORS!). ಯಾವುದೇ ತುರ್ತು ಪರಿಸ್ಥಿತಿಗೆ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ'' ಎಂದು ದೆಹಲಿ ಪೊಲೀಸರು ಸಾಮಾಜಿಕ ಜಾಲತಾಣದ 'ಎಕ್ಸ್​'ನಲ್ಲಿ ಪೋಸ್ಟ್​ ಮಾಡಿದ್ದಾರೆ. ಮತ್ತೊಂದೆಡೆ, ಉತ್ತರ ಭಾರತದ ಚಂಡೀಗಢ ಹಾಗೂ ಜೈಪುರ ಸೇರಿದಂತೆ ಇತರ ಪ್ರದೇಶಗಳಲ್ಲೂ ಕಂಪನದ ಅನುಭವಾಗಿದೆ. ಭೂಮಿ ನಡುಗಿದ ನಂತರ ಯಾವುದೇ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಜೈಪುರದ ಪೊಲೀಸ್​ ಕಂಟ್ರೋಲ್​ ರೂಮ್​ ತಿಳಿಸಿದೆ.

ಭವನದಿಂದ ಹೊರಬಂದ ಆರೋಗ್ಯ ಸಚಿವ: ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಪ್ರಬಲ ಕಂಪನದ ಅನುಭವವಾದ ಕಾರಣ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಹ ತಾವಿದ್ದ ಕಟ್ಟಡದಿಂದ ಹೊರಬಂದರು. ಈ ಸಂದರ್ಭದಲ್ಲಿ ದೆಹಲಿಯ ನಿರ್ಮಾಣ ಭವನದಲ್ಲಿದ್ದ ಸಚಿವರು, ಭೂಮಿ ನಡುಗಿದ ಕೂಡಲೇ ಅಧಿಕಾರಿಗಳೊಂದಿಗೆ ಹೊರಗೆ ಆಗಮಿಸಿದ್ದಾರೆ.

ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್​ನಲ್ಲೂ ಸಚಿವಾಲಯದ ಕಟ್ಟಡದಿಂದ ಅಧಿಕಾರಿಗಳು ದೌಡಾಯಿಸಿದ್ದಾರೆ. ಉತ್ತರ ಪ್ರದೇಶದ ರಾಜಧಾನಿ ಲಖನೌದಲ್ಲೂ ಜನತೆ ತಮ್ಮ ಕಟ್ಟಡಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಇದನ್ನೂ ಓದಿ: ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ 7 ರೋಗಿಗಳು ಸಾವು: ಎರಡು ದಿನದಲ್ಲಿ 31ಕ್ಕೆ ಏರಿಕೆಯಾದ ಮೃತರ ಸಂಖ್ಯೆ!

Last Updated : Oct 3, 2023, 4:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.